Karnataka Times
Trending Stories, Viral News, Gossips & Everything in Kannada

Ration Card: ರೇಷನ್ ಕಾರ್ಡ್ ವಿಚಾರದಲ್ಲಿ ಬಹು ಮುಖ್ಯ ತೀರ್ಪನ್ನು ಘೋಷಿಸಿದ ಹೈಕೋರ್ಟ್! ಎಲ್ಲರಿಗೂ ಕಹಿಸುದ್ದಿ

advertisement

ಭಾರತ ಸರ್ಕಾರ ನಮಗೆಲ್ಲರಿಗೂ ತಿಳಿದಿರುವ ಹಾಗೆ ರೇಷನ್ ಕಾರ್ಡ್ (Ration Card) ಅನ್ನು ಕೇವಲ ಪಡಿತರ ನೀಡುವುದಕ್ಕೆ ಒಂದು ಗುರುತು ಪತ್ರದ ರೂಪದಲ್ಲಿ ಮಾತ್ರವಲ್ಲದೇ ಅದನ್ನ ಬೇರೆ ಬೇರೆ ಯೋಜನೆಗಳನ್ನು ಜನಸಾಮಾನ್ಯರವರೆಗೂ ಕೂಡ ತಲುಪಿಸುವ ಕಾರಣಕ್ಕಾಗಿ ಇದನ್ನ ಕ್ರಿಯೇಟ್ ಮಾಡಲಾಗಿದೆ ಎಂದು ಹೇಳಬಹುದಾಗಿದೆ.

WhatsApp Join Now
Telegram Join Now

ಇನ್ನು ಇದರಲ್ಲಿ ಕೂಡ ಆರ್ಥಿಕವಾಗಿ ಸಬಲರಾಗಿರುವಂತಹ ಕುಟುಂಬಗಳಿಗೆ ಎಪಿಎಲ್ ರೇಷನ್ ಕಾರ್ಡ್ (Ration Card) ಹಾಗೂ ಆರ್ಥಿಕವಾಗಿ ದುರ್ಬಲರಾಗಿರುವಂತಹ ಕುಟುಂಬದವರಿಗೆ ಬಿಪಿಎಲ್ ರೇಷನ್ ಕಾರ್ಡ್ ಅನ್ನು ವಿತರಣೆ ಮಾಡಲಾಗುತ್ತದೆ. ಆದರೆ ಇದರ ಬಗ್ಗೆ ಈಗ ಮತ್ತೊಂದು ವಿಚಾರವನ್ನು ಕೂಡ ನೀವು ತಿಳಿದುಕೊಳ್ಳಬೇಕಾಗಿರುವುದು ಅತ್ಯಂತ ಪ್ರಮುಖವಾಗಿದೆ.

ಇನ್ಮುಂದೆ ರೇಷನ್ ಕಾರ್ಡ್ ಅನ್ನು ಅಡ್ರೆಸ್ ಪ್ರೂಫ್ ರೀತಿಯಲ್ಲಿ ಬಳಸಿಕೊಳ್ಳುವ ಹಾಗಿಲ್ಲ:

 

Image Source: Tv9

 

advertisement

ಅಧಿಕೃತ ಸರ್ಕಾರಿ ದಾಖಲೆ ಎನ್ನುವ ಕಾರಣಕ್ಕಾಗಿ ರೇಶನ್ ಕಾರ್ಡ್ (Ration Card) ಅನ್ನು ಅಡ್ರೆಸ್ ಪ್ರೂಫ್ ರೂಪದಲ್ಲಿ ಕೂಡ ಬಳಸಿಕೊಳ್ಳಲಾಗುತ್ತಿತ್ತು ಆದರೆ ಇನ್ನು ಮುಂದೆ ಈ ರೀತಿ ಬಳಸಿಕೊಳ್ಳುವ ಹಾಗೆ ಇಲ್ಲ ಎನ್ನುವುದಾಗಿ ದೆಹಲಿ ಹೈಕೋರ್ಟ್ (High Court) ನ ಏಕ ಸದಸ್ಯ ನ್ಯಾಯಪೀಠ ತೀರ್ಪನ್ನು ನೀಡಿದೆ.

