Karnataka Times
Trending Stories, Viral News, Gossips & Everything in Kannada

Bank Employees: ಬ್ಯಾಂಕಿನ ಸಿಬ್ಬಂದಿಗಳಿಗೆ ಬಂಪರ್ ಸುದ್ದಿ, ವೇತನ ಹೆಚ್ಚಳಕ್ಕೆ ಗ್ರೀನ್ ಸಿಗ್ನಲ್‌

advertisement

ಇತ್ತೀಚಿನ ದಿನದಲ್ಲಿ ಬ್ಯಾಂಕ್ ಉದ್ಯೋಗಿಗಳ ಸ್ಥಾನಮಾನ ಈ ಹಿಂದಿಗಿಂತಲೂ ಉತ್ತಮವಾಗಿದೆ. ಹಾಗಾಗಿ ಸರಕಾರಿ ಬ್ಯಾಂಕ್ ಉದ್ಯೋಗ ಬಯಸುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಇದೀಗ ಇದೇ ಸರಕಾರಿ ಬ್ಯಾಂಕ್ ಉದ್ಯೋಗಿಗಳಿಗೆ ಹೊಸದೊಂದು ಸಂತಸದ ಸುದ್ದಿ ಕಾಯುತ್ತಿದ್ದು ಹೊಸ ವರ್ಷಕ್ಕೂ ಮೊದಲೇ ಉಡುಗೊರೆ ನೀಡಿದಂತಾಗಿದೆ. ಹಾಗಾದರೆ ಆ ವಿಚಾರ ಯಾವುದು ಎಂಬ ಇತ್ಯಾದಿ ಮಾಹಿತಿ ಇಂದಿನ ಲೇಖನದಲ್ಲಿ ನಾವು ನೀಡಲಿದ್ದೇವೆ.

ದೇಶಾದ್ಯಂತ ಸರಕಾರಿ ಬ್ಯಾಂಕಿನಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಇದೀಗ ಖುಷಿಯ ವಿಚಾರವೊಂದು ತಿಳಿದು ಬಂದಿದೆ‌. ಸಿಬಂದಿಗಳ ವೇತನವನ್ನು ಹೆಚ್ಚಿಸಲು ತೀರ್ಮಾ‌ನಿಸುವ ಜೊತೆಗೆ ವಾರದಲ್ಲಿ 5ದಿನದಲ್ಲಿ ಕೆಲಸ ಅವಧಿ ನಿಗಧಿಪಡಿಸಲಾಗಿದೆ. ಬ್ಯಾಂಕ್ ಸಿಬಂದಿಗೆ ವೇತನವನ್ನು 15% ನಿಂದ 20% ಏರಿಕೆ ಮಾಡುವುದು ಮತ್ತು ವಾರದಲ್ಲಿ 5 ದಿನ ಕೆಲಸದ ನಿಯಮ ಜಾರಿಯಾಗಲಿದೆ.

ಮಾಧ್ಯಮದಲ್ಲಿ ವರದಿ

ವೇತನ ಹೆಚ್ಚಳದ ಬಗ್ಗೆ ಇತ್ತೀಚೆಗೆ ಮಾಧ್ಯಮದಲ್ಲಿ ದೊಡ್ಡ ಮಟ್ಟಿಗೆ ವರದಿಯಾಗಿದೆ. ಸಾರ್ವಜನಿಕ ವಲಯ ಬ್ಯಾಂಕುಗಳು ಮತ್ತು ಐಬಿಎ ನಡುವೆ ಅಸ್ತಿತ್ವದಲ್ಲಿರುವ ವೇತನ ಒಪ್ಪಂದವು 2022ರ ನವೆಂಬರ್ 1ಕ್ಕೆ ಮುಕ್ತಾಯವಾಗಿದ್ದು ಅದರ ಬಳಿಕ ಬ್ಯಾಂಕುಗಳ ಸಿಬ್ಬಂದಿ ವೇತನ ಹೆಚ್ಚಳಕ್ಕೆ ಬ್ಯಾಂಕುಗಳ ಒಕ್ಕೂಟ ಹಾಗೂ IBA ನಡುವೆ ಅನೇಕ ಚರ್ಚೆಗಳಾಗಿವೆ.

