Karnataka Times
Trending Stories, Viral News, Gossips & Everything in Kannada

Janmitra: ಸರ್ಕಾರದ ಸೇವೆ ಮನೆ ಬಾಗಿಲಿಗೆ ಸಿಗಲು ಈ ಸುಲಭ ವಿಧಾನ ಅನುಸರಿಸಿ!

advertisement

ಸರಕಾರದ ಅನೇಕ ಸೌಲಭ್ಯ ಕ್ಲಪ್ತ ಸಮಯಕ್ಕೆ ಸಿಗುತ್ತಿಲ್ಲ, ಯೋಜನೆಯ ಮಾಹಿತಿ ಸರಿಯಾಗಿ ತಿಳಿಯುತ್ತಿಲ್ಲ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಸರಕಾರ ವಿನೂತನ ಕಾರ್ಯಕ್ರಮವನ್ನು ಪರಿಚಯಿಸಿತ್ತು. ಅದರನ್ವಯ ಜನಸಾಮಾನ್ಯರಿಗೆ ಗುಣಮಟ್ಟದ ಸರಕಾರಿ ಸೇವೆ ಸುಲಭಕ್ಕೆ ಲಭ್ಯವಾಗುವಂತೆ ಮಾಡಲು ಜನಮಿತ್ರ ಯೋಜನೆ ಪರಿಚಯಿಸಲಾಗಿದ್ದು ಅದರ ಕಾರ್ಯ ವೈಕರಿಯನ್ನು ಈಗ ಮತ್ತಷ್ಟು ಸರಳಗೊಳಿಸಲಾಗುತ್ತಿದ್ದು ಜನರಿಗೆ ಇದು ಬಹಳ ಉಪಯುಕ್ತ ಆಗಲಿದೆ.

ಹೊಸ ಕ್ರಮ ಆರಂಭ:

ಈಗ ಜನಮಿತ್ರ ಯೋಜನೆ (Janmitra Yojana) ಯಿಂದಾಗಿ ಸಮಯ, ಹಣ, ಪರಿಶ್ರಮ ಎಲ್ಲವೂ ಉಳಿತಾಯ ಆಗುವ ಜೊತೆಗೆ ನಿರುದ್ಯೋಗಿಗಳಿಗೂ ಉದ್ಯೋಗ ಅವಕಾಶ ಸಿಕ್ಕಂತಾಗುವುದು. ಸರಕಾರಿ ಇಲಾಖೆಗಳು ಸಂವಹನ ನಡೆಸುವ ವಿಧಾನ ಸರಳೀಕರಣ ಗೊಳಿಸುವ ಜೊತೆಗೆ ನಿರುದ್ಯೋಗಸ್ಥರಿಗೆ ಉದ್ಯೋಗ ಕಲ್ಪಿಸಲಾಗುವುದು. ಅದರೊಂದಿಗೆ ಸರಕಾರಿ ಸೌಲಭ್ಯ ಪಡೆವಲ್ಲಿ ಇರುವ ಮಧ್ಯಮ ವರ್ತಿಗಳ ಹಾವಳಿ ಭ್ರಷ್ಟಾಚಾರ ತಪ್ಪಿಸಲು ಕೂಡ ಈ ಕ್ರಮ ಅನುಕೂಲ ಆಗಲಿದೆ. ಮೊಬೈಲ್ ಗೆ ಮಿಸ್ಡ್ ಕಾಲ್ ನೀಡಿದರೆ ಸಾಕು ಬಳಿಕ ಜನಮಿತ್ರರು (Janmitra) ಕರೆ ಮಾಡಿ ಹೆಸರು ಪಿನ್ ಕೋಡ್ ಪಡೆಯುತ್ತಾರೆ. ಬೆಳಗ್ಗೆ 8 ರಿಂದ ರಾತ್ರಿ 8ಗಂಟೆ ವರೆಗೆ ಈ ಸೇವೆ ಇರಲಿದ್ದು ನೀವು ಮಿಸ್ಡ್ ಕಾಲ್ ನೀಡಿದ ಬಳಿಕ ಒಂದು ಗಂಟೆ ಒಳಗೆ ಪ್ರತಿಕ್ರಿಯೆ ನಿಮಗೆ ಸಿಗಲಿದೆ.

ಸಕಾಲ ಯೋಜನೆ:

 

advertisement

 