ದೆಹಲಿ ಹೈ ಕೋರ್ಟ್ ಹೇಳಿರುವ ಪ್ರಕಾರ ರೇಷನ್ ಕಾರ್ಡ್ (Ration Card) ಅನ್ನು ನ್ಯಾಯಬೆಲೆ ಅಂಗಡಿಗಳಲ್ಲಿ ಬೇಕಾಗಿರುವಂತಹ ಆಹಾರ ಪದಾರ್ಥಗಳನ್ನು ಪಡೆದುಕೊಳ್ಳುವುದಕ್ಕೆ ಬಳಸಿಕೊಳ್ಳಬಹುದಾಗಿದೆ ಆದರೆ ಅದನ್ನ ಅಧಿಕೃತವಾಗಿ ಅಡ್ರೆಸ್ ಪ್ರೂಫ್ ರೂಪದಲ್ಲಿ ಬಳಸಿಕೊಳ್ಳುವ ಹಾಗೆ ಇಲ್ಲ ಎನ್ನುವುದಾಗಿ ಸ್ಪಷ್ಟಪಡಿಸಿದೆ. ನ್ಯಾಯಾಧೀಶರು ತಿಳಿಸಿರುವ ಮಾಹಿತಿಯ ಪ್ರಕಾರ ರೇಷನ್ ಕಾರ್ಡ್ ಅನ್ನು ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರವನ್ನ ನ್ಯಾಯಯುತವಾದ ಬೆಲೆಯಲ್ಲಿ ಪಡೆದುಕೊಳ್ಳಲು ಬಳಸಿಕೊಳ್ಳಬಹುದಾಗಿದೆ ಎಂಬುದಾಗಿ ಹೇಳಿದ್ದಾರೆ.

 

Image Source: DNA India

 

ದೆಹಲಿಯ ಕಾಲೋನಿಗಳಲ್ಲಿ ಕೂಡ ಹೊಸ ಮನೆಯನ್ನು ಕಟ್ಟಿಕೊಳ್ಳುವುದಕ್ಕಾಗಿ ರೇಷನ್ ಕಾರ್ಡ್ (Ration Card) ಮೂಲಕ ಅರ್ಜಿ ಸಲ್ಲಿಸಲಾಗಿದ್ದು ಇದು ಈ ಪ್ರಕ್ರಿಯೆಯಲ್ಲಿ ಅಡ್ರೆಸ್ ಪ್ರೂಫ್ ರೂಪದಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ತನ್ನದಾಗಿ ಹೇಳಿದ್ದು ಇದಕ್ಕೆ DDA ಇಲಾಖೆ ಈ ರೀತಿ ಅರ್ಜಿ ಸಲ್ಲಿಸಿರುವ ಅಂತಹ ಜನರಿಗೆ ಕಾಲೋನಿಯಲ್ಲಿ ಮನೆ ಕಟ್ಟಲು ಪರ್ಯಾಯ ಮಾರ್ಗವನ್ನು ಅನುಸರಿಸುವಂತೆ ಹೇಳಲಾಗಿದೆ. ನಿಯಮಗಳ ಅಡಿಯಲ್ಲಿ ಕಟ್ಟಬೇಕಾಗಿರುವಂತಹ ಡೆಪಾಸಿಟ್ ಹಣವನ್ನು ಕಟ್ಟಿದ ನಂತರ ಉಳಿದ ಮುಂದಿನ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕು ಎನ್ನುವುದಾಗಿ ದೆಹಲಿ ಹೈಕೋರ್ಟ್ (High Court) ಈ ವಿಚಾರದ ಬಗ್ಗೆ ತನ್ನ ಅಭಿಪ್ರಾಯವನ್ನು ಬಹಿರಂಗಪಡಿಸಿದೆ.

ಹೀಗಾಗಿ ಪಡಿತರ ವಿತರಣೆಗಾಗಿ ಪ್ರಮುಖವಾಗಿ ಜಾರಿಗೆ ತಂದಿರುವಂತಹ ರೇಷನ್ ಕಾರ್ಡ್ ಅನ್ನು ಈ ರೀತಿ ಕೆಲಸಗಳಿಗೆ ಪ್ರಮುಖ ದಾಖಲೆ ಪತ್ರವನ್ನಾಗಿ ಉಪಯೋಗಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವಂತಹ ದೆಹಲಿ ಹೈಕೋರ್ಟ್ ನ ತೀರ್ಪನ್ನು ಪ್ರತಿಯೊಬ್ಬರು ಕೂಡ ಗಂಡನಿಗೆ ತೆಗೆದುಕೊಳ್ಳಬೇಕಾಗಿರುವುದು ಅತ್ಯಂತ ಅಗತ್ಯವಾಗಿದೆ.

advertisement

Leave A Reply

Your email address will not be published.