Karnataka Times
Trending Stories, Viral News, Gossips & Everything in Kannada

Benling Aura: ಕೇವಲ 25,000 ರೂಪಾಯಿಗೆ ಖರೀದಿಸಿ 120Km ಮೈಲೇಜ್ ಕೊಡುವ ಎಲೆಕ್ಟ್ರಿಕ್ ಸ್ಕೂಟರ್, ಆಕರ್ಷಕ ಲುಕ್!

advertisement

ಭಾರತದಲ್ಲಿ ಎಲೆಕ್ಟ್ರಿಕಲ್ ಸ್ಕೂಟರ್ ಟ್ರೆಂಡ್ ಆರಂಭವಾಗಿದೆ. ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲರೂ ಎಲೆಕ್ಟ್ರಾನಿಕ್ ಸ್ಕೂಟರ್ ಖರೀದಿ ಮಾಡಲು ಮುಂದಾಗಿದ್ದಾರೆ. ಇದಕ್ಕೆ ಸರ್ಕಾರವು ಕೂಡ ಬೆಂಬಲ ನೀಡುತ್ತಿದ್ದು ಇವಿ ಸ್ಕೂಟರ್ ತಯಾರಿಕೆಯೂ ಕೂಡ ಹೆಚ್ಚಾಗಿದೆ. ಈಗಾಗಲೇ ಬೇರೆ ಬೇರೆ ಕಂಪನಿಗಳು ಉತ್ತಮವಾಗಿರುವ ಎಲೆಕ್ಟ್ರಿಕಲ್ ಸ್ಕೂಟರ್ ಅನ್ನು ಪೈಪೋಟಿ ದರದಲ್ಲಿ ಬಿಡುಗಡೆ ಮಾಡುತ್ತಿವೆ. ಈಗ ಅತಿ ಕಡಿಮೆ ಬೆಲೆಗೆ ನೀವು ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮಾಡಬೇಕು ಎಂದುಕೊಂಡಿದ್ದರೆ, ಬೆನಲಿಂಗ್ ಔರಾ ಬಗ್ಗೆ ಒಮ್ಮೆ ತಿಳಿದುಕೊಳ್ಳಿ.

Benling Aura ವ್ಯಾಪ್ತಿ:

ಈ ಸ್ಕೂಟರ್ ಒಂದು ಚಾರ್ಜ್ ನಲ್ಲಿ 120 ಕಿಲೋಮೀಟರ್ ವರೆಗೆ ಕ್ರಮಿಸಬಲ್ಲದು ಎಂದು ಕಂಪನಿ ಹೇಳಿಕೊಂಡಿದೆ. ಇನ್ನು ಅತ್ಯುತ್ತಮವಾಗಿರುವ ಮೂರು ಬಣ್ಣಗಳಲ್ಲಿ ಈ ಸ್ಕೂಟರ್ ಖರೀದಿ ಮಾಡಬಹುದು. 2500W ಉತ್ತಮ ಮೋಟಾರ್ ಶಕ್ತಿಯನ್ನು ಹೊಂದಿದೆ. 60 km/h ವೇಗವನ್ನು ಪಡೆಯಬಹುದು.

ಚಾರ್ಜಿಂಗ್ ಬಗ್ಗೆ ಮಾತನಾಡುವುದಾದರೆ ನೀವು ಕೇವಲ ಐದರಿಂದ ಏಳು ಗಂಟೆ ಅವಧಿಯಲ್ಲಿ ಸಂಪೂರ್ಣವಾಗಿ ಸ್ಕೂಟರ್ ಚಾರ್ಜ್ ಮಾಡಬಹುದು. ಅತ್ಯುತ್ತಮ ಸಾಮರ್ಥ್ಯದ ಬ್ಯಾಟರಿ ಅಳವಡಿಸಿರುವುದರಿಂದ ಬಹಳ ಬೇಗ ಚಾರ್ಜ ಮಾಡಬಹುದು.