ರಾಜ್ಯದಲ್ಲಿ ಸಕಾಲ ಯೋಜನೆ ಚಿರ ಪರಿಚಿತವಾಗಿದ್ದು ಜನಮಿತ್ರ (Janmitra) ಅದರ ಇನ್ನೊಂದು ರೂಪು ಎನ್ನಬಹುದು. ಮುಂದಿನ ದಿನದಲ್ಲಿ ಇ ಆಡಳಿತ ಸೇವೆ ಅಡಿಯಲ್ಲಿ ಜನಮಿತ್ರ ಯೋಜನೆ ಸೇವೆಗಳು ಜನರಿಗೆ ತಲುಪಲಿದೆ. ಸರಕಾರಿ ಇಲಾಖೆ ಯೊಂದಿಗೆ ಜನರು ಸಂವಹನ ನಡೆಸುವ ವಿಧಾನ ಈಗ ಮತ್ತಷ್ಟು ಸರಳವಾಗಲಿದೆ. ಇದರಲ್ಲಿ ಖಾಸಗಿ ಸಹಭಾಗಿತ್ವದಲ್ಲಿ 80 ಇಲಾಖೆಯ 736 ಸೇವಾ ಸೌಲಭ್ಯ ಸಿಗಲಿದೆ. ಇದಕ್ಕಾಗಿ ಕಾರ್ಯಕರ್ತರನ್ನು ನೇಮಕ ಮಾಡಲಾಗಿದ್ದು ಅವರ ಮೂಲಕ ಜನರಿಗೆ ಸರಕಾರಿ ಸೌಲಭ್ಯ ಮನೆಬಾಗಿಲಿಗೆ ಸಿಗಲಿದೆ. ಇಲ್ಲಿ ಉದ್ಯೋಗ ಸೃಷ್ಟಿ ಸಹ ಮಾಡಲಾಗುತ್ತಿದ್ದು ಗೌರವ ಧನ ಸಹ ನೀಡಲಾಗುವುದು. ಮನೆ ಬಾಗಿಲಿಗೆ ಸೇವೆ ಸಿಗುವ ಕಾರಣ ಸರಕಾರಿ ಕಚೇರಿಯಲ್ಲಿ ಜನ ದಟ್ಟಣೆ ಕಡಿಮೆ ಆಗಲಿದೆ.

ಮನೆ ಬಾಗಿಲಿಗೆ ಸೇವೆ ನೀಡುವ ಅನೇಕ ಕಾರ್ಯಕ್ರಮ ಪರಿಚಯಿಸಲಾಗುತ್ತಿದೆ. ಹಾಗಾಗಿ ಗ್ರಾಮ ಒನ್ (Gram One), ಬೆಂಗಳೂರು ಒನ್ (Bangalore One), ಕರ್ನಾಟಕ ಒನ್ (Karnataka One), ಗ್ರಾಮ ಪಂಚಾಯತ್ ಹಾಗೂ ಬಾಪೂಜಿ ಸೇವಾ ಕೇಂದ್ರದ ಸರಕಾರಿ ಸೇವೆಗಳು ಕೂಡ ಇದರಲ್ಲಿ ಸೇರಲಿವೆ. ಈ ಎಲ್ಲ ವಿಧವಾದ ಸೇವೆ ಪಡೆಯಲು ನೀವು ಒಂದು ಮಿಸ್ಡ್ ಕಾಲ್ ನೀಡಿದರೆ ಸಾಕು. ಜನಮಿತ್ರ ಯೋಜನೆ (Janmitra Yojana) ಗೆ ಸಂಪುಟ ಸಭೆಯಲ್ಲಿ ಕೂಡ ಅನುಮೋದನೆ ಕಾಯಲಾಗುತ್ತಿದ್ದು ಒಪ್ಪಿಗೆ ದೊರೆತ ಬಳಿಕ ಶೀಘ್ರ ಜಾರಿ ಆಗಲಿದೆ. ಪ್ರತೀ ನಾಗರಿಕ ಸೇವಾ ಕೇಂದ್ರಕ್ಕೆ 2ರಿಂದ 4 ಜನಮಿತ್ರರು ನೇಮಕ ಮಾಡಲಿದ್ದು ಅವರಿಗೆ ಗೌರವ ಧನ ಸಹ ಸಿಗಲಿದೆ.

ಈ ಸೇವೆಗಳು ಸಿಗಲಿದೆ:

ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಲೈಸೆನ್ಸ್ ನವೀಕರಣ, ಮಣ್ಣಿನ ಗುಣಮಟ್ಟದ ಪರೀಕ್ಷೆ, ಮರಣ ಪ್ರಮಾಣ ಪತ್ರ, ವಿವಿಧ ಸಾಮಾಜಿಕ ಪಿಂಚಣಿ ವ್ಯವಸ್ಥೆಯ ಅರ್ಜಿ ಸಲ್ಲಿಕೆ ಇತರ ಮುಖ್ಯ ಸೇವೆ ಜನಮಿತ್ರ ಸೇವೆಯಲ್ಲಿ ಸಿಗಲಿದೆ. ಮೊದಲ ಹಂತದಲ್ಲಿ ನಾಲ್ಕು ಜಿಲ್ಲೆಯಲ್ಲಿ ಇದು ಕಾರ್ಯ ನಿರ್ವಹಿಸಲಿದ್ದು ಬಳಿಕ ರಾಜ್ಯಾದ್ಯಂತ ಕಾರ್ಯ ನಿರ್ವಹಿಸಲಿದೆ. ಇದಕ್ಕೆ ನೇಮಕ ಆಗುವವರಿಗೆ ಇ ಆಡಳಿತ ಇಲಾಖೆ ಮೂಲಕ ತರಬೇತಿ ನೀಡಲಾಗುತ್ತದೆ. ಈ ಬಾರಿ 25 ಸಾವಿರಕ್ಕೂ ಅಧಿಕ ಜನಮಿತ್ರರು ನೇಮಕರಾಗಲಿದ್ದು ನಿರುದ್ಯೋಗ ಸಮಸ್ಯೆ ನಿವಾರಣೆ ಆಗಲಿದೆ.

advertisement

Leave A Reply

Your email address will not be published.