Karnataka Times
Trending Stories, Viral News, Gossips & Everything in Kannada

Hyundai Car: 27Km ಮೈಲೇಜ್ ಹಾಗೂ ಕೇವಲ 6 ಲಕ್ಷ ಬೆಲೆಯ ಹುಂಡೈ ಕಂಪನಿಯ ಈ ಕಾರಿಗೆ ಭಾರಿ ಬೇಡಿಕೆ, 1 ಲಕ್ಷ ಬುಕಿಂಗ್!

advertisement

ಇಂದು ಪ್ರತಿಯೊಂದು ಮನೆಯಲ್ಲಿಯು ಒಂದಾದರೂ ವಾಹನದ ಅವಶ್ಯಕತೆ ಇದ್ದೆ ಇರುತ್ತದೆ. ಬಸ್ಸಿಗಾಗಿ ಹೆಚ್ಚು ಸಮಯದ ವರೆಗೆ ಕಾಯುವ ತಾಳ್ಮೆಯು ಇಂದು ಕಡಿಮೆ ಯಾಗಿದೆ.‌ ಹಾಗಾಗಿ ವಾಹನಗಳಿಗೂ ಬೇಡಿಕೆ ಹೆಚ್ಚಾಗಿದೆ. ಅದರಲ್ಲೂ ತಮ್ಮ ಇಷ್ಟದ ವಿನ್ಯಾಸದ ಕಾರು ಖರೀದಿ ಮಾಡಬೇಕೆಂಬ ಆಸೆ ಹೆಚ್ಚಿನವರದ್ದು ಆಗಿರುತ್ತದೆ. ಹಾಗಾಗಿ ಮಾರುಕಟ್ಟೆಯಲ್ಲಿ ಕಾರು ಖರೀದಿ ಮಾಡುವ ಸಂಖ್ಯೆ ಕೂಡ ಹೆಚ್ಚಾಗಿದೆ.‌ ಇದೀಗ ವಿಶೇಷ ವೈಶಿಷ್ಟ್ಯದ ಕಾರು ಖರೀದಿ ಮಾಡಬೇಕು ಎಂದು ಕನಸು ಇದ್ದವವರಿಗೆ ಈ ಕಾರು ಬುಕ್ಕಿಂಗ್ ಮಾಡಲು ಸೂಕ್ತ ಅವಕಾಶ ಇದೆ.

ದಾಖಲೆಯ ಬುಕ್ಕಿಂಗ್

ಮೈಕ್ರೋ ಎಸ್‌ಯುವಿ ವಿಭಾಗದಲ್ಲಿ ಹ್ಯುಂಡೈ ಎಕ್ಸ್‌ಟರ್‌ (Hyundai Exter) ಭಾರೀ ಬೇಡಿಕೆ ಇದ್ದು, ಯುವಕರಿಗಂತೂ ಇದರ ಕ್ರೇಜ್ ಹೆಚ್ಚಾಗಿದೆ. ಈ ಕಾರಿನಲ್ಲಿ ಆಕರ್ಷಕ ವೈಶಿಷ್ಟ್ಯ, ವಿನ್ಯಾಸ ಇದ್ದು ದಾಖಲೆ ಮಟ್ಟದಲ್ಲಿ ಬುಕ್ಕಿಂಗ್ ಆಗುತ್ತಿದೆ. ಇದು ಕೇವಲ ಐದೇ ತಿಂಗಳಲ್ಲಿ 1 ಲಕ್ಷಕ್ಕೂ ಅಧಿಕ ಆರ್ಡರ್ ಪಡೆದುಕೊಂಡಿದ್ದು, ಬೇಡಿಕೆ ಮಾತ್ರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

advertisement

ವಿಶೇಷ ವೈಶಿಷ್ಟ್ಯ

ಹ್ಯುಂಡೈ ಎಕ್ಸ್‌ಟರ್‌ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿದ್ದು ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಕ್ರೂಸ್ ಕಂಟ್ರೋಲ್ (Cruise Control), ಸಿಂಗಲ್ ಪೇನ್ ಸನ್‌ರೂಫ್ (Single Pane Sunroof), ಡ್ಯುಯಲ್ ಕ್ಯಾಮೆರಾ ಇತ್ಯಾದಿ ವೈಶಿಷ್ಟ್ಯ ಗಳು ಇದ್ದು ಯುವಕರನ್ನು ಭಾರೀ ಆಕರ್ಷಣೆ ಮಾಡಿದೆ. ಅಷ್ಟೆ ಅಲ್ಲದೆ ರೇರ್ ಪಾರ್ಕಿಂಗ್ ಕ್ಯಾಮೆರಾ, ISOFIX ಚೈಲ್ಡ್ ಸೀಟ್ ಸೇರಿದಂತೆ ವಿವಿಧ ಸೇಫ್ಟಿ ಫೀಚರ್ಸ್ ಹೊಂದಿದೆ.

ಬೆಲೆ ಎಷ್ಟು?

ಈ ಹ್ಯುಂಡೈ ಎಕ್ಸ್‌ಟರ್‌ ಮಾರುಕಟ್ಟೆ ಯಲ್ಲಿ ಸೂಕ್ತವಾದ ಬೆಲೆಗೆ ಸಿಗಲಿದ್ದು ಪೆಟ್ರೋಲ್ ಮತ್ತು ಸಿಎನ್‌ಜಿ ಮಾದರಿಯಲ್ಲಿ ವಾಹನ ಪ್ರೀಯರಿಗೆ ದೊರೆಯುತ್ತದೆ. ಇದು 83 PS ಗರಿಷ್ಠ ಪವರ್ ಹಾಗೂ 114 Nm ಪೀಕ್ ಟಾರ್ಕ್ ಉತ್ಪಾದನೆ ಮಾಡಿ‌, 5 ಸ್ಪೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ನೊಂದಿಗೆ ಲಭ್ಯವಿದ್ದು, 27.1 km/kg ಮೈಲೇಜ್ ನೀಡುತ್ತದೆ. ದೇಶದಲ್ಲಿ ಹ್ಯುಂಡೈ ಎಕ್ಸ್‌ಟರ್‌ ರೂ.6 ಲಕ್ಷದಿಂದ ರೂ.10.15 ಲಕ್ಷ ವರೆಗೆ ಇದ್ದು 5 ರೂಪಾಂತರಗಳು ಇದೆ.

ಒಟ್ಟಿನಲ್ಲಿ ನೂತನ ಮಾಡೆಲ್ ನ ಹೊಸ ಫೀಚರ್ಸ್ ಹೊಂದಿರುವ ಕಾರನ್ನು ಖರೀದಿ ಮಾಡಬೇಕು ಎಂದವರಿಗೆ ಈ ಕಾರು ಖರೀದಿ ಮಾಡಲು ಉತ್ತಮ ಆಯ್ಕೆ ಯಾಗಿದೆ.

advertisement

Leave A Reply

Your email address will not be published.