Benling Aura ಪರಿಶಿಷ್ಟತೆ:

advertisement

ಡಿಜಿಟಲ್ ಡಿಸ್ಪ್ಲೇ ಕೊಡಲಾಗಿದ್ದು, ಪುಶ್ ಬಟನ್ ಸೌಕರ್ಯ ಇದೆ ಎಂದು ಹೇಳಬಹುದು. ಯಾಕೆಂದರೆ ಇಲ್ಲಿ ಕೇವಲ ಅಲಂಕಾರಕ್ಕೆ ನೀವು ಕಿ ಬಳಸಬಹುದು ಅಷ್ಟೇ, ನಿಜವಾಗಿ ಕೀ ಬಳಸುವ ಅಗತ್ಯವೇ ಇಲ್ಲ. ಇನ್ನು ಎಲ್ಇಡಿ ಲೈಟ್ ಗಳು, ಯುಎಸ್ಬಿ ಚಾರ್ಜರ್, ರಿವರ್ಸ್ ಮೋಡ್ ಮೊದಲದು ಬಹಳ ಫ್ಯೂಚರೆಸ್ಟಿಕ್ ವೈಶಿಷ್ಟ್ಯತೆಗಳಾಗಿವೆ.

Benling Aura ಮೇಲ್ನೋಟಕ್ಕೆ ಸುಂದರವಾಗಿ ಕಾಣುವುದು ಮಾತ್ರವಲ್ಲ ಇದರಲ್ಲಿ ಸುರಕ್ಷತೆಯ ದೃಷ್ಟಿಯಿಂದಲೂ ಕೂಡ ಹೆಚ್ಚು ಗಮನವಹಿಸಿದ್ದು ಕಾಣಬಹುದು. ಅಲಾಯಿ ವೀಲ್ ಕೊಡಲಾಗಿದ್ದು ಡಿಸ್ಕ್ ಬ್ರೇಕ್ ಗಳು ಹಾಗೂ ಕೂಲ್ ಸಸ್ಪೆನ್ಷನ್ ವ್ಯವಸ್ಥೆ ಇದೆ. ಈ ಎಲ್ಲ ವ್ಯವಸ್ಥೆಗಳು ನೀವು ತಲೆಗೆ ಹೇಗೆ ಹೆಲ್ಮೆಟ್ ಹಾಕಿ ಸುರಕ್ಷತೆಯ ಬಗ್ಗೆ ಯೋಚನೆ ಮಾಡುತ್ತಿರುವ ಹಾಗೆ, ಇವೆಲ್ಲವೂ ಸ್ಕೂಟರ್ ಗೆ ಹೆಲ್ಮೆಟ್ ನಂತೆ ಇದ್ದು ಉತ್ತಮ ಸುರಕ್ಷತೆ ನೀಡುತ್ತದೆ. ಹಾಗಾಗಿ ನೀವು ಸುಲಭವಾಗಿ ಲಾಂಗ್ ಡ್ರೈವ್ ಗೂ ಕೂಡ ಈ ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಬಳಸಬಹುದು.

Image Source: Compare Indian Bikes

Benling Aura ಬೆಲೆ:

ಈ ಸ್ಕೂಟರ್ ಕೈಗೆಟ್ಟುಕುವ ಬೆಲೆಯಲ್ಲಿ ಲಭ್ಯವಿದ್ದು, ಆರಂಭಿಕ ಎಕ್ಸ್ ಶೋರೂಮ್ ಬೆಲೆ 91,600 ರೂ. ಇನ್ನು ನೀವು ಡೌನ್ ಪೇಮೆಂಟ್ ಆಗಿ 25,000ಗಳನ್ನು ಪಾವತಿಸಿ, 48 ತಿಂಗಳಿಗೆ ಪ್ರತಿ ತಿಂಗಳು 2000ಗಳಂತೆ ಇಎಂಐ ಪಾವತಿಸುವುದರ ಮೂಲಕ ನಿಮ್ಮ ಕನಸಿನ ಸ್ಕೂಟರ್ ಅನ್ನು ಮನೆಗೆ ಕೊಂಡೊಯ್ಯಬಹುದು.

Benling Aura ಒಂದು ಫ್ಯಾನ್ಸಿ ಎಲೆಕ್ಟ್ರಿಕಲ್ ಸ್ಕೂಟರ್ ಎಂದು ಹೇಳಬಹುದು. ಇದರ ಜೊತೆಗೆ ಈ ಸ್ಕೂಟರ್ ಸಾಮರ್ಥ್ಯ ಕೂಡ ಉತ್ತಮವಾಗಿದೆ. ಹಾಗಾಗಿ ಪರಿಸರ ಸ್ನೇಹಿ, ಎಲೆಕ್ಟ್ರಿಕ್ ರೈಡ್ ಅನುಭವ ನೀಡುವ Benling Aura ಸ್ಕೂಟರ್ ಅನ್ನು ಇಂದೇ ನಿಮ್ಮದಾಗಿಸಿಕೊಳ್ಳಿ

advertisement

Leave A Reply

Your email address will not be published.