Karnataka Times
Trending Stories, Viral News, Gossips & Everything in Kannada

Republic Day Parade: ಜನವರಿ 26ರ ಗಣರಾಜ್ಯೋತ್ಸವ ಪೆರೇಡ್ ನಿಂದ ಕೇಂದ್ರ ಸರ್ಕಾರ ಎಷ್ಟು ಹಣ ಗಳಿಸುತ್ತೆ ಗೊತ್ತಾ!

advertisement

ದೇಶದಲ್ಲಿ ಆಗಸ್ಟ್ 15, 1947 ರಂದು ಸ್ವಾತಂತ್ರ ಸಿಕ್ಕಿದ್ದು, ಪ್ರತಿ ವರ್ಷ ಆಗಸ್ಟ್ 15 ರನ್ನು ಸ್ವಾತಂತ್ರ್ಯೋತ್ಸವ ಎಂದು ಆಚರಿಸಲಾಗುತ್ತದೆ. ಅದೇ ರೀತಿ ಜನವರಿ 26, 1950 ರಂದು ನಮಗೆ ಸಿಕ್ಕ ಗಣತಂತ್ರ ದಿನವನ್ನಾಗಿ ಗಣರಾಜ್ಯೋತ್ಸವವಾಗಿ ಪ್ರತಿ ಜನವರಿ 26 ರಂದು ಆಚರಿಸಲಾಗುತ್ತದೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ದೇಶದ ರಾಜಧಾನಿಯಲ್ಲಿ ನಡೆಯುವ ಗಣರಾಜ್ಯೋತ್ಸವದ ಪರೇಡ್ (Republic Day Parade) ಮಾತ್ರ ಪ್ರತಿ ವರ್ಷದಿಂದ ವರ್ಷಕ್ಕೆ ವೈಭವಿಕರಿಸುತ್ತದೆ. ಪ್ರಧಾನ ಮಂತ್ರಿ ನೇತೃತ್ವದ ಕೇಂದ್ರ ಸರ್ಕಾರ, ಗಣರಾಜ್ಯೋತ್ಸವದ ಪರೇಡ್ ಅನ್ನು ಬಹಳ ಅದ್ದೂರಿಯಾಗಿ ನೆರವೇರಿಸುತ್ತಿದೆ. ಈ ದಿನದ ಮೆರವಣಿಗೆಯನ್ನು ನೋಡುವುದೇ ಒಂದು ಸಂಭ್ರಮ!

ನಿಮಗೆ ಗೊತ್ತಾ ಗಣರಾಜ್ಯೋತ್ಸವದ ಪರೇಡ್ (Republic Day Parade) ಗೆ ಸರ್ಕಾರ ಹಣವನ್ನು ಖರ್ಚು ಮಾಡುತ್ತೆ ಜೊತೆಗೆ ಸರ್ಕಾರಕ್ಕೆ ಒಂದಷ್ಟು ಹಣ ಗಳಿಕೆ ಕೂಡ ಆಗುತ್ತೆ. ಖರ್ಚು ಮಾಡುವ ವಿಷಯ ನಮಗೂ ಗೊತ್ತು, ಆದರೆ ಕೇಂದ್ರ ಸರ್ಕಾರ ಹಣ ಗಳಿಕೆ ಮಾಡುವುದು ಹೇಗೆ ಎನ್ನುವ ಪ್ರಶ್ನೆ ನಿಮ್ಮಲ್ಲೂ ಮೂಡಿರಬಹುದು ಅದಕ್ಕೆ ನಾವು ಉತ್ತರಿಸುತ್ತೇವೆ.

 

 

