Karnataka Times
Trending Stories, Viral News, Gossips & Everything in Kannada

Jio Offer: ಜಿಯೋ ಗ್ರಾಹಕರಿಗೆ ಭರ್ಜರಿ ಸುದ್ದಿ, ಸಿಗಲಿದೆ ಕ್ಯಾಶ್ ಬ್ಯಾಕ್ ಆಫರ್!

advertisement

ಮೊಬೈಲ್ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಸಿಮ್ ಕಂಪೆನಿಗಳಿಗೆ ಬೇಡಿಕೆ ಕೂಡ ಅಧಿಕವಾಗುತ್ತಿದೆ. ಹಾಗಾಗಿ ನೆಟ್ವರ್ಕ್ ಕಂಪೆನಿಗಳ ನಡುವೆ ಮಾರುಕಟ್ಟೆಯಲ್ಲಿ ಪೈಪೋಟಿ ಏರ್ಪಟ್ಟಿದೆ. ಭಾರತೀಯ ದೈತ್ಯ ಕಂಪೆನಿಯಾದ ಜಿಯೋ ತನ್ನ ಗ್ರಾಹಕರ ಹಿತದೃಷ್ಟಿಯಿಂದ ಅನೇಕ ಆಫರ್ ಗಳನ್ನು ಈ ಹಿಂದಿನಿಂದ ನೀಡುತ್ತಲೇ ಬಂದಿದೆ. ಈ ಮೂಲಕ ಪ್ರಿಪೇಯ್ಡ್ ಮೊಬೈಲ್ ಹೆಚ್ಚುವರಿ ಯೋಜನೆ ಜೊತೆಗೆ ಉಚಿತ ಡಾಟಾ ನೀಡಲು ಮುಂದಾಗಲಾಗಿದೆ.

ಕ್ಯಾಶ್ ಬ್ಯಾಕ್ ಸೌಲಭ್ಯ

ಜಿಯೋ ಕಂಪೆನಿ ಬಳಕೆದಾರರನ್ನು ಆಕರ್ಷಿಸಲು ಅನೇಕ ಯೋಜನೆ ಈ ಹಿಂದಿನಿಂದಲೂ ನೀಡುತ್ತಾ ಬಂದಿದೆ. ಅಂತಹ ಆಫರ್ ನ ಸಾಲಿನಲ್ಲಿ ಪ್ರೀಪೇಯ್ಡ್ ರೀಚಾರ್ಜ್ ಮಾಡಿದರೆ ಕ್ಯಾಶ್ ಬ್ಯಾಕ್ ಫೆಸಿಲಿಟಿ ನೀಡಲಾಗುತ್ತಿದೆ‌. ಅಂದರೆ ಜಿಯೋ ಪ್ರೀಪೇಯ್ಡ್ ಪ್ಲ್ಯಾನ್ (Jio Prepaid Plan) ಅಡಿಯಲ್ಲಿ 866ರೂಪಾಯಿ ರಿಚಾರ್ಜ್ ಮಾಡಿದರೆ 50ರೂಪಾಯಿ ಕ್ಯಾಶ್ ಬ್ಯಾಕ್ ಸೌಲಭ್ಯ ಪಡೆಯಬಹುದು. 84ದಿನದಲ್ಲಿ ಲಭ್ಯ ಆಗುವ ಈ ರೀಚಾರ್ಜ್ ನೀವು ಹಾಕಿಕೊಂಡರೆ ಕ್ಯಾಶ್ ಬ್ಯಾಕ್ ಸೌಲಭ್ಯ ಪಡೆಯಬಹುದು.ಅದರ ಜೊತೆಗೆ 2GB ಡಾಟಾ ಸೌಲಭ್ಯ ಸಿಗಲಿದೆ.

