Karnataka Times
Trending Stories, Viral News, Gossips & Everything in Kannada

8th Pay Commission: ಸರ್ಕಾರೀ ನೌಕರರಿಗೆ ವೇತನದ ಬಗ್ಗೆ ಮಹತ್ವದ ಆದೇಶ ಹೊರಡಿಸಿದ ಸರ್ಕಾರ.

advertisement

ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಬಲಿಷ್ಟವಾಗಿ ತನ್ನ ನೆಲೆ ಉಳಿಸಿಕೊಂಡಿದೆ‌. ಈ ಚುನಾವಣೆ ಬಳಿಕ ರಾಜ್ಯ ಮಾತ್ರವಲ್ಲದೇ ಇಡೀ ದೇಶದ ಚಿಂತನೆ ಲೋಕಸಭೆಯ ಗೆಲುವಿನ ಮೇಲಿದೆ ಎನ್ನಬಹುದು.ಹಾಗಾಗಿ ಇಂಡಿಯಾ ಇತರ ಮೈತ್ರಿಕೂಟ ಕೂಡ ಏರ್ಪಟ್ಟಿದ್ದು ಸರಕಾರಿ ಹಾಗೂ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮುಂಬರುವ ಚುನಾವಣೆ ಮತ್ತು ಇತರ ಮಹತ್ವದ ಮಾಹಿತಿ ನೀಡಲಾಗುತ್ತಿದೆ. ಈ ಮೂಲಕ ಎಂಟನೇ ವೇತನ ಆಯೋಗದ ವಿಚಾರ ಕೂಡ ಹೊಸ ಮಟ್ಟದ ಚರ್ಚೆಗೆ ಗುರಿಯಾಗಿದ್ದು ಇದೀಗ ಈ ಬಗ್ಗೆ ಸ್ಪಷ್ಟ ಮಾಹಿತಿಯೊಂದು ದೊರೆತಿದೆ.

ಲೋಕಸಭೆ ಚುನಾವಣೆಗೂ ಮುಂಚಿತವಾಗಿ ಅನೇಕ ರಾಷ್ಟ್ರೀಯ ಪಕ್ಷಗಳು ಈ ಬಗ್ಗೆ ಮುನ್ನೆಚ್ಚರಿಕೆ ವಹಿಸುತ್ತಿದೆ. ಜನರಿಗೆ ಚುನಾವಣೆ ಪೂರ್ವಕ್ಕೆ ಭರವಸೆ, ನೀತಿ ನಿರೂಪಣೆ ಜಾರಿ ಮಾಡುತ್ತಿದೆ. ರಾಷ್ಟ್ರೀಯ ಚುನಾವಣೆಗೆ ಮುನ್ನ ಕೇಂದ್ರ ಸರಕಾರಿ ನೌಕರರನ್ನು ಮತ್ತು ಪಿಂಚಣಿದಾರರಿಗೆ 8ನೇ ವೇತನ ಆಯೋಗ (8th Pay Commission)ರಚನೆ ಮಾಡುವ ಅಧಿಕಾರ ಸರಕಾರಕ್ಕೆ ಇಲ್ಲ ಎಂದು ಹಣಕಾಸು ಕಾರ್ಯದರ್ಶಿ ಅವರು ಈ ಬಗ್ಗೆ ಮಾಧ್ಯಮದ ಮುಂದೆ ಮಾಹಿತಿ ನೀಡಿದ್ದಾರೆ.

ಅವರು ಹೇಳಿದ್ದೇನು?

advertisement

ಕೇಂದ್ರ ಹಣಕಾಸು ಕಾರ್ಯದರ್ಶಿಯಾದ ಟಿವಿ ಸೋಮನಾಥ್ (T.V. Somanathan)ಅವರು ಈ ಬಗ್ಗೆ ಮಾತನಾಡಿದ್ದು , ಸದ್ಯ ಎಂಟನೇ ವೇತನ ಆಯೋಗದ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಈ ಬಗ್ಗೆ ಯಾವುದೇ ರಚನಾ ಸಭೆ ಕೂಡ ನಡೆಯಲಿಲ್ಲ. ಈ ಬಗ್ಗೆ ಚುನಾವಣೆ ಸನಿಹ ಇದ್ದ ಕಾರಣ ಅನೇಕ ಅಲ್ಲ ಸಲ್ಲದ ಕಥೆಗಳು ಕೇಳಿ ಬರುತ್ತಿದೆ. ಆದರೆ ಪ್ರಸ್ತುತ ಯಾವುದೇ ತೀರ್ಮಾನ ಈ ಬಗ್ಗೆ ಕೈಗೊಂಡಿಲ್ಲ ಎಂದು ಅವರು ತಿಳಿಸಿದ್ದಾರೆ.

ಈ ಹಿಂದಿನ ಅವಧಿಗಳಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಜನರನ್ನು ಅದರಲ್ಲಿ ಸರಕಾರಿ ನೌಕರರನ್ನು ಮತ್ತು ಪಿಂಚಣಿ ದಾರರನ್ನು ಒಲಿಸಲು ವೇತನ ಹೆಚ್ಚಳದ ಭರವಸೆ ನೀಡುತ್ತಿತ್ತು ಆದರೆ ಎಂಟನೇ ವೇತನ ಆಯೋಗದ ವಿಚಾರದಲ್ಲಿ ಹಾಗಾಗಲಾರದು. ಅದರ ನಿರ್ಧಾರ ಚುನಾವಣೆಗೆ ಮೊದಲು ಸರಕಾರಕ್ಕೆ ಸಂಬಂಧಿಸಿದ್ದಲ್ಲ. ಈ ಹಿಂದೆ ಏಳನೇ ವೇತನ ಆಯೋಗ ಕಾ‌ಂಗ್ರೆಸ್ ಅವಧಿಯಲ್ಲಿ UPI ಸರಕಾರ 2013ರ ಸೆಪ್ಟೆಂಬರ್ ತಿಂಗಳಲ್ಲಿ ಜಾರಿಗೆ ಬಂದಿತ್ತು ಆದರೆ ಬಿಜೆಪಿ ಚುನಾವಣೆಗೂ ಮುನ್ನ ಇಂತಹ ನಿರ್ಧಾರಕ್ಕೆ ಬರಲಾರದು ಎಂದಿದ್ದಾರೆ.

ಒಟ್ಟಾರೆಯಾಗಿ ಕೇಂದ್ರ ಸರಕಾರದ ನೌಕರರ ವೇತನ ವಿಷಯವಾಗಿ ಈಗಾಗಲೇ ಅನೇಕ ವಿವಾದದ ಸುಳಿಯಲ್ಲಿ ಸಿಲುಕಿದ್ದು, ಸಾರ್ವತ್ರಿಕ ಚುನಾವಣೆಗೆ ಮುನ್ನ ಈ ಬಗ್ಗೆ ಯಾವ ನಿರ್ಧಾರಕ್ಕೂ ಸರಕಾರ ಮುಂದಾಗಿಲ್ಲ ಎಂದು ಈ ಮೂಲಕ ತಿಳಿದುಬಂದಿದೆ. ಮುಂದಿನ ದಿನದಲ್ಲಿ ಹೊಸ ವೇತನ ವ್ಯವಸ್ಥೆ ಪರಿಶೀಲನೆ ಆಗಲಿದೆ ಎಂದು ಅವರು ತಿಳಿಸಿದ್ದಾರೆ.

advertisement

Leave A Reply

Your email address will not be published.