Karnataka Times
Trending Stories, Viral News, Gossips & Everything in Kannada

Kisan Mandhan Yojana: ರೈತರಿಗೆ ಗುಡ್ ನ್ಯೂಸ್, ಕೇಂದ್ರ ಸರಕಾರದ ಈ ಹೊಸ ಯೋಜನೆಯಲ್ಲಿ ರೈತರಿಗೆ ಸಿಗುತ್ತೆ ಇಷ್ಟು ಹಣ

advertisement

ರೈತರು ನಮ್ಮ ದೇಶದ ಮುಖ್ಯ ಅಂಗ, ರೈತರು ದುಡಿದ್ರೆ ಮಾತ್ರ ನಾವು ಬದುಕು ಸಾಗಿಸಬಹುದು. ಹಾಗಾಗಿ ರೈತರ ಏಳಿಗೆಗಾಗಿ ಸರಕಾರ ಹಲವು ರೀತಿಯ ಯೋಜನೆಯನ್ನು ಜಾರಿಗೆ ತರುತ್ತಲೆ ಇದೆ. ರೈತರಿಗಾಗಿ ವಿವಿಧ ರೀತಿಯ ಪ್ರೋತ್ಸಾಹ ನೀಡ್ತಾ ಇದ್ದು ಆರ್ಥಿಕ ಸಹಾಯ ಕೂಡ ಒದಗಿಸುತ್ತಿದೆ. ಈ ಯೋಜನೆಗಳಲ್ಲಿ ಮುಖ್ಯವಾಗಿ ಪ್ರಧಾನ ಮಂತ್ರಿ ಕಿಸಾನ್ ಮಾನ್ಧನ್ ಯೋಜನೆ (Kisan Mandhan Yojana) ಕೂಡ ಒಂದಾಗಿದ್ದು ರೈತರು ಈ ಯೋಜನೆಯ ಮೂಲಕ ಪಿಂಚಣಿ ಲಾಭವನ್ನು ಗಳಿಸಬಹುದಾಗಿದೆ.

ಕಿಸಾನ್ ಮಾನ್ಧನ್ ಯೋಜನೆ

ಈ ಯೋಜನೆ ಮೂಲಕ ರೈತರು ಹಲವು‌ ರೀತಿಯ ಸೌಲಭ್ಯಗಳನ್ನು ಪಡೆಯಬಹುದಾಗಿದೆ. ಕೇಂದ್ರ ಸರ್ಕಾರವು ಈ ಯೋಜನೆಯನ್ನು 60 ವರ್ಷದ ನಂತರ ರೈತರಿಗಾಗಿ ಬಳಸಿಕೊಳ್ಳುವ ಯೋಜನೆ ಇದಾಗಿದೆ. ಈ ಮೂಲಕ, ರೈತರು 60 ವರ್ಷದ ನಂತರ ವಾರ್ಷಿಕವಾಗಿ 36 ಸಾವಿರ ರೂಪಾಯಿಯ ಪಿಂಚಣಿ ಹಣವನ್ನು ಪಡೆಯಬಹುದಾಗಿದೆ.

ಎಷ್ಟು ಠೇವಣಿ ಮಾಡಬೇಕು?

ವೃದ್ಧಾಪ್ಯದ ಸಮಯದಲ್ಲಿ ಬದುಕು ಕಟ್ಟಿಕೊಳ್ಳಲು ಕಷ್ಟ ಸಾಧ್ಯ. ಹಾಗಾಗಿ ವೃದ್ಧಾಪ್ಯದ ಸಮಯದಲ್ಲಿ ರೈತನು ಆರ್ಥಿಕವಾಗಿ ಕಷ್ಟ ಪಡಬೇಕಾಗುತ್ತದೆ. ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಕಿಸಾನ್ ಮಾನ್ಧನ್ ಯೋಜನೆಯು ಬಹಳಷ್ಟು ಸಹಾಯಕವಾಗಲಿದೆ.ಇದಕ್ಕಾಗಿ ರೈತರು ಮಾಸಿಕ ರೂ 55 ರಿಂದ 200 ರೂ.ವರೆಗೆ ಹೂಡಿಕೆ ಮಾಡಬೇಕಾಗುತ್ತದೆ.ಈ ಹಣವನ್ನು ನೇರವಾಗಿ ರೈತರ ಖಾತೆಗೆ ಬಿಡುಗಡೆ ಮಾಡಲಾಗುತ್ತದೆ.

advertisement

ಯಾರಿಗೆ ಸೌಲಭ್ಯ

ಕೇವಲ ಕೃಷಿಯನ್ನೇ ಅವಲಂಬಿಸಿರುವ ರೈತರಿಗೆ ಮಾತ್ರ ಈ ಯೋಜನೆಯ ಲಾಭ ಸಿಗಲಿದೆ. ಆದರೆ, ನಿವೃತ್ತ ಸರ್ಕಾರಿ ನೌಕರರು ಈ ಯೋಜನೆಗೆ ಅರ್ಜಿ ಸಲ್ಲಿಸುವಂತೆ ಇಲ್ಲ.ರೈತರ ವೃದ್ದಾಪ್ಯ ಕ್ಕೆ ಸಹಾಯವಾಗುವ ನಿಟ್ಟಿನಲ್ಲಿ ಸರ್ಕಾರ ಈ ಯೋಜನೆ ಆರಂಭಿಸಿದ್ದು 18 ವರ್ಷದಿಂದ 40 ವರ್ಷದವರೆಗಿನ ಯಾವುದೇ ರೈತರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.

ಈ ಯೋಜನೆಗೆ ಅರ್ಜಿ ಸಲ್ಲಿಸಲು ದಾಖಲೆ ಯಾವುದೆಲ್ಲ ಬೇಕು?

  • ಆಧಾರ್ ಕಾರ್ಡ್
  • ಪ್ರಸ್ತುತ ಇರುವ ಮೊಬೈಲ್ ಸಂಖ್ಯೆ
  • ಫೋಟೋ
  • ಆದಾಯ ಪ್ರಮಾಣಪತ್ರ
  • ಬ್ಯಾಂಕ್ ಖಾತೆ ಮಾಹಿತಿ

advertisement

Leave A Reply

Your email address will not be published.