ಪ್ರತಿವರ್ಷ ಜನವರಿ 26 ರಂದು ಪರೇಡ್ ಹಾಗೂ ಬೀಟಿಂಗ್ ರೀಟ್ರಿಟ್ ಸಮಾರಂಭ ಆಯೋಜಿಸಲಾಗುತ್ತದೆ. ಇದಕ್ಕಾಗಿ ಬೇರೆ ಬೇರೆ ಸಚಿವಾಲಯಗಳು ಇಲಾಖೆಗಳು ಹಾಗೂ ಬೇರೆ ಬೇರೆ ರಾಜ್ಯ ಸರ್ಕಾರಗಳು ಕೂಡ ಬೆಂಬಲ ನೀಡುತ್ತವೆ. ಗಣರಾಜ್ಯೋತ್ಸವದ ಸಂದರ್ಭದಲ್ಲಿ ಮಾಡಲಾಗುವ ವೆಚ್ಚವನ್ನು ಎಲ್ಲರೂ ಒಟ್ಟಾಗಿಯೇ ಧರಿಸುತ್ತಾರೆ. ರಕ್ಷಣಾ ಸಚಿವಾಲಯದ ವಿದ್ಯುಕ್ತ ವಿಭಾಗ ಅಗತ್ಯ ಇರುವ ನಿಧಿಯನ್ನು ನಿಗದಿಪಡಿಸುತ್ತದೆ. 2022- 23ರ ಆರ್ಥಿಕ ವರ್ಷದಲ್ಲಿ 1,32,53,000 ರೂಪಾಯಿಗಳನ್ನು ನಿಗದಿಪಡಿಸಲಾಗಿತ್ತು.

advertisement

ಟಿಕೆಟ್ ಮಾರಾಟ:

ಜನವರಿ 26 ರಂದು ಅದ್ದೂರಿಯಾಗಿ ನಡೆಯುವ ಗಣರಾಜ್ಯೋತ್ಸವದ ಪರೇಡ್ (Republic Day Parade) ಹಾಗೂ ಮೀಟಿಂಗ್ ರಿಟ್ರೀಟ್ ಸಮಾರಂಭದಲ್ಲಿ, ಮೆರವಣಿಗೆಯ ಅದ್ಭುತ ದೃಶ್ಯವನ್ನು ಕಣ್ತುಂಬಿಕೊಳ್ಳಲು ಸಾಕಷ್ಟು ಜನ ಬರುತ್ತಾರೆ. ಇದಕ್ಕೆ ಬರುವ ಜನ ಟಿಕೆಟ್ ಪಡೆದುಕೊಳ್ಳಬೇಕು. ಹಾಗಾಗಿ ಟಿಕೆಟ್ ಮಾರಾಟದಿಂದಲೇ ಸರ್ಕಾರಕ್ಕೆ ಉತ್ತಮ ಆದಾಯ ಬರುತ್ತದೆ ಎನ್ನಬಹುದು. ಉದಾಹರಣೆಗೆ 2023ರಲ್ಲಿ ಕೆಲವು ರದ್ದುಪಡಿಕೊಂಡ ಟಿಕೆಟ್ ಹಣವನ್ನು ಮರುಪಾವತಿ ಮಾಡಿದ್ದನ್ನು ಹೊರತುಪಡಿಸಿ, ಮಾರಾಟವಾಗಿರುವ ಟಿಕೆಟ್ನಿಂದ ಸರ್ಕಾರಕ್ಕೆ 28,36,980 ರೂಪಾಯಿ ಗಳಿಕೆಯಾಗಿದೆ.

ಇತರ ವರ್ಷಗಳಲ್ಲಿ ಟಿಕೆಟ್ ಮಾರಾಟದಿಂದ ಬಂದಿರುವ ಗಳಿಕೆ ಇಂತಿದೆ:

  • 2022 ರಲ್ಲಿ ಟಿಕೆಟ್ ಮಾರಾಟದಿಂದ ಗಳಿಕೆ 1,14,500 ರೂ.
  • 2021 ರಲ್ಲಿ ಟಿಕೆಟ್ ಮಾರಾಟದಿಂದ ಗಳಿಕೆ – 10,12,860 ರೂ.
  • 2020 ರಲ್ಲಿ 34,72,990 ರೂ. 2019 ರಲ್ಲಿ ಟಿಕೆಟ್ ಮಾರಾಟದಿಂದ ಗಳಿಕೆ – 34,34,264 ರೂ
  • 2018 ರಲ್ಲಿ ಟಿಕೆಟ್ ಮಾರಾಟದಿಂದ ಗಳಿಕೆ 34,90,000 ರೂ.

ಹೀಗೆ ಸರ್ಕಾರ ಇಂತಹ ಪರೇಡ್ ಗಳಿಗೆ ಖರ್ಚು ಮಾಡಿದರು ಅದರಿಂದ ಒಂದಷ್ಟು ಹಣ ಕೇಂದ್ರದ ಬೊಕ್ಕಸ ಸೇರುವುದು ಸುಳ್ಳಲ್ಲ.

advertisement

Leave A Reply

Your email address will not be published.