Karnataka Times
Trending Stories, Viral News, Gossips & Everything in Kannada

RBI: 2000 ರೂ. ನೋಟಿನ ಬಗ್ಗೆ ಮಹತ್ವದ ಮಾಹಿತಿ ಹೊರಹಾಕಿದ ಆರ್ ಬಿ ಐ

advertisement

ಎರಡು ಸಾವಿರ ಮುಖ ಬೆಲೆಯ ನೋಟು ರದ್ದು ಮಾಡಿದ್ದ ವಿಚಾರ ಎಲ್ಲರಿಗೂ ತಿಳಿದದ್ದೇ ಆಗಿದ್ದು ಇದರ ರದ್ಧತಿ ಬಳಿಕ ಬ್ಯಾಂಕಿಗೆ ಮತ್ತು ಸರಕಾರಿ ಸಂಸ್ಥೆಗಳ ಮುಖೇನ ಈ ನೋಟು ಹಿಂದಿರುಗಿಸಲು ತಿಳಿಸಲಾಗಿತ್ತು. ಹಿಂದಿರುಗಿಸಲು ಸಹ ನಿರ್ದಿಷ್ಟ ಗಡುವು ಕೂಡ ನೀಡಿದ್ದು ಈಗ ಈ ಅವಧಿ ಸಹ ಮುಕ್ತಾಯವಾಗಿದೆ. ಅದೇ ರೀತಿ ಬ್ಯಾಂಕಿಗೆ ಎರಡು ಸಾವಿರ ಮುಖಬೆಲೆಯ ಅಷ್ಟೂ ನೋಟು ಮರಳಲಿಲ್ಲ ಎಂಬ ಕುತೂಹಲ ಕಾರಿ ಮಾಹಿತಿಯೊಂದು ಹೊರ ಬಂದಿದೆ.

RBI ನಿಂದಲೇ ಮಾಹಿತಿ

ನೋಟು ಅಮಾನ್ಯೀಕರಣ ಆದ ಬಳಿಕ ಅದನ್ನು ಹಿಂದಿರುಗಿಸಿ ಚಲಾವಣೆಯಲ್ಲಿ ಇರುವ ನೋಟನ್ನು ಬಳಸುವುದು ಆರ್ ಬಿಐನ ಸೂಚನೆಯಾಗಿದ್ದು ಈ ಹಿನ್ನೆಲೆಯಲ್ಲಿ ನೋಟು ವಾಪಾಸ್ಸು ನೀಡಿದ್ದವರ ಪೈಕಿ ಒಟ್ಟು 97.26% ಎರಡು ಸಾವಿರ ಮುಖಬೆಲೆಯ ನೋಟುಗಳು ಬ್ಯಾಂಕಿಗೆ ಮರಳಿದೆ. ಆದರೆ 9,760ಕೋಟಿ ರೂಪಾಯಿ ಇನ್ನೂ ಕೂಡ ಬ್ಯಾಂಕಿಗೆ ಮರಳದೆ ಅದು ಸಾರ್ವಜನಿಕರ ಬಳಿಯೇ ಇದೆ ಎಂದು RBI ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದೆ.

advertisement

ಎರಡು ಸಾವಿರ ಮುಖ ಬೆಲೆ ನೋಟು ಹಿಂದಿರುಗಿಸುವಂತೆ ಮೇ 19ರಂದು RBI ಘೋಷಣೆ ಮಾಡಿತ್ತು. ಅದರಂತೆ ಆ ಸಂದರ್ಭದಲ್ಲಿ 3.56ಲಕ್ಷ ಕೋಟಿ ರೂಪಾಯಿ ಹಿಂದಿರುಗಿಸಲಾಗಿದೆ‌. ನವೆಂಬರ್ 30ರ ವರೆಗೆ ಚಲಾವಣೆ ಇದ್ದ ಈ ನೋಟಿನ ಮೌಲ್ಯ 9,760 ಕೋಟಿ ರೂ. ಇಳಿಕೆ ಆಗಿದೆ‌. ಇನ್ನು ಕೂಡ ಇಷ್ಟು ಮೌಲ್ಯದ ಹಣ ಸಾರ್ವಜನಿಕರ ಬಳಿ ಇದೆ. ಇದುವರೆಗೆ ಎರಡು ಸಾವಿರ ಮುಖ ಬೆಲೆಯ 97.26% ದಷ್ಟು ನೋಟು ಹಿಂದುರುಗಿಸಿದ್ದಾರೆ.

ಎರಡು ಸಾವಿರ ಮುಖ ಬೆಲೆಯ ನೋಟು ಕಾನೂನು ಬದ್ಧವಾಗಿ ಮುಂದುವರಿಯುತ್ತದೆ ಎಂದು ಈ ಹಿಂದೆ ಮಾಹಿತಿ ನೀಡಿದ್ದು ಸೆಪ್ಟಂಬರ್ 30 ರ ಒಳಗೆ ನೋಟು ಬದಲಿಸಿಕೊಳ್ಳಲು ಎಲ್ಲ ಬ್ಯಾಂಕುಗಳಿಗೆ, ಅಂಚೆ ಕಚೇರಿಗೆ ಮತ್ತು ಸಂಸ್ಥೆಗಳಿಗೆ ಹಣ ನೀಡಬಹುದು ಎಂದು RBI ಮಾಹಿತಿ ನೀಡಿತ್ತು. ಅದರಂತೆ ಅಹಮದಾಬಾದ್ , ಲಕ್ನೋ, ದೆಹಲಿ, ಕೊಲ್ಕತ್ತಾ ಇತರ ಪ್ರದೇಶದಲ್ಲಿ ಪ್ರಾದೇಶಿಕ ಕಚೇರಿಯಲ್ಲಿಯೂ ನೋಟು ವಿನಿಮಯ ಮಾಡಲು ಅವಕಾಶ ನೀಡಿತ್ತು.

ಬಳಿಕ ಅಕ್ಟೋಬರ್ 7 ರ ವರೆಗೂ ಸಮಯ ನೀಡಿ ಬಳಿಕ ಬ್ಯಾಂಕಿನಲ್ಲಿ ಠೇವಣಿ ಮತ್ತು ಎರಡು ಸಾವಿರ ಮುಖ ಬೆಲೆ ನೋಟು ವಿನಿಮಯ ರದ್ದು ಗೊಳಿಸಲಾಗಿದೆ.ಅಕ್ಟೋಬರ್ ತಿಂಗಳಿನಿಂದ ನೋಟು ಅಮಾನತ್ತು ಮಾಡಿದರೂ ನೋಟು ವಾಪಾಸ್ಸು ನೀಡಲು ಕ್ಯೂ ಬಂದಿತ್ತು. ಆದರೆ ಹಾಗೆ ಬಂದ ಹಣ ಸ್ವೀಕರಿಸಲಾಗುವುದೇ ವಿನಹಃ ವಿನಿಮಯಕ್ಕೆ ಅನುಮತಿ ಇರಲಿಲ್ಲ.

advertisement

Leave A Reply

Your email address will not be published.