Karnataka Times
Trending Stories, Viral News, Gossips & Everything in Kannada

Family Pension: ಪಿಂಚಣಿ ಪಡೆಯುತ್ತಿರುವ ಮಹಿಳೆಯರಿಗೆ ಗುಡ್ ನ್ಯೂಸ್, ನಿಯಮದಲ್ಲಿ ದೊಡ್ಡ ಬದಲಾವಣೆ!

advertisement

ಕುಟುಂಬ ಪಿಂಚಣಿ (Family Pension) ಯೋಜನೆಯಲ್ಲಿ ಇಂದು ಸಾಕಷ್ಟು ಜನ ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಾಗಿದೆ. ಸಾಕಷ್ಟು ಪತಿ-ಪತ್ನಿಯರು ತಮ್ಮ ವೃದ್ಧಾಪ್ಯದಲ್ಲಿ ಕುಟುಂಬ ಪಿಂಚಣಿ ಯೋಜನೆಯ ಮೂಲಕ ಪಿಂಚಣಿ ಹಣವನ್ನು ಪಡೆದುಕೊಳ್ಳಬಹುದು. ಕುಟುಂಬ ಪಿಂಚಣಿ ನಿಯಮಗಳನ್ನು ಕೇಂದ್ರ ಸರ್ಕಾರ ಈಗ ಬದಲಾಯಿಸಿದೆ. ಇದರ ಪ್ರಕಾರ ಸರ್ಕಾರಿ ಮಹಿಳಾ ಉದ್ಯೋಗಿ ತನ್ನ ಗಂಡನ ಬದಲಿಗೆ ಮಗ ಅಥವಾ ಮಗಳನ್ನು ಪಿಂಚಣಿಗೆ ನಾಮನಿರ್ದೇಶನ ಮಾಡಬಹುದು ಎಂದು ಸೂಚಿಸಲಾಗಿದೆ. ಈ ಹಿಂದೆ ಮಹಿಳಾ ಉದ್ಯೋಗಿಗಳಿಗೆ ಈ ಅವಕಾಶ ಇರಲಿಲ್ಲ.

ಹಿಂದಿನ ನಿಯಮವನ್ನು ನೋಡುವುದಾದರೆ ಸರ್ಕಾರಿ ನೌಕರ ಅಥವಾ ಪಿಂಚಣಿದಾರರ ಪತ್ನಿ ಅಥವಾ ಪತಿಗೆ ಕುಟುಂಬ ಪಿಂಚಣಿ ಸಿಗುತ್ತಿತ್ತು ಇತರ ಕುಟುಂಬದ ಸದಸ್ಯರು ಪತಿ ಅಥವಾ ಪತ್ನಿ ಮರಣ ಹೊಂದಿದ ಅಂತರ ಮಾತ್ರ ಪಿಂಚಣಿ ಪಡೆಯಬಹುದಿತ್ತು. ಆದರೆ ಸರ್ಕಾರ ಈಗ ನಿಯಮ ಬದಲಾವಣೆ ಮಾಡಿದೆ. ಪತಿಯೊಂದಿಗೆ ಹೊಂದಾಣಿಕೆ ಆಗದೆ ಇದ್ದ ಮಹಿಳೆ ಅಥವಾ ವಿಚ್ಛೇದನ ಪಡೆದ ಮಹಿಳಾ ಉದ್ಯೋಗಿಗೂ ಈಗ ಪರಿಹಾರ ಸಿಗಲಿದೆ. ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಆಕೆ ಈ ಹಣವನ್ನು ಬಳಸಿಕೊಳ್ಳಬಹುದು.

ಸಚಿವರು ಹೇಳಿದ್ದೇನು?

ಕುಟುಂಬ ಪಿಂಚಣಿ ಯೋಜನೆಯ ಬದಲಾವಣೆಯ ಬಗ್ಗೆ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಮಾತನಾಡಿ, ಸಂಗಾತಿಯ ಮರಣದ ನಂತರ ಮಕ್ಕಳು ಕುಟುಂಬ ಪಿಂಚಣಿ ಪಡೆದುಕೊಳ್ಳಬಹುದು ಎನ್ನುವ ಮಾಹಿತಿ ನೀಡಿದ್ದಾರೆ. ವೈವಾಹಿಕ ಜೀವನದಲ್ಲಿ ಸಮಸ್ಯೆ ಉಂಟಾಗಿ ವಿಚ್ಛೇದನ ತೆಗೆದುಕೊಂಡ ಸಂದರ್ಭದಲ್ಲಿ ಈ ಹೊಸ ತಿದ್ದುಪಡಿ ಪ್ರಯೋಜನಕಾರಿಯಾಗಲಿದೆ.

