Karnataka Times
Trending Stories, Viral News, Gossips & Everything in Kannada

Mahila Samman Yojana: ಮಹಿಳೆಯರು ಸರ್ಕಾರದ ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಪಡೆಯುವಿರಿ.

advertisement

ಮಹಿಳೆಯರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡಲು ಹುಟ್ಟಿಕೊಂಡ ಅನೇಕ ಯೋಜನೆಯ ಸಾಲಿನಲ್ಲಿ ಮಹಿಳಾ ಸಮ್ಮಾನ್ ಯೋಜನೆ (Mahila Samman Yojana) ಯನ್ನು ಕಾಣಬಹುದು. ಎರಡು ವರ್ಷದ ಅವಧಿಗೆ ಹಣ ಠೇವಣಿ ಇಡಲು ಅವಕಾಶ ಇದ್ದು ನೀವು ಮಾಡುವ ಹೂಡಿಕೆಯ ಮೊತ್ತದ ಆಧಾರದಲ್ಲಿ ಲಾಭದ ಲೆಕ್ಕಾಚಾರ ತಿಳಿಯಬಹುದು. 50 ಸಾವಿರ ಹಾಗೂ ಎರಡು ಲಕ್ಷ ಠೇವಣಿ ಇಡಲು ಅವಕಾಶ ಇದ್ದು, ಈ ಯೋಜನೆ ಮಹಿಳೆಯರಿಗೆ ಉತ್ತಮ ಲಾಭಾಂಶ ನೀಡಲಿದ್ದು ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ವಿನಾಯಿತಿ ಸೌಲಭ್ಯ

ಎರಡು ವರ್ಷದ ಅವಧಿಗೆ ನೀವು ಠೇವಣಿ ಇಟ್ಟರೆ ಬಳಿಕ ಬಡ್ಡಿ ಸಹಿತ ಅಸಲು ಹಣ ವಾಪಾಸ್ಸು ಸಿಗಲಿದೆ. 7.5% ಬಡ್ಡಿದರ ಈ ಯೋಜನೆ ಅಡಿಯಲ್ಲಿ ಸಿಗಲಿದ್ದು ನಿಮ್ಮ ಠೇವಣಿ ಮೊತ್ತದಂತೆ ಲಾಭ ಕೂಡ ಹೆಚ್ಚು ಕಡಿಮೆ ಆಗಲಿದೆ. ಭಾರತೀಯ ಆದಾಯ ತೆರಿಗೆ ಕಾಯ್ದೆ 80ಸಿ ಅಡಿಯಲ್ಲಿ ಸಣ್ಣ ಉಳಿತಾಯ ಯೋಜನೆಯ ಅಡಿಯಲ್ಲಿ ಪೂರ್ಣ ತೆರಿಗೆ ವಿನಾಯಿತಿಗೆ ಅರ್ಹರಾಗಿರುತ್ತಾರೆ. ಹಾಗಾಗಿ ಈ ಬಗ್ಗೆ ನೀವು ತಿಳಿಯಲೇ ಬೇಕಾಗಿದ್ದು ಈ ಮಾಹಿತಿ ಸಂಪೂರ್ಣ ಓದಿ.

