Karnataka Times
Trending Stories, Viral News, Gossips & Everything in Kannada

Google Chrome: ಮೊಬೈಲ್ ಅಥವಾ ಲ್ಯಾಪ್ಟಾಪ್ ಗಳಲ್ಲಿ ಗೂಗಲ್ ಕ್ರೋಮ್ ಬಳಸುವವರಿಗೆ ಎಚ್ಚರಿಕೆ ನೀಡಿದ ಸರ್ಕಾರ.

advertisement

ಇಂದು ನಾವು ನಮಗೆ ಬೇಕಾದ ಮಾಹಿತಿಯನ್ನು ಕೂತಲ್ಲಿ ಯಿಂದಲೇ ಮೊಬೈಲ್ ಮೂಲಕವೇ ಪಡೆದು ಕೊಳ್ಳುತ್ತೇವೆ. ಇಂದು ಬೇಕಾದಷ್ಟು ಸರ್ಚ್ ಇಂಜಿನ್ (Search Engine) ಗಳಿದ್ದು, ನಮಗೆ ಬೇಕಾದ ಮಾಹಿತಿ ಗಳನ್ನು ಇದರ ಮೂಲಕ ಪಡೆಯಬಹುದಾಗಿದೆ. ಅದರಲ್ಲೂ ಮೊಬೈಲ್ (Mobile) ಅಥವಾ ಲ್ಯಾಪ್‌ಟಾಪ್‌ (Laptop) ಇತರ ಡಿವೈಸ್‌ಗಳಲ್ಲಿ ಹೆಚ್ಚಾಗಿ ಬಳಕೆ ಮಾಡುವುದೇ ಗೂಗಲ್ ಕ್ರೋಮ್ (Google Chrome), ಅದರೆ ಈ ಕ್ರೋಮ್ ಅನ್ನು ಬಳಕೆ ಮಾಡುವ ಬಳಕೆದಾರರು ಇನ್ಮುಂದೆ ಎಚ್ಚರಿಕೆ ವಹಿಸುವುದು ಕೂಡ ಬಹಳ ಅಗತ್ಯ. ಇದೀಗ ಸರ್ಕಾರದ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-IN) ಈ ಬಗ್ಗೆ ಎಚ್ಚರಿಕೆ ನೀಡಿದ್ದು, ಬಳಕೆದಾದರಿಗೆ ಸ್ಕ್ಯಾಮರ್‌ಗಳು ಖಾಸಗಿತನಕ್ಕೆ ಧಕ್ಕೆ ತರುವ ಕೆಲಸ ವನ್ನು ಮಾಡುತ್ತಿದೆ.

Update ಮಾಡಿ:

 

 

ಬಳಕೆದಾರರು ಈಗ ಗೂಗಲ್ ಕ್ರೋಮ್ ಅನ್ನು ನವೀಕರಣ ಮಾಡುವುದು ಕಡ್ಡಾಯ ವಾಗಿದೆ ಎಂದು ಕೇಂದ್ರ ಸರಕಾರ (Central Govt) ಮಾಹಿತಿ ನೀಡಿದೆ. ಗೂಗಲ್‌ ಕ್ರೋಮ್‌ ಬ್ರೌಸರ್ (Chrome Browser) ಅನ್ನು ಸಾಧ್ಯವಾದಷ್ಟು ಬೇಗ ನವೀಕರಣ ಮಾಡಬೇಕು.ಈಗ ವಿವಿಧ ರೀತಿಯ ಸೈಬರ್ ಕ್ರೈಮ್ ಹೆಚ್ಚಾಗಿದ್ದು ನಿಮ್ಮ ವೈಯಕ್ತಿಕ ಸುರಕ್ಷತೆಗಾಗಿ ಮೊದಲು ನೀವು ನವೀಕರಣ ಮಾಡಬೇಕಿದೆ.

