Karnataka Times
Trending Stories, Viral News, Gossips & Everything in Kannada

Virat Kohli: ವಿರಾಟ್ ಕೊಹ್ಲಿ ನಿವೃತ್ತಿ ಪಡೆಯುತ್ತಿದ್ದಾರಾ? ಟೆಸ್ಟ್ ಸರಣಿ ಮಾತ್ರ ಆಡ್ತೇನೆ ಅನ್ನೊ ಕಾರಣ ಏನು ಗೊತ್ತಾ?

advertisement

ಟೀಮ ಇಂಡಿಯಾ ಪವರ್ ಫುಲ್ ಆಟಗಾರ ವಿರಾಟ್ ಕೊಹ್ಲಿ (Virat Kohli) ಅವರು ಇತ್ತೀಚೆಗೆ ವಿಶ್ವಕಪ್ ನಲ್ಲಿ ಅತ್ಯುತ್ತಮ ಆಟವನ್ನೇ ಪ್ರದರ್ಶಿಸಿದ್ದರು. ಸತತ ಗೆಲುವು ಕಂಡರೂ ಅಂತಿಮವಾಗಿ ವಿಶ್ವಕಪ್ ಫೈನಲ್ ನಲ್ಲಿ ಟೀಂ ಇಂಡಿಯಾ ತನ್ನ ತಾಯ್ನಾಡಿನಲ್ಲೇ ಸೋತಿದ್ದು ದೊಡ್ಡ ಆಘಾತವನ್ನೇ ನೀಡಿತ್ತು. ಈ ನಡುವೆ ಮುಂಬರುವ ಮ್ಯಾಚ್ ಗಳಲ್ಲಿ ವಿರಾಟ್ ಆಡುವುದಿಲ್ಲ, ಅವರು ನಿವೃತ್ತಿ ಪಡೆಯುತ್ತಾರೆ ಎಂಬ ಮಾಹಿತಿ ತಿಳಿದು ಬಂದಿದ್ದು ಈ ಬಗ್ಗೆ ಆಸಕ್ತಿದಾಯಕ ಮಾಹಿತಿ ಇಲ್ಲಿದೆ.

ರನ್ ಸಾಧನೆ

ಡಿಸೆಂಬರ್ ನಲ್ಲಿ ನಡೆಯಲಿರುವ T20 ವಿಶ್ವಕಪ್ ಮತ್ತು ಏಕದಿನ ಸರಣಿಯಿಂದ ವಿರಾಟ್ ಕೊಹ್ಲಿ ಹಿಂದೆ ಸರಿದಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಈ ನಡುವೆ ದಕ್ಷಿಣ ಆಫ್ರಿಕಾದ ಸರಣಿ ವಿರುದ್ಧ ಟೀ ಇಂಡಿಯಾ ಪರ ಮಾತ್ರ ಆಡಲಿದ್ದಾರೆ ಬಳಿಕ ಪಂದ್ಯದಿಂದ ದೂರ ಸರಿಯುತ್ತಾರೆ ಎಂಬ ಸುದ್ದಿ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಶ್ವಕಪ್ ನಲ್ಲಿ ಹೆಚ್ಚಿನ ರನ್ ಗಳಿಸಿ ಸಾಧನೆ ಮಾಡಿದ್ದ ವಿರಾಟ್ ಮುಂದಿನ ನಡೆ ಬಗ್ಗೆ ಅವರ ಅಭಿಮಾನಿಗಳ ಕುತೂಹಲ ಕೆರಳಿದೆ ಎನ್ನಬಹುದು.

BCCI ಗೆ ಸೂಚನೆ

ದಕ್ಷಿಣಾ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಕೇಳಿ ಬಂದಿದ್ದು ವಿರಾಟದ ಕೊಹ್ಲಿ ಅವರೇ ಸ್ವತಃ ಈ ಬಗ್ಗೆ BCCI ಗೆ ಮಾಹಿತಿ ನೀಡಿದ್ದಾರೆ. ಡಿ. 10ರಿಂದ ದಕ್ಷಿಣಾ ಆಫ್ರಿಕಾದಲ್ಲಿ ಮ್ಯಾಚ್, ಮೂರು T20, ಮೂರು ಏಕದಿನ ಹಾಗೂ ಎರಡು ಟೆಸ್ಟ್ ಪಂದ್ಯ ನಡೆಯಲಿದೆ. ಈ ಅವಧಿಯಲ್ಲಿ T20ಯಲ್ಲಿ ಅವರು ಆಡಲಾರರು, ಹಾಗೂ ಮೂರು ಏಕದಿನ ಪಂದ್ಯದಲ್ಲಿ ಸಹ ಅವರು ಇರಲಾರರು. ಅವರನ್ನು ಟೆಸ್ಟ್ ಗೆ ಮಾತ್ರ ಆಯ್ಕೆ ಮಾಡುವಂತೆ ಅವರೇ BCCIಗೆ ಸೂಚನೆ ನೀಡಿ ತಿಳಿಸಿದ್ದಾರೆ.

advertisement

ಈ ಆಟ ಆಡಲಿದ್ದಾರೆ

ವಿರಾಟ್ ಕೊಹ್ಲಿ ಅವರು ಕೊನೆಯ ಎರಡು ಟೆಸ್ಟ್ ಪಂದ್ಯವನ್ನು ಆಡಲಿದ್ದಾರೆ ಎಂದು ಬಿಸಿಸಿಐ ಗೆ ತಿಳಿಸಿದ್ದಾರೆ. ಉಳಿದ ಅವಧಿಗೆ ರೆಸ್ಟ್ ಲೀವ್ (Rest Leave) ಅನ್ನು ಸಹ ಹಾಕಿದ್ದಾರೆ. ಹಾಗಾಗಿ ದಕ್ಷಿಣಾ ಆಫ್ರಿಕಾದ ವಿರುದ್ಧ ಭಾರತದ ರೋಚಕ ಆಟ ಸವಿಯಲು ಕಾಯುತ್ತಿದ್ದ ಟೀಂ ಇಂಡಿಯಾ ಹಾಗೂ ವಿರಾಟ್ ಅಭಿಮಾನಿಗಳಿಗೆ ನಿರಾಸೆ ಉಂಟುಮಾಡಿದೆ.

ಕುಟುಂಬಕ್ಕೆ ವಿಶೇಷ ಸಮಯ

ವಿರಾಟ್ ಕೊಹ್ಲಿ ಅವರು ಫ್ಯಾಮಿಲಿ ಮೆನ್ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ. ಪತ್ನಿ ಮತ್ತು ಮಕ್ಕಳಿಗೆ ವಿಶೇಷ ಸಮಯ ನೀಡುವುದರಲ್ಲಿ ವಿರಾಟ್ ಮುಂಚುಣಿಯಲ್ಲಿದ್ದಾರೆ. ಟೆಸ್ಟ್ ಪಂದ್ಯ ಹೊರತಾಗಿ ಉಳಿದ ಮ್ಯಾಚ್ ಅವರು ಆಡುತ್ತಿಲ್ಲ‌‌. ಈ ಅವಧಿಯಲ್ಲಿ ಅವರು ತಮ್ಮ ಕುಟುಂಬದ ಜೊತೆ ಲಂಡನ್ ಪ್ರವಾಸಕ್ಕೆ ಹೋಗಲಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ಇದು ಎಷ್ಟರ ಮಟ್ಟಿಗೆ ನಿಜ ಎಂಬುದು ಮುಂದಿನ ದಿನದಲ್ಲಿ ನಮಗೆ ತಿಳಿಯಲಿದೆ.

advertisement

Leave A Reply

Your email address will not be published.