advertisement

ಬ್ಯಾಂಕ್ ಆಫ್ ಯೂನಿಯನ್, ಬ್ಯಾಂಕ್ ಅಸೋಸಿಯೇಷನ್ ಹಾಗೂ IBA (ಭಾರತೀಯ ಬ್ಯಾಂಕ್ ಅಸೋಸಿಯೇಶನ್ ) ನಡುವೆ ಮಾತುಕತೆ ನಡೆದಿದ್ದು ಇದೇ ತಿಂಗಳ ಅಂದರೆ ಡಿಸೆಂಬರ್ ನಂದೆ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಈ ಪ್ರಕಾರ ಮೊದಲು ನಗರ ಭಾಗದಲ್ಲಿ ಬಳಿಕ ಗ್ರಾಮೀಣ ಮತ್ತು ಪ್ರಾದೇಶಿಕ ಬ್ಯಾಂಕ್ ಉದ್ಯೋಗಿಗಳ ವೇತನ ಕೂಡ ಹೆಚ್ಚಾಗುವ ಸಾಧ್ಯತೆ ಇದೆ‌ ಎಂದು ಮಾಧ್ಯಮಗಳು ಈ ಬಗ್ಗೆ ವರದಿ ಸಲ್ಲಿಸಿದೆ.

ಈ ವಿಶೇಷ ಸೌಲಭ್ಯ ಸಹ ದೊರೆಯಲಿದೆ

ಮಾಧ್ಯಮ ಸಂಸ್ಥೆಗಳ ವರದಿ ಅನ್ವಯ ವೇತನ ಹೆಚ್ಚಳ ಆಗುವ ಜೊತೆಗೆ ಐದುದಿನ ಮಾತ್ರ ಕೆಲಸದ ಅವಧಿ ನಿಯಮ ಬರುವ ಸಾಧ್ಯತೆ ಇದೆ. ಅಂದರೆ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ರಜೆ ಘೋಷಣೆ ಮಾಡಲಾಗುತ್ತಿದ್ದು ಇನ್ನು ಮುಂದೆ ಎಲ್ಲ ಶನಿವಾರ ರಜೆ ಸಿಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಕೆಲಸದ ಅವಧಿಯ ಪೆಂಡಿಂಗ್ ಸರಿದೂಗಿಸಲು ದಿನದ ಕೆಲಸದ ಅವಧಿ ಹೆಚ್ಚಿಸಲಾಗುತ್ತಿದೆ‌ ಎಂದು ಮಾಧ್ಯಮದ ವರದಿಗಳು ತಿಳಿಸಿದೆ.

ಇದರಿಂದ ಗ್ರಾಹಕರಿಗೆ ಠೇವಣಿ, ಚೆಕ್ ಪುಸ್ತಕ, ಪಾಸ್ ಬುಕ್ ಸಮಸ್ಯೆ ಬರಲಾರದು. ಹಣ ವರ್ಗಾವಣೆ ಮತ್ತು ಹಿಂಪಡೆಯುವಿಕೆ ಇಂತಹ ಪ್ರಕ್ರಿಯೆ ಮಾಡಲು ಆನ್ಲೈನ್ ಸೇವೆ ಇರಲಿದೆ. ವೇತನ ಹೆಚ್ಚಳ ಮತ್ತು ಐದು ದಿನದ ಕೆಲಸದ ಅವಧಿ ಬಗ್ಗೆ ಅಧಿಸೂಚನೆ ನೀಡಿ ಈ ಬಗ್ಗೆ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಬಹುದು.

advertisement

Leave A Reply

Your email address will not be published.