Karnataka Times
Trending Stories, Viral News, Gossips & Everything in Kannada

Pahani: ಪಹಣಿಯಲ್ಲಿ ನಿಮ್ಮ ಹೆಸರು ಆಧಾರ್ ನಲ್ಲಿರುವಂತೆ ತಿದ್ದುಪಡಿ ಮಾಡಲು ಈ ಸುಲಭ ವಿಧಾನ ಅನುಸರಿಸಿ!

advertisement

ಇಂದು ರೈತನಿಗೆ ಕೃಷಿ ಚಟುವಟಿಕೆ ಮಾಡಬೇಕಾದರೆ ಭೂ,ಆಸ್ತಿ ಬಹಳ ಮುಖ್ಯವಾಗುತ್ತದೆ. ತನ್ನದೇ ಆದ ಸ್ವಂತ ಭೂಮಿ ಇದ್ದರೆ ರೈತನಿಗೆ ಬೇಕಾದ ಕೃಷಿ ಕಾರ್ಯ ‌ವಿಧಾನ ಮಾಡಬಹುದು. ಆದರೆ ಕೃಷಿ ಕಾರ್ಯ ಕೈಗೊಳ್ಳಲು ಭೂ ದಾಖಲೆಗಳು ಕೂಡ ಬಹಳ ಮುಖ್ಯವಾಗುತ್ತದೆ. ಜಮೀನನ್ನು ಕೊಂಡುಕೊಳ್ಳುವಾಗ ಅಥವಾ ಮಾರುವಾಗ ಅಥವಾ ಭಾಗ ಪಾಲು ಮಾಡುವಾಗ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ.

ಹೆಸರು ಬದಲಾವಣೆ:

ಇಂದು ಪ್ರತಿಯೊಂದು ದಾಖಲೆಗಳು ಕೂಡ ಬಹಳ ಮುಖ್ಯವಾಗುತ್ತದೆ. ಮುಖ್ಯ ದಾಖಲೆ ಅಂದಾಗ ಆಧಾರ್ ಕಾರ್ಡ್ (Aadhaar Card), ರೇಷನ್ ಕಾರ್ಡ್ (Ration Card), ಪ್ಯಾನ್ ಕಾರ್ಡ್ (PAN Card), ಓಟರ್ ಐಡಿ (Voter ID) ಇತ್ಯಾದಿಗಳು ಆಗಿವೆ. ಕೆಲವೊಮ್ಮೆ ನಮ್ಮ ದಾಖಲೆ ಗಳು ತಿದ್ದುಪಡಿ ಮಾಡಬೇಕಾಗುತ್ತದೆ. ಹಾಗೇ ಪಹಣಿಯಲ್ಲಿ ಕೂಡ ಹೆಸರು ತಪ್ಪಾಗಿರುವುದನ್ನು ಸಹ ಸರಿಪಡಿಸಬಹುದು. ನಿಮ್ಮ ಪಹಣಿಯಲ್ಲಿ ತಂದೆಯ ಹೆಸರು ತಪ್ಪಾಗಿದ್ದರೆ, ಅಥವಾ ನಿಮ್ಮ ಹೆಸರು ತಪ್ಪಾಗಿದ್ದರೆ ಸರಿಪಡಿಸಬಹುದು.

ಅರ್ಜಿ ಸಲ್ಲಿಸಬೇಕು:

advertisement

ನೀವು ಪಹಣಿ (Pahani) ಯಲ್ಲಿ ಹೆಸರು ತಿದ್ದುಪಡಿ ಮಾಡುದಾದ್ರೆ ಅದಕ್ಕೆ ಮಾದರಿ ಅರ್ಜಿ ಯನ್ನು ನೀವು ಸಲ್ಲಿಸಬೇಕು. ತಹಶೀಲ್ದಾರ ಕಚೇರಿಯಲ್ಲಿ ಅರ್ಜಿ ಸಿಗಲಿದ್ದು ಅರ್ಜಿ ಬರೆದು ಇದರೊಂದಿಗೆ ಯಾವ ದಾಖಲೆ ಯಂತೆ ನಿಮ್ಮ ಹೆಸರು ಬೇಕು ಎಂಬುದನ್ನು ಸ್ಪಷ್ಟ ಪಡಿಸಿ ರೈತನ ಆಧಾರ್ ಕಾರ್ಡ್ (Aadhaar Card) ಝರಾಕ್ಸ್ ಪ್ರತಿ ಯನ್ನು ಕೂಡ ಸಲ್ಲಿಕೆ ಮಾಡಬೇಕು. ಜಮೀನಿನ ದಾಖಲೆಗಳಲ್ಲಿ ಹೆಸರು ಸರಿಯಾಗಿ ಇದ್ದರೆ ಮಾತ್ರ ಸರ್ಕಾರದ ಸೌಲಭ್ಯಗಳು ಸುಲಭವಾಗಿ ದೊರೆಯುತ್ತದೆ. ಬೆಳೆ ವಿಮೆ ಮೊತ್ತ, ಪಿಎಂ ಕಿಸಾನ್ ಯೋಜನೆ (PM Kisan Yojana) ಯ ಮೊತ್ತ, ಕೃಷಿಯ ಸೌಲಭ್ಯ ಪಡೆಯಲು ಪಹಣೆ ದಾಖಲೆ ಸರಿ‌ಇರಬೇಕು

ಭೂಮಿ ಕೇಂದ್ರಕ್ಕೆ ಭೇಟಿ ನೀಡಿ:

ಎಲ್ಲಾ ದಾಖಲೆಗಳನ್ನು ಸರಿಪಡಿಸಿಕೊಂಡು ನಿಮ್ಮ ತಾಲೂಕಿನಲ್ಲಿರುವ ಭೂಮಿ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬೇಕು. ನಂತರದಲ್ಲಿ ಭೂಮಿ ಕೇಂದ್ರದಲ್ಲಿರುವ ಅಧಿಕಾರಿಗಳು‌ ನಿಮ್ಮ ದಾಖಲೆಗಳೊಂದಿಗೆ ನಿಮಗೆ ಸಂಬಂಧಪಟ್ಟ ಗ್ರಾಮ ಲೆಕ್ಕಾಧಿಕಾರಿಗಳಿಗೆ ಕಳುಹಿಸುತ್ತಾರೆ. ಗ್ರಾಮ ಲೆಕ್ಕಾಧಿಕಾರಿಗಳು ಅರ್ಜಿಯನ್ನು ಮತ್ತು ದಾಖಲೆಗಳನ್ನು ಪರಿಶೀಲಿಸಿ ಸರಿ ಮಾಡುತ್ತಾರೆ.

ಈ ದಾಖಲೆ ಬೇಕು:

  • Aadhaar Card
  • 20 Rs Stamp Paper
  • Pahani
  • Application Document

advertisement

Leave A Reply

Your email address will not be published.