Device Hackers:

advertisement

 

ಇಂದು ಹ್ಯಾಕರ್‌ಗಳು ನಿಮ್ಮ ಡಿವೈಸ್‌ ಅನ್ನು ಹ್ಯಾಕ್ (Hack) ಮಾಡಿದರೆ, ಇದರಿಂದ ನಿಮ್ಮ ವೈಯಕ್ತಿಕ ಮಾಹಿತಿ, ಬ್ಯಾಂಕ್ ವಿವರಗಳು ಇತ್ಯಾದಿ ತಿಳಿಯುತ್ತದೆ. ಆದ್ದರಿಂದ ಗೂಗಲ್‌ ಕ್ರೋಮ್‌ ಬ್ರೌಸರ್ (Google Chrome Browser) ಅನ್ನು ಬೇಗ ನವೀಕರಿಸಬೇಕಿದ್ದು ಹೊಸ ನವೀಕರಣಗಳಲ್ಲಿ ಗೂಗಲ್  ಕೆಲವೊಂದು ಭದ್ರತಾ ಫೀಚರ್ಸ್‌ ಅನ್ನು ಇದೀಗ ನೀಡಿದೆ.

ಹಳೆಯ ವರ್ಷನ್ ಇದ್ದರೆ ಏನಾಗುತ್ತೆ?

ಒಂದು ವೇಳೆ ನೀವು ಹಳೆಯ ಆವೃತ್ತಿಗಳ ಗೂಗಲ್ ಕ್ರೋಮ್ ಬಳಕೆ ಮಾಡಿದರೆ ಜಾಗೃತೆ ವಹಿಸಿ. ಸೈಬರ್ ಕ್ರೈಮ್ (Cyber Crime) ಖದೀಮರು ಹಳೆಯ ವರ್ಷನ್ ಬಳಕೆ ಮಾಡುವ ಕ್ರೋಮ್ ಬಳಕೆದಾರರನ್ನು ಗುರಿಯಾಗಿಸಿಕೊಂಡಿದ್ದಾರೆ. ಹಾಗಾಗಿ‌ ನೀವು ಈ ಡಿವೈಸ್ ಬಳಕೆ ಮಾಡುತ್ತಿದ್ದರೆ ಈ ಕ್ಷಣವೇ ಅಪ್‌ಡೇಟ್‌ ಮಾಡಿ, ನವೀಕರಣ ಮಾಡಿ.

New Feature:

ಗೂಗಲ್ ಕ್ರೋಮ್ ಬಳಸುವ ವಿಂಡೋಸ್, ಲಿನಕ್ಸ್​ (Linux) ಬಳಕೆದಾರರಿಗಾಗಿ ಗೂಗಲ್ ಈಗ ನೂತನ‌ ಹೊಸ ಸೆಕ್ಯೂರಿಟಿ ಬಿಡುಗಡೆ ಮಾಡಿದ್ದು , ಮುಂದಿನ ದಿನಗಳಲ್ಲಿ ಈ ಫೀಚರ್ಸ್‌ ಎಲ್ಲರಿಗೂ ಲಭ್ಯವಾಗಲಿದೆ. ಗೂಗಲ್‌ ಕ್ರೋಮ್‌ ನಲ್ಲಿ ಈ ಹಿಂದೆಯೂ ಕೆಲವು ಬಾರಿ ಅಪಾಯ ಆಗಿದ್ದು ಈ ಬಗ್ಗೆ ಬಳಕೆದಾರರಿಗೆ ಗೂಗಲ್‌ ಈ ಮೊದಲೆ ಎಚ್ಚರಿಕೆ ನೀಡಿದೆ. ಹಾಗಾಗಿ ಗೂಗಲ್ ಕ್ರೋಮ್ ಬಳಕೆದಾದರು ಈ ಬಗ್ಗೆ ಎಚ್ಚರಿಕೆ ವಹಿಸುವುದು ಕೂಡ ಬಹಳ ಮುಖ್ಯವಾಗುತ್ತದೆ.

advertisement

Leave A Reply

Your email address will not be published.