Karnataka Times
Trending Stories, Viral News, Gossips & Everything in Kannada

Shree Anna Yojana: ರೇಷನ್ ವಿತರಣೆಯಲ್ಲಿ ಮಹತ್ವದ ಬದಲಾವಣೆ, ಇನ್ಮುಂದೆ ಹೆಚ್ಚುವರಿ ಅಕ್ಕಿ ಸಿಗಲ್ಲ!

advertisement

ಬಡವರ್ಗದ ಜನತೆಯನ್ನು ‌ಆರ್ಥಿಕ ವಾಗಿ ಸಬಲ ಮಾಡುವ ಉದ್ದೇಶ ದಿಂದ ಬಡತನ ವರ್ಗದ ಕೆಳಗಿರುವ ಜನತೆಗೆ ಅನ್ನಭಾಗ್ಯ ಯೋಜನೆ (Anna Bhagya Yojana) ಅನ್ನು ಸರಕಾರ ಜಾರಿಗೆ ತಂದಿದೆ. ಇನ್ನೂ ರೇಷನ್ ಕಾರ್ಡ್ (Ration Card) ಹೊಂದಿದ್ದರೆ ಮಾತ್ರ ಈ ಸೌಲಭ್ಯ ಜನತೆಗೆ ದೊರೆಯುತ್ತದೆ. ಹಾಗಾಗಿ ಸರಕಾರದ ಯಾವುದೇ ಸೌಲಭ್ಯ ಪಡೆಯಲು ಈ ರೇಷನ್ ಕಾರ್ಡ್ ‌ಬೇಕು. ಇಂದು ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆ ಜಾರಿಗೆ ತಂದಿರುವ ಹಿನ್ನಲೆಯಲ್ಲಿ ರೇಷನ್ ಕಾರ್ಡ್​ಗಳಿಗೆ ಬೇಡಿಕೆ ಕೂಡ ಹೆಚ್ಚಾಗಿದೆ ಎಂದು ಹೇಳಬಹುದು.

PM Garib Kalyan Yojana:

ಕೇಂದ್ರ ಸರಕಾರವು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ (PM Garib Kalyan Yojana) ಪ್ಯಾಕೇಜ್ ಮೂಲಕ ಆಹಾರ ಧಾನ್ಯಗಳನ್ನು ಜನತೆಗೆ‌ ನೀಡುತ್ತಿದೆ. 2013 ರ ಅಡಿಯಲ್ಲಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಎಂದು ಹೆಸರಿಸಿಟ್ಟಿದ್ದು ಅನ್ನಭಾಗ್ಯ ಯೋಜನೆಯಲ್ಲಿ ಕೇಂದ್ರ ಸರಕಾರದ ಪಾಲು ಸಹ ಇದೆ. ಗರೀಬ್ ಕಲ್ಯಾಣ್ ಅನ್ನ ಯೋಜನೆ ಅಡಿಯಲ್ಲಿ ಒಂದು ಕುಟುಂಬಕ್ಕೆ ಪ್ರತೀ ತಿಂಗಳು 5 ಕಿಲೋನಷ್ಟು ಆಹಾರಧಾನ್ಯಗಳನ್ನು ಉಚಿತವಾಗಿ ಕೊಡಲಾಗುತ್ತದೆ.

Shree Anna Yojana:

advertisement

ಇದೀಗ ಕೇಂದ್ರ ಸರ್ಕಾರವು ಮಧ್ಯಮ ವರ್ಗದ ಜನತೆಗೆ ಶ್ರೀ ಅನ್ನ ಯೋಜನೆ (Shree Anna Yojana) ಯನ್ನು ಜಾರಿಗೆ‌ ತಂದಿದೆ.‌ ಪಡಿತರ ಚೀಟಿದಾರರಿಗೆ ಫೆಬ್ರವರಿಯಿಂದ ಪಡಿತರದ ಜೊತೆಗೆ ಸಿರಿಧಾನ್ಯಗಳನ್ನು ವಿತರಣೆ ಮಾಡಲು ಕೇಂದ್ರ ಸರಕಾರ ಇದೀಗ ಮುಂದಾಗಿದೆ. ಈ ಯೋಜನೆ ಅಡಿಯಲ್ಲಿ ಗೋಧಿ ಮತ್ತು ಅಕ್ಕಿಯ ಜೊತೆಗೆ, ಸಿರಿ ಧಾನ್ಯಗಳನ್ನು ಕೂಡ ಉಚಿತವಾಗಿ ನೀಡಲಾಗುತ್ತದೆ.

ಹೆಚ್ಚುವರಿ ಅಕ್ಕಿಯ ಬದಲಾಗಿ ಸಿರಿ ಧಾನ್ಯ:

 

 

ಈ ಹೊಸ ಯೋಜನೆಯಡಿ ಪಡಿತರ (Ration) ಪಡೆಯುವ ಅಕ್ಕಿಯ ಪ್ರಮಾಣವನ್ನು ಕಡಿಮೆ ಮಾಡಿ ಅದರ ಬದಲಿಗೆ ಸಿರಿ ಧಾನ್ಯಗಳನ್ನು ನೀಡಲಾಗುತ್ತದೆ. ಮದ್ಯಮ ವರ್ಗದ ‌ಜನತೆಗೂ ಆಹಾರದಲ್ಲಿ ಸಿರಿ ಧಾನ್ಯಗಳನ್ನು ನೀಡುವಲ್ಲಿ ಉತ್ತೇಜಿಸಲು ಸರ್ಕಾರ ಒತ್ತು‌ ನೀಡುತ್ತಿದೆ. ಈ ಹಿಂದೆ ಅಂತ್ಯೋದಯ ಕಾರ್ಡ್ ಹೊಂದಿದ್ದ ಅವರಿಗೆ 21 ಕೆಜಿ ಅಕ್ಕಿ ಮತ್ತು 14 ಕೆಜಿ ಗೋಧಿ ಸಿಗುತ್ತಿತ್ತು, ಇದೀಗ ಇದರ ಬದಲು ಒಂಬತ್ತು ಕೆಜಿ ಗೋಧಿ ಮತ್ತು ಐದು ಕೆಜಿ ಸಿರಿಧಾನ್ಯಗಳನ್ನು ನೀಡಲು ಕೇಂದ್ರ ಸರಕಾರ ನಿರ್ಧರಿಸಿದೆ.

advertisement

Leave A Reply

Your email address will not be published.