advertisement

ಕಂಪೆನಿಯು ಬಳಕೆದಾರರಿಗೆ 5G ಡೇಟಾ ಸಹ ನೀಡಲಿದ್ದು ಗ್ರಾಹಕರನ್ನ ಆಕರ್ಷಿಸಲಿದೆ. ಅನಿಯಮಿತ ಕರೆ ಮಾಡಲು ಸಹ ಅನುಮತಿ ನೀಡಲಾಗಿದೆ. 100 ನಿಯಮಿತ ಉಚಿತ SMS ಸೇವೆ ಸಹ ಸಿಗಲಿದೆ. ಅಷ್ಟು ಮಾತ್ರವಲ್ಲದೇ ಅದ್ಭುತ ಹೆಚ್ಚುವರಿ ಪ್ರಯೋಜನ ಸಿಗಲಿದೆ. ಈ ಯೋಜನೆಯ ಮೂಲಕ ಜಿಯೋ ಕ್ಲೌಡ್ ಮೂಲಕ ಉಚಿತ ಪ್ರವೇಶ ನೀಡಲಿದ್ದು ಆ್ಯಪ್ ಮೂಲಕ ಸಿನೆಮಾ ನೋಡಬಹುದು.

ಜಿಯೋ ರೀಚಾರ್ಜ್ ನಲ್ಲಿ 399 ರೂಪಾಯಿಗೆ 28 ದಿನದ ವ್ಯಾಲಿಡಿಟಿ ಸೇವೆ ಸಿಗಲಿದೆ. 6GB ಡಾಟಾ ಸೌಲಭ್ಯ ಕೂಡ ಸಿಗಲಿದೆ. 5G ಸೌಲಭ್ಯದ ಜೊತೆಗೆ 3GB ಡಾಟಾ ಪಡೆಯಬಹುದು. ಈ ಮೂಲಕ 100 SMS ನೀಡಲಿದೆ. ಜಿಯೋ ಟಿವಿ (Jio TV), ಜಿಯೋ ಸಿನೆಮಾ (Jio Cinema) ಉಚಿತ ಚಂದಾದಾರಿಕೆ ಸಹ ಪಡೆಯಬಹುದು. ಇದಕ್ಕಾಗಿ ಜಿಯೋ ಕ್ಲೌಡ್ ನಲ್ಲಿ ಸಹ ಉಚಿತ ಪ್ರವೇಶ ಪಡೆಯಲಿದ್ದು ಸಿನೆಮಾ ಇತರ ಮನೋರಂಜನೆ ಕಾರ್ಯಕ್ರಮ ವೀಕ್ಷಿಸಲು ಸಹಕಾರಿ ಆಗಲಿದೆ.

219ರೂ. ಗೆ ಈ ಸೌಲಭ್ಯ ಇದೆ

219ರೂಪಾಯಿ ಈ ಯೋಜನೆ 14ದಿನದ ವ್ಯಾಲಿಡಿಟಿ ಹೊಂದಿದೆ. ಇಂಟರ್ನೆಟ್ ಬಳಕೆಗೆ 3GB ಡಾಟಾ ಸೌಲಭ್ಯ ಇದೆ. ಇದರಲ್ಲಿ ಕೂಡ ಜಿಯೋ ಆ್ಯಪ್ ಮೂಲಕ ಸಿನೆಮಾ ನೋಡಬಹುದು. ಅಷ್ಟು ಮಾತ್ರವಲ್ಲದೆ ಗ್ರಾಹಕರಿಗೆ 5GB ವಿಶೇಷ ಪ್ಯಾಕ್ ವ್ಯವಸ್ಥೆ ಸಹ ನೀಡಲಾಗುವುದು. ನೀವು ಜಿಯೋ ಸಿಮ್ ಬಳಕೆದಾರರಾಗಿದ್ದಲ್ಲಿ ಯಾವುದು ಬೆಸ್ಟ್ ಆಫರ್ ಎಂಬ ಬಗ್ಗೆ ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

advertisement

Leave A Reply

Your email address will not be published.