Karnataka Times
Trending Stories, Viral News, Gossips & Everything in Kannada

LPG Price: ಡಿಸೆಂಬರ್ ಮೊದಲ ದಿನಕ್ಕೆ ಸಿಲಿಂಡರ್ ಬೆಲೆ ಏರಿಕೆ ಬಿಸಿ!

advertisement

ಪ್ರತೀ ತಿಂಗಳು ಆರಂಭ ಆಗುವಾಗ ಕೆಲ ಅಗತ್ಯ ಬದಲಾವಣೆ ತಿಂಗಳ ಮೊದಲ ದಿನ ಪ್ರಕಟ ಆಗುವುದು ಕಾಣಬಹುದು. ಅಂತಹ ಬದಲಾವಣೆಯಲ್ಲಿ ಅಡುಗೆ ಅನಿಲ LPG ದರ ಏರಿಳಿತ ಕೂಡ ಸೇರಿಕೊಂಡಿದೆ. ಕಳೆದ ಸಲ ಎಲ್ ಪಿಜಿ (LPG) ದರ ಕಡಿಮೆ ಮಾಡಲಾಗಿತ್ತು ಬಳಿಕ ಪಂಚ ರಾಜ್ಯಗಳ ಚುನಾವಣೆ ಮುಗಿದ ಬಳಿಕ LPG ದರ ಹೆಚ್ಚಳ ಮಾಡಲಾಗುತ್ತಿದೆ‌. ಹಾಗಾಗಿ ಈ ಬಗ್ಗೆ ವಿಶೇಷ ಮಾಹಿತಿ ನಿಮಗೆ ಇಂದು ನಾವು ನೀಡಲಿದ್ದೇವೆ.

ಬೆಲೆ ಹೆಚ್ಚಳ

ಅಡುಗೆ ಅನಿಲ ಇಂದು ಅವಶ್ಯಕ ಇರುವ ನಿತ್ಯ ಉಪಯೋಗಿ ಸಾಧನವಾಗಿದೆ‌. ಸೌದೆ ಒಲೆ ಮುಕ್ತಿ ಸುಲಭ ವಿಧಾನ ಬಡವರಿಗೂ ಸಿಗಬೇಕು ಎಂಬ ನೆಲೆಯಲ್ಲಿ LPG ರನ್ನು ಸರಕಾರಿ ಸ್ವಾಮ್ಯದ ಅಡಿಯಲ್ಲಿ ಖಾಸಗಿ ಗಿಂತ ಕಡಿಮೆ ಬೆಲೆಗೆ ಮತ್ತು ಸಬ್ಸಿಡಿ ನೀಡುವ ಮೂಲಕ ಹಣ ವಿತರಣೆ ಮಾಡಲಾಗಿದೆ. ಆದರೆ ವಾಣಿಜ್ಯ ಸಿಲಿಂಡರ್ ಬೆಲೆ ಏರುತ್ತಲಿದ್ದು ಗ್ರಾಹಕರಿಗೆ ಸಂಕಷ್ಟ ಎದುರಾಗಿದೆ. ಬೆಲೆಗಳ ವಿಚಾರಕ್ಕೆ ಬಂದರೆ ತಿಂಗಳಿಂದ ತಿಂಗಳಿಗೆ ಬೆಲೆ ಏರಿಳಿತ ಕಾಣಲಿದ್ದು ಡಿಸೆಂಬರ್ 1, 2023ರಿಂದ 19 Kg LPG ಸಿಲಿಂಡರ್ ಮೇಲೆ 21 ರೂ. ಬೆಲೆ ಹೆಚ್ಚಳ ಮಾಡಲಾಗಿದೆ.

ದುಬಾರಿ ಆಗುತ್ತೆ

advertisement

ಬೆಲೆ ಹೆಚ್ಚಳ ಮಾಡುವ ಕಾರಣ ಗ್ರಾಹಕರಿಗೆ ಈ ಮೊತ್ತ ದುಬಾರಿಯಾಗೇ ಕಾಣಲಿದೆ. ಹಾಗಾದರೆ ಎಷ್ಟು ಇದ್ದ ಬೆಲೆ ಎಷ್ಟಾಗಿರಬಹುದು ಎಂದು ನಿಮಗೂ ಕುತೂಹಲ ಇರಬಹುದು.

  • ಕೊಲ್ಕತ್ತಾ- 19 kg LPG ಬೆಲೆ 1,885.50 ಇದ್ದ ಬೆಲೆ 1,908 ರೂಪಾಯಿಯಾಗಲಿದೆ.
  • ಚೆನ್ನೈ- 19 kg LPG ಬೆಲೆ 1942ಇದ್ದ ಬೆಲೆ 1,968.50 ರೂಪಾಯಿಯಾಗಲಿದೆ.
  • ಮುಂಬೈ- 19 kg LPG ಬೆಲೆ 1,728 ಇದ್ದ ಬೆಲೆ 1,749 ರೂಪಾಯಿಯಾಗಲಿದೆ.
  • ದಿಲ್ಲಿ- 19 kg LPG ಬೆಲೆ 1,775.50 ಇದ್ದ ಬೆಲೆ 1,796.50 ರೂಪಾಯಿಯಾಗಲಿದೆ.
  • ಇನ್ನು ಹೈದ್ರಾಬಾದ್, ತೆಲಂಗಾಣ- 2024.5, ರಾಜಸ್ಥಾನ- 1819ರೂಪಾಯಿ, ಛತ್ತೀಸ್ಗಢ, ರಾಯ್ಪರದಲ್ಲಿ 2004, ಮಧ್ಯ ಪ್ರದೇಶ, ಭೂಪಾಲ್- 1804.5 ರೂಪಾಯಿಗೆ ಇರಲಿದೆ‌.

ಈ ಏರಿಕೆ ಯಾರಿಗೆ?

ಈ ಒಂದು ಎಲ್ ಪಿಜಿ ಸಿಲಿಂಡರ್ ಮೇಲಿನ ಬೆಲೆ ಏರಿಕೆ ವಾಣಿಜ್ಯ LPG ಗೆ ಮಾತ್ರ ಇರಲಿದೆ. ಅದಕ್ಕೆ ಮುಖ್ಯ ಕಾರಣ ಹಣದುಬ್ಬರ ಸ್ಥಿತಿ ಎನ್ನಬಹುದು. ಸದ್ಯ ವಾಣಿಜ್ಯ ಸಿಲಿಂಡರ್ ನಲ್ಲಿ 19kg ಸಿಲಿಂಡರ್ ಬೆಲೆ ಏರಿಕೆ ಮಾಡಲಾಗಿದೆ ಆದರೆ ಸರಕಾರದಿಂದ ಯೋಜನೆ ಮೂಲಕ ನೀಡಲ್ಪಟ್ಟ ಸಿಲಿಂಡರ್ ಗೆ ಬೆಲೆ ಏರಿಕೆ ನಿಯಮ ಅನ್ವಯವಾಗಲಾರದು. ಅದೇ ರೀತಿ ವಾಣಿಜ್ಯಿಕ ಹೊಟೇಲ್ ಉದ್ಯಮ ಮಾಡುವವರಿಗೆ ದೊಡ್ಡ ಅಂಗಡಿಯ ಮಾಲೀಕರಿಗೆ ಈ ಬೆಲೆ ಏರಿಕೆ ಬಿಸಿ ಬಹಳ ತಟ್ಟಲಿದೆ. ಈ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಮೆಂಟ್ ಮಾಡಿ ತಿಳಿಸಿ.

advertisement

Leave A Reply

Your email address will not be published.