ಈ ರೀತಿ ಲಾಭ ಸಿಗಲಿದೆ

advertisement

  • ಈ ಯೋಜನೆಯ ಅಡಿಯಲ್ಲಿ ನೀವು 50 ಸಾವಿರ ಮೊತ್ತ ಹೂಡಿಕೆ ಮಾಡಿದರೆ ಎರಡು ವರ್ಷದ ಬಳಿಕ 7.5% ಬಡ್ಡಿದರದ ನೀತಿ ಪ್ರಕಾರ 8,011ರೂಪಾಯಿ ಮೊತ್ತ ಪಡೆಯಲಿದ್ದೀರಿ ಒಟ್ಟು ನಿಮಗೆ ಅಸಲು ಮೊತ್ತ ಸೇರಿ 58,011ರೂಪಾಯಿ ಸಿಗಲಿದೆ.
  • ಒಂದು ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ಅದಕ್ಕೆ ಬಡ್ಡಿಯಾಗಿ 16 ಸಾವಿರದಷ್ಟು ಸಿಗಲಿದೆ. ಒಟ್ಟು 1,16,022 ರೂಪಾಯಿ ಸಿಗಲಿದೆ.
  • 1.50ಲಕ್ಷ ಹೂಡಿಕೆ ಮಾಡಿದರೆ 1,74,033ರೂ.ಲಾಭ ಸಿಗಲಿದೆ. ಅಂದರೆ ಒಟ್ಟು ಅಸಲು ಮೊತ್ತ ಸೇರಿ 2,32,044 ರೂಪಾಯಿ ನಿಮಗೆ ಸಿಗಲಿದೆ.

ಈ ದಾಖಲಾತಿ ಅಗತ್ಯ

ಈ ಯೋಜನೆ ಅಡಿಯಲ್ಲಿ 18ವರ್ಷ ಒಳಗಿನವರು ಕೂಡ ಹೂಡಿಕೆ ಮಾಡಬಹುದು ಆದರೆ ಅದಕ್ಕೆ ತಮ್ಮ ಪೋಷಕರ ಖಾತೆ ತೆರೆಯಬೇಕು. ಇದನ್ನು ಮಾಡಲು ಅಂಚೆ ಇಲಾಖೆಯ ಫಾರ್ಮ್ ಒಂದನ್ನು ಭರ್ತಿ ಮಾಡಬೇಕು. ಆಧಾರ್, ಪಾನ್ ಮತ್ತು ಫೋಟೋ ಮತ್ತು KYC ಮಾಹಿತಿ ಅಗತ್ಯವಾಗಿದೆ.
ಹೂಡಿಕೆ ಮಾಡಿದ್ದ ಬಳಿಕ ನಿಮಗೆ ಹಣದ ಆವಶ್ಯಕತೆ ಬಿದ್ದರೆ ಅಂತಹ ಸಂದರ್ಭದಲ್ಲಿ ನಿಮ್ಮ ಹಣ ಹಿಂಪಡೆಯಲು ಸಹ ಇಲ್ಲಿ ಅವಕಾಶ ಇದೆ. ಅಂದರೆ ನೀವು ಠೇವಣಿ ಮಾಡಿದ್ದ ಹಣದಲ್ಲಿ 40% ಹಿಂಪಡೆಯಬಹುದು. ಈ ಯೋಜನೆಗೆ ಮಹಿಳೆಯರು ಅಂಚೆ ಕಚೇರಿ ಅಥವಾ ಬ್ಯಾಂಕ್ ನಲ್ಲಿ ಖಾತೆ ಹೊಂದಿರಬೇಕು.

ಮರಣ ಹೊಂದಿದರೆ ಏನಾಗುತ್ತದೆ

ಮಹಿಳಾ ಸಮ್ಮಾನ್ ಯೋಜನೆಯಲ್ಲಿ ಹಣ ಇಟ್ಟವರು ಸಾವಿಗೀಡಾದರೆ, ಅಪಘಾತವಾದರೆ ಅಥವಾ ಅನಾರೋಗ್ಯ ಪೀಡಿತವಾದರೆ ಆಗ ಖಾತೆ ಕ್ಲೋಸ್ ಮಾಡಬಹುದು.ಆಗ 2%ಬಡ್ಡಿದರ ಕಡಿಮೆ ನೀಡುವ ಮೂಲಕ ಹಣ ನಾಮಿನಿ ಅವರಿಗೆ ನೀಡಲಾಗುವುದು. ಅಂದರೆ ಅವರ ಒಟ್ಟು ಮೊತ್ತಕ್ಕೆ 5.5% ಬಡ್ಡಿದರ ವಿಧಿಸಲಾಗುವುದು.

advertisement

Leave A Reply

Your email address will not be published.