Karnataka Times
Trending Stories, Viral News, Gossips & Everything in Kannada

Senior Citizen: 60 ವರ್ಷ ಮೇಲ್ಪಟ್ಟ ವಯಸ್ಕರಿಗೆ ಮತ್ತೊಂದು ಸಿಹಿಸುದ್ದಿ ಕೊಟ್ಟ ರಾಜ್ಯ ಸರ್ಕಾರ.

advertisement

ಇಂದು ಜನರು ಧಾರ್ಮಿಕ‌ ಸ್ಥಳಗಳಿಗೆ ಭೇಟಿ ನೀಡುವ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ಈ ಸಂದರ್ಭದಲ್ಲಿ ಶುಭ ಸಮಾರಂಭಗಳು ಹೆಚ್ಚಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಧಾರ್ಮಿಕ ಸ್ಥಳಗಳಿಗೆ ಭಕ್ತರು ಭೇಟಿ ಕೊಡುತ್ತಾರೆ. ಈ ನಿಟ್ಟಿನಲ್ಲಿ ದೇವರ ದರ್ಶನ ಪಡೆಯಲು ಕಷ್ಟ ಸಾಧ್ಯ. ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಮಾಡ ಬೇಕಾಗುತ್ತದೆ. ಅದರಲ್ಲೂ ಹಿರಿಯರಿಗೆ ಇದು ಕಷ್ಟ ಸಾಧ್ಯವಾಗಿದ್ದು, ಇದೀಗ ವಿಶೇಷ ಅವಕಾಶ ವನ್ನು ನೀಡುವ ಮೂಲಕ ಹಿರಿಯ ಜನರಿಗೆ ಗುಡ್ ನ್ಯೂಸ್ ನೀಡಿದೆ.

ರಾಜ್ಯ ಸರ್ಕಾರ ಈ ಅವಕಾಶ ನೀಡಿದೆ

ಹಿರಿಯ ನಾಗರಿಕರಿಗೆ ರಾಜ್ಯ ಸರಕಾರ ಈ ಅವಕಾಶ ನೀಡಿದ್ದು, ಹೆಚ್ಚಿನ ಹಿರಿಯ ವರ್ಗದ ಜನರಿಗೆ ತಾವು ಅಂದು ಕೊಂಡ ದೇವಾಲಯಕ್ಕೆ ಹೋಗಿ ದರ್ಶನ ಪಡೆಯಬೇಕು ಎಂಬ ಆಸೆ ಇದ್ದೆ ಇರುತ್ತದೆ. ಹೀಗಾಗಿ ಇದಕ್ಕಾಗಿ ಸರಕಾರವು ಉತ್ತಮ ಅವಕಾಶ ವನ್ನು ನೀಡಿದೆ. 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ (Senior Citizen) ಈ ಅವಕಾಶ ಇದ್ದು ಹಿಂದೂ ಧಾರ್ಮಿಕ ದೇವಾಲಯಗಳಲ್ಲಿ ನೇರವಾಗಿ ದೇವರ ದರ್ಶನ ಪಡೆಯಬಹುದಾಗಿದೆ.

ಸರತಿ ಸಾಲಿನಲ್ಲಿ ನಿಲ್ಲ ಬೇಕಾಗಿಲ್ಲ

advertisement

ಹಿರಿಯ ನಾಗರಿಕರು ದೇವಾಲಯಕ್ಕೆ ಬಂದಾಗ ಸರತಿ ಸಾಲಿನಲ್ಲಿ ನಿಲ್ಲ ಬೇಕಾಗಿಲ್ಲ. ಅವರು ನೇರವಾಗಿ ದರ್ಶನಕ್ಕೆ ಬರಬಹುದು. ಈ ಬಗ್ಗೆ ಅಲ್ಲಿನ ಸಿಬ್ಬಂದಿಗಳು ಮಾಹಿತಿ ನೀಡಬೇಕು. ಈ ಮಾಹಿತಿಯನ್ನು ಈಗಾಗಲೇ ಎಲ್ಲಾ ದೇವಾಲಯಗಳಿಗೂ ತಿಳಿಸಲಾಗಿದೆ.

ಭಕ್ತರ ಸಂಖ್ಯೆ ಹೆಚ್ಚಳ

ಈಗ ದೇವಾಲಯಕ್ಕೆ ಭೇಟಿ ಕೊಡುವ ಸಂಖ್ಯೆ ಹೆಚ್ಚಾಗಿದ್ದು, ಹೀಗಾಗಿ ನೂಕು ನುಗ್ಗಲು ಕೂಡ ಹೆಚ್ಚಾಗಿದೆ. ಈ ಬಗ್ಗೆ ಗಮನ ವಹಿಸಿದ ರಾಜ್ಯ ಸರಕಾರ‌ ಈ ನಿರ್ಧಾರ ವನ್ನು ಕೈಗೊಂಡಿದೆ. ಈಗ ರಾಜ್ಯದ ಮೂಲೆ ಮೂಲೆಯಿಂದ ಸಾವಿರಾರು ಭಕ್ತರು ಈ ಸಂದರ್ಭದಲ್ಲಿ ಆಗಮಿಸುತ್ತಿದ್ದು, ಈಗ  ಭಕ್ತ ಸಾಗರವೇ ವಿವಿಧ ದೇವಾಲಯ ದರ್ಶನಕ್ಕೆ ಜನ ಹರಿದು ಬರುತ್ತಿದೆ. ಭಕ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಆದ್ರೂ ಜನಸಂಖ್ಯೆ ‌ಕಡಿಮೆ ಯಾಗಿಲ್ಲ. ಕೆಲವೊಂದು ದೇವಾಲಯದಲ್ಲಿ ಸರತಿ ಸಾಲಿನಲ್ಲಿ ಹೆಚ್ಚುಕಾಲ ನಿಲ್ಲಲು ಆಗಲ್ಲ ಎನ್ನುವ ಕಾರಣದಿಂದಾಗಿ ಭಕ್ತರಿಗಾಗಿ ವಿಶೇಷ ದರ್ಶನ ವ್ಯವಸ್ಥೆ ಕೂಡ ಮಾಡಲಾಗಿದೆ. ವಿಶೇಷ ದರ್ಶನ ಟಿಕೆಟ್‌ ಗೂ ಈಗ ಅವಕಾಶ ಇದೆ.

ಒಟ್ಟಿನಲ್ಲಿ ಹಿರಿಯ ವರ್ಗದ ಜನತೆಗೆ ಈ ವಿಶೇಷ ಸೌಲಭ್ಯ ಉತ್ತಮ ರೀತಿಯಲ್ಲಿ ಸದುಪಯೋಗ ಆಗಬಹುದಾಗಿದ್ದು ಮುಂದಿನ ದಿನದಲ್ಲಿ ದೇವಾಲಯಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಾಗಬಹುದು.

advertisement

Leave A Reply

Your email address will not be published.