Image Source: Telangana Today

advertisement

ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣೆ ಹಾಗೂ ವರದಕ್ಷಿಣೆ ನಿಷೇಧ ಕಾಯ್ದೆ ಜೊತೆಗೆ ಭಾರತೀಯ ತಂಡ ಸಮಿತಿಯ ಕಾನೂನಿನ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗುತ್ತದೆ. ಹಾಗೂ ಫಲಾನುಭವಿಗೆ ಕುಟುಂಬದ ಪಿಂಚಣಿ ನೀಡುವ ವ್ಯವಸ್ಥೆ ಮಾಡಲಾಗುವುದು.

ಲಿಖಿತ ವಿನಂತಿ ಸಲ್ಲಿಸಿ!

ಸರ್ಕಾರಿ ನಿಯಮದ ಅನ್ವಯ ಮಹಿಳಾ ಉದ್ಯೋಗಿ ಅಥವಾ ಪಿಂಚಣಿದಾರರು ಸಂಬಂಧಪಟ್ಟ ಕಚೇರಿಗೆ ಲಿಖಿತ ರೂಪದಲ್ಲಿ ವಿನಂತಿ ಸಲ್ಲಿಸಿ ಕುಟುಂಬ ಪಿಂಚಣಿಯಲ್ಲಿ ತನ್ನ ಮಗು ಹೆಸರನ್ನು ನೋಂದಾಯಿಸಬಹುದು. ಇಂತಹ ಸಂದರ್ಭದಲ್ಲಿ ಮಹಿಳಾ ಸರ್ಕಾರಿ ನೌಕರರು ಅಥವಾ ಪಿಂಚಣಿದಾರರು ಮರಣ ಹೊಂದಿದರೆ ಕುಟುಂಬ ಪಿಂಚಣಿಯನ್ನು ಪತ್ನಿಯ ಮಕ್ಕಳಿಗೆ ನೀಡಲಾಗುವುದು.

ವಿಧವೆ ಅಥವಾ ಮಕ್ಕಳು ಇಲ್ಲದೆ ಇರುವ ಮಹಿಳೆ!

ಸರ್ಕಾರಿ ಉದ್ಯೋಗ ಮಾಡುವ ಮಹಿಳೆ ವಿಧವೆಯಾಗಿದ್ದರೆ ಅಥವಾ ಆಕೆಗೆ ಮಕ್ಕಳಿಲ್ಲದೆ ಇದ್ದರೆ ಪಿಂಚಣಿಯ ಹಣವನ್ನು ಕ್ಲೈಮ್ ಮಾಡಲು ಸಾಧ್ಯವಿಲ್ಲ. ವಿಧವೆಗೆ ಮಕ್ಕಳಿದ್ದು ಅಪ್ರಾಪ್ತ ವಯಸ್ಕರ ಅಥವಾ ಮಾನಸಿಕ ಅಸ್ವಸ್ಥತೆ ಹೊಂದಿರುವ ಮಗು ಇದ್ದರೆ, ಈ ಪಿಂಚಣಿ ಹಣವನ್ನು ಆ ಮಕ್ಕಳ ಭವಿಷ್ಯಕ್ಕಾಗಿ ಬಳಸಿಕೊಳ್ಳಲಾಗುವುದು. ಮಗು ಬೆಳೆದು ದೊಡ್ಡವನಾದ ಮೇಲೆ ಕುಟುಂಬ ಪಿಂಚಣಿಯ ಹಣ ಆತನ ಖಾತೆಗೆ ನೇರವಾಗಿ ವರ್ಗಾವಣೆ ಆಗುತ್ತದೆ. ಮರಣ ಹೊಂದಿದ ಮಹಿಳಾ ಸರ್ಕಾರಿ ನೌಕರರ ಅಥವಾ ಪಿಂಚಣಿದಾರರ ಮಕ್ಕಳು ಬದುಕಿದ್ದರೆ ಕುಟುಂಬ ಪಿಂಚಣಿಗೆ ಅವರು ಅರ್ಹರಾಗಿದ್ದಾರೆ ಅಂತವರಿಗೆ ಪಿಂಚಣಿಯನ್ನು ನೀಡಲಾಗುತ್ತದೆ.

advertisement

Leave A Reply

Your email address will not be published.