Karnataka Times
Trending Stories, Viral News, Gossips & Everything in Kannada

Turbo Ventilator: ಕಾರ್ಖಾನೆಯ ಛಾವಣಿಯ ಮೇಲೆ ಈ ವೃತ್ತಾಕಾರದ ತಿರುಗುವ ಉಕ್ಕುಗಳನ್ನು ಇಡಲು ಕಾರಣವೇನು?

advertisement

ಇಂದು ಪಠ್ಯ ದಲ್ಲಿ ಇರುವ ಮಾಹಿತಿ ಗಿಂತಲೂ ಹೊರಗಿನ ಆಗು ಹೋಗುಗಳ ಬಗ್ಗೆ ನಮ್ಮ ಸುತ್ತಲೂ ಆಗುವ ಅನೇಕ ವಿಷಯಗಳನ್ನು ಅರಿತುಕೊಳ್ಳುವುದು ಸಹ ಬಹಳ ಮುಖ್ಯವಾಗುತ್ತದೆ. ಹೆಚ್ಚಿನ ವಿದ್ಯಾರ್ಥಿಗಳು ದಿನ ನಿತ್ಯದ ಆಗು ಹೋಗುಗಳ ಬಗ್ಗೆ ತಿಳಿಯದೇ ಕೇವಲ ಪಠ್ಯ ಪುಸ್ತಕ, ಹೆಚ್ಚಿನ‌ ಮಾರ್ಕ್ ಗಳಿಸುವುದು ಇತ್ಯಾದಿಗಳ ಬಗ್ಗೆ ಗಮನ ಹರಿಸುತ್ತಾರೆ. ಆದರೆ ಕೆಲವೊಂದು ಸಾಮಾನ್ಯ ಜ್ಞಾನದ ಬಗ್ಗೆಯು ಅರಿವು ಇರಬೇಕು. ಅದೇ ರೀತಿ ಫ್ಯಾಕ್ಟರಿ, ಕಾರ್ಖಾನೆ ಮೇಲೆ ಸ್ಟೀಲ್ ಪಾತ್ರೆಯಂತೆ ಸುತ್ತುತ್ತಿರುವ ತಿರುಗುವ ಮಷೀನ್ ನೀವು ನೋಡಿರಬಹುದು. ಅದು ಏನು? ಯಾಕಾಗಿ ಬಳಕೆ ಮಾಡುತ್ತಾರೆ ಎನ್ನುವ ಕುತೂಹಲ ಇದ್ದರೆ ಈ ಲೇಖನ ಓದಿ.

ತಿರುಗುವ ಮಿಷನ್:

 

 

advertisement

ಕಾರ್ಖಾನೆಯ ಮೇಲ್ಛಾವಣಿಯ ಮೇಲೆ ವೃತ್ತ ಆಕಾರದಲ್ಲಿ ತಿರುಗುವ ಮೂಲಕ ಇದು ಕಾರ್ಯ ನಿರ್ವಹಿಸುತ್ತದೆ. ಈ ವಸ್ತುವನ್ನು ಟರ್ಬೊ ವೆಂಟಿಲೇಟರ್ (Turbo Ventilator) ಎಂದು ಕರೆಯಲಾಗುತ್ತದೆ. ಇದನ್ನು ರೈಲು ನಿಲ್ದಾಣಗಳು (Railway Stations), ಅಂಗಡಿಗಳು (Shops) ಮತ್ತು ಇತರ ಹಲವು ಸ್ಥಳಗಳಲ್ಲಿ ಕಾರ್ಖಾನೆಗಳ ಮೇಲ್ಛಾವಣಿಯಲ್ಲಿ ಈ ತಿರುಗುವ ವೆಂಟಿಲೇಟರ್‌ಗಳನ್ನು ನೀವು ನೋಡಿರಬಹುದು‌, ಇದು ಸೂರ್ಯನ ಬೆಳಕಿನಲ್ಲಿ ಬಹಳ ಹೊಳಪಿನಲ್ಲಿ ಪ್ರಕಾಶಮಾನವಾಗಿ ಕಾಣುತ್ತದೆ.

ಇದರ ಕಾರ್ಯ ಏನು?

  • ಕಾರ್ಖಾನೆಯ ಮೇಲ್ಛಾವಣಿಗಳಲ್ಲಿ ಇರಿಸಲಾಗಿರುವ ಟರ್ಬೊ ವೆಂಟಿಲೇಟರ್‌ಗಳು (Turbo Ventilators) ಚಲಿಸುವ ಫ್ಯಾನ್‌ಗಳಾಗಿದ್ದು ಕಾರ್ಖಾನೆ ಗಳಲ್ಲಿ ಬರುವ ಬಿಸಿ ಗಾಳಿಯನ್ನು ಈ ಟರ್ಬೊ ವೆಂಟಿಲೇಟರ್ ಹೊರಹಾಕುತ್ತದೆ.
  • ಮೇಲಿನಿಂದ ಒಳಗಿನ ಬಿಸಿ ಗಾಳಿಯನ್ನು ಹೊರಹಾಕಿ ಕಿಟಕಿ (Window) ಮತ್ತು ಡೋರ್ (Door) ಗಳ ಮೂಲಕ ಬರುವ ತಾಜಾ ಗಾಳಿಯನ್ನು ಕಾರ್ಖಾನೆಗಳಲ್ಲಿ ದೀರ್ಘಕಾಲ ಉಳಿಯುವಂತೆ ಮಾಡುತ್ತದೆ.
  • ಮಳೆಗಾಲದಲ್ಲಿ ಕಾರ್ಖಾನೆಯಲ್ಲಿ ಇರುವ ತೇವಾಂಶವನ್ನು ತೆಗೆದುಹಾಕಲು ಇದು ಸಹಕಾರಿ ಯಾಗುತ್ತದೆ.
  • ಹವಾಮಾನ ಬದಲಾದಾಗ ಒಳಗಿನ ತೇವಾಂಶವನ್