Karnataka Times
Trending Stories, Viral News, Gossips & Everything in Kannada

Govt. Rule: ಸರ್ಕಾರದ ಈ ಕೆಲಸಗಳಿಗೆ ಡಿಸೆಂಬರ್ ತಿಂಗಳೇ ಡೆಡ್ ಲೈನ್, ಕೂಡಲೇ ಮುಗಿಸಿಕೊಳ್ಳಿ.

advertisement

ವರ್ಷದಲ್ಲಿ ಪ್ರತೀ ತಿಂಗಳ ಆರಂಭಕ್ಕೆ ನೂತನ ಯೋಜನೆ, ಅನುಷ್ಠಾನ, ಬೆಲೆ, ನಿಯಮ ಇನ್ನಿತರ ಬರುವುದು ಸಾಮಾನ್ಯ‌. ಈಗ ಈ ವರ್ಷದ ಕೊನೆ ಕಾಲಘಟ್ಟದಲ್ಲಿ ನಾವಿದ್ದೇವೆ ಹಾಗಾಗಿ ಡಿಸೆಂಬರ್ ತಿಂಗಳಲ್ಲಿ ಯಾವೆಲ್ಲ ಬದಲಾವಣೆಗೆ ನೀವು ಒಗ್ಗೊಳ್ಳಬೇಕು ಯಾವೆಲ್ಲ ಪ್ರಮುಖ ಸಂಗತಿ ಮೇಲೆ ನಿಗಾ ವಹಿಸಬೇಕು ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಂದು ನಾವು ನೀಡಲಿದ್ದೇವೆ.

2023ರ ಡಿಸೆಂಬರ್ 1 ನೇ ತಾರೀಖಿಗೆ ಅನೇಕ ಸಂಗತಿಗಳು ಬದಲಾಗಲಿದೆ. ಇವುಗಳಲ್ಲಿ ಕೆಲವೊಂದು ಜೀವನ ಸಂಗತಿಗೆ ಕೆಲವೊಂದು ಆರ್ಥಿಕ ಹೊಡೆತ ನೀಡುವ ಅಂಶ ಸಹ ಕಾಣಬಹುದು. ಇದು ಡಿಸೆಂಬರ್ ಒಂದರಿಂದ ಜಾರಿಯಾಗುವ ಕಾರಣ ಈ ಎಲ್ಲ ಸಂಗತಿಗಳ ಬಗ್ಗೆ ಜನರಿಗೆ ಅರಿವು ಇರುವುದು ಅತ್ಯವಶ್ಯಕವಾಗಿದೆ. ಅವುಗಳನ್ನು ಈ ಕೆಳಗಿನಂತಡ ನೀಡಲಿದ್ದೇವೆ.

ಈ ನಿಯಮ ಕಡ್ಡಾಯವಾಗಲಿದೆ 

ವಾಣಿಜ್ಯ ಸಿಲಿಂಡರ್ ಬೆಲೆ ಹೆಚ್ಚಳ- ದೇಶದ ಪ್ರಮುಖ ನಗರದಲ್ಲಿರುವ ಖಾಸಗಿ ವಾಣಿಜ್ಯ ಸಿಲಿಂಡರ್ ಬೆಲೆ ಹೆಚ್ಚಳಕ್ಕೆ ತೀರ್ಮಾನಿಸಿದೆ. 19 kg ಸಿಲಿಂಡರ್ ಬೆಲೆ 21 ರೂ. ಏರಿಕೆಯಾಗಲಿದೆ.

advertisement

ಆಧಾರ್ ನವೀಕರಣ- ಆಧಾರ್ ಕಾರ್ಡ್ (Aadhaar Card) ನ ಮಾಹಿತಿಯನ್ನು ನವೀಕರಿಸಲು ಕೊನೆ ದಿನಾಂಕ ಡಿಸೆಂಬರ್ 14. 10ವರ್ಷಕ್ಕೂ ಮೊದಲು ಆಧಾರ್ ಮಾಡಿಸಿ ನವೀಕರಿಸದಿದ್ದರೆ ಆಧಾರ್ ಪೋರ್ಟಲ್ ಬಳಸಿ ಅಪ್ಡೇಟ್ ಮಾಡಲು ಸಾಕಷ್ಟು ಸಮಯಾವಕಾಶ ನೀಡಲಾಗಿತ್ತು. ಇದಕ್ಕೆ 50ರೂಪಾಯಿ ಶುಲ್ಕ ಕೂಡ ಇದ್ದು ಕೂಡಲೇ ಹಳೆ ಆಧಾರ್ ಅನ್ನು ನವೀಕರಿಸಬಹುದು.

ಲಾಕರ್ ನಿಯಮ ಬದಲು- ಬ್ಯಾಂಕಿನ ಲಾಕರ್ ನಿಯಮ ಕೊಂಚ ಮಟ್ಟಿಗೆ ಬದಲಾಯಿಸಲು RBI ಸೂಚನೆ ನೀಡಿದೆ. ಪ್ರತೀ ವರ್ಷವೂ ಗ್ರಾಹಕರ ಜೊತೆ ಚರ್ಚಿಸಿ ಹೊಸ ಒಪ್ಪಂದಕ್ಕೆ ಸಹಿ ಹಾಕಿದ್ದ ಮೇಲೆ ಬಳಕೆದಾರರು ಬಾಡಿಗೆ ಪಾವತಿ ಒಪ್ಪಿದರೆ ಮಾತ್ರ ಲಾಕರ್ ಮುಂದುವರಿಸಲು ಸಮ್ಮತಿಸಲಾಗುವುದು. ಡಿಸೆಂಬರ್ 31ರ ಒಳಗೆ ಸಹಿ ಹಾಕುವುದು ಕಡ್ಡಾಯ.

UPI ಐಡಿ ನಿಯಮ- ಯುಪಿಐ ಐಡಿ ನಿಯಮದಲ್ಲಿ ನ್ಯಾಶನಲ್ ಪೇಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ ನವೆಂಬರ್ 7 ರಂದು ಅಕ್ರಮ ಯುಪಿಐ ಐಡಿ ಮತ್ತು ಅಪ್ಲಿಕೇಶನ್ ಸಂಖ್ಯೆ ನಿಷ್ಕ್ರಿಯ ಮಾಡಲು ಸೂಚಿಸಲಾಗಿತ್ತು ಆದರೆ ಅದನ್ನು ಹೊಸ ಸುತ್ತೋಲೆ ನೀಡಿ ಡಿಸೆಂಬರ್ 31ರ ವರೆಗೆ ಸಮಯ ನೀಡಲಾಗಿದೆ.

ಮ್ಯೂಚುವಲ್ ಫಂಡ್ ನಿಯಮ- ಮ್ಯೂಚುವಲ್ ಫಂಡ್ (Mutual Fund)ಹೂಡಿಕೆ ದಾರರಿಗೆ ಕೆಲ ನಿಯಮ ಈ ತಿಂಗಳಲ್ಲಿ ಮಾಡುವುದು ಕಡ್ಡಾಯ. ಫಂಡ್ ಮಾಡಿದವರು ನಿಧನರಾದರೆ ಕ್ಲೈಂ ಮಾಡಲು ಮತ್ತು ನಾಮ ನಿರ್ದೇಶನ ಮಾಡಲು ಡಿಸೆಂಬರ್ 31ರ ವರೆಗೆ ಸಮಯ ನೀಡಲಾಗುವುದು.

ಒಟ್ಟಾರೆಯಾಗಿ ಡಿಸೆಂಬರ್ ತಿಂಗಳಲ್ಲಿ ಸರಕಾರದ ನಿಯಮ ಮತ್ತು ಅನೇಕ ಸಂಗತಿ ಸಹ ಬದಲಾಗಲಿದ್ದು ಈ ಬಗ್ಗೆ ಗಮನಿಸುವುದು ಅತ್ಯಗತ್ಯವಾಗಿದೆ. ಹಾಗಾಗಿ ಇದೇ ತಿಂಗಳ ಬಗ್ಗೆ ಬದಲಾಗುವ ಈ ಸಂಗತಿ ಬಗ್ಗೆ ನಿಮ್ಮ ಸ್ನೇಹಿತರಿಗೆ ಮಾಹಿತಿ ನೀಡುವುದು ಸಹ ಅವಶ್ಯಕ ‌. ಈ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಮೆಂಟ್ ಮೂಲಕ ತಿಳಿಸಿ.

advertisement

Leave A Reply

Your email address will not be published.