Karnataka Times
Trending Stories, Viral News, Gossips & Everything in Kannada

PMGKY: ಬಡವರ್ಗದ ಜನರಿಗೆ ಕೇಂದ್ರ ಸರ್ಕಾರದಿಂದ ಬಂತು ಬಂಪರ್ ಸುದ್ದಿ, ಸಿಗಲಿದೆ ಆಹಾರ ಧಾನ್ಯ!

advertisement

ಅನ್ನಭಾಗ್ಯ ಯೋಜನೆ ಮೂಲಕ ಹಲವು ಜನರು‌ ಬದುಕು ಸಾಗಿಸುತ್ತಿದ್ದಾರೆ. ಬಡ ವರ್ಗದ ಜನತೆಗೆ ಇದು ಬಹಳಷ್ಟು ಸಹಾಯಕವಾಗಿದೆ. ಬಡತನ‌ವರ್ಗದ ಕೆಳಗಿರುವ ಜನತೆಗೆ ಈ ಸೌಲಭ್ಯ ದೊರಕುತ್ತಿದ್ದು, ಈಗಲೂ ಆಹಾರ ಧಾನ್ಯ ಗಳನ್ನು ಖರೀದಿ ಮಾಡುತ್ತಿದ್ದಾರೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ (PM Garib Kalyan Yojana) ಮೂಲಕ ಸರ್ಕಾರವು ಆಹಾರ ಧಾನ್ಯಗಳನ್ನು ಅಲ್ಲದೆ ಇತರ ಆರೋಗ್ಯ ಸೇವೆಗಳನ್ನು ಕೂಡ ನೀಡುತ್ತಿದ್ದು ಸರ್ಕಾರಿ ಆಸ್ಪತ್ರೆಗಳು ಮತ್ತು ಆರೋಗ್ಯ ಕೇಂದ್ರಗಳಲ್ಲಿ ಸಹಾಯ ಹಸ್ತ ಕೂಡ ನೀಡುತ್ತಿದೆ.

ಗರೀಬ್ ಕಲ್ಯಾಣ ಯೋಜನೆ ವಿಸ್ತರಣೆ

ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರ ಸರಕಾರವು ಮಹತ್ವದ ನಿರ್ಧಾರ ಕೈಗೊಂಡಿದ್ದು ಉಚಿತ ಆಹಾರ ಧಾನ್ಯಗಳನ್ನು ಒದಗಿಸುವ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯನ್ನು ಐದು ವರ್ಷಗಳವರೆಗೆ ವಿಸ್ತರಿಸಲು ಕೇಂದ್ರ ಸರ್ಕಾರ ಇದೀಗ ಅನುಮೋದನೆ ನೀಡಿದೆ.

ಗುರಿಯನ್ನು‌ ಹೊಂದಿದೆ

ದೇಶದ 80 ಕೋಟಿಗೂ ಅಧಿಕ ಜನರಿಗೆ ಉಚಿತ ಆಹಾರ ಧಾನ್ಯಗಳನ್ನು ಒದಗಿಸುವ ಯೋಜನೆ ಇದಾಗಿದ್ದು ಜನವರಿ 1, 2024ರಿಂದ 5 ವರ್ಷ ವಿಸ್ತರಣೆ ಮಾಡುವ ಗುರಿಯನ್ನು ಹೊಂದಿದೆ. ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಬಡ ಜನತೆಗೆ ಉಪಯೋಗವಾಗುವ ನಿಟ್ಟಿನಲ್ಲಿ ಈ ಯೋಜನೆ ಯನ್ನು ಜಾರಿಗೆ ತರಲಾಯಿತು. PMGKY ಅಡಿಯಲ್ಲಿ 2.76 ಲಕ್ಷ ಕೋಟಿ ರೂಪಾಯಿಯ ಪ್ಯಾಕೇಜ್ ಅನ್ನು ಈ ಸಂದರ್ಭದಲ್ಲಿ ಘೋಷಣೆ ಮಾಡಿದರು.

advertisement

ಲಾಭ ದೊರೆಯಲಿದೆ

ಈ ಯೋಜನೆಯ ಮೂಲಕ ಪ್ರತಿ ತಿಂಗಳು 5 ಕೆಜಿ ಆಹಾರ ಧಾನ್ಯಗಳನ್ನು ಪಡೆಯಲಿದ್ದಾರೆ. ಹಾಗೆಯೇ, ಅಂತ್ಯೋದಯ ಕುಟುಂಬಗಳಿಗೂ ಈ ಯೋಜನೆ ಹೆಚ್ಚು ನೇರವಾಗಲಿದೆ. ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ ಯೋಜನೆ ಮೂಲಕ 80 ಕೋಟಿ ಪಡಿತರ ಫಲಾನುಭವಿಗಳಿಗೆ ಇದರ ಲಾಭ ದೊರಯಲಿದ್ದು, ಇದಕ್ಕಾಗಿ 53,344 ಕೋಟಿ ರೂ. ಹೆಚ್ಚುವರಿ ವೆಚ್ಚವನ್ನು ಸರ್ಕಾರ ವ್ಯಯ ಮಾಡಲಿದೆ. ಈ ಮೂಲಕ ಬಡವರ್ಗದ ಜನತೆಗೆ ಇದು ಮತ್ತಷ್ಟು ನೆರವಾಗಲಿದೆ.

ಒಂದು ದೇಶ, ಒಂದು ಪಡಿತರ ಚೀಟಿ

ಇನ್ಮುಂದೆ ಒಂದು ದೇಶ, ಒಂದು ಪಡಿತರ ಚೀಟಿಗೆ ಹೆಚ್ಚು ಉತ್ತೇಜನ ನೀಡಲಿದೆ. ದೇಶದ ಯಾವುದೇ ನ್ಯಾಯಬೆಲೆ ಅಂಗಡಿಯಿಂದ ಫಲಾನುಭವಿಗಳು ಉಚಿತವಾಗಿ ಆಹಾರ ಧಾನ್ಯಗಳನ್ನು ಪಡೆಯಲು ‌ಇನ್ಮುಂದೆ ಅವಕಾಶ ಇದ್ದು, ವಲಸೆ ಕಾರ್ಮಿಕರಿಗೆ ಅಪಾರ ರೀತಿಯ ಪ್ರಯೋಜನ ಸಿಗಲಿದೆ.

advertisement

Leave A Reply

Your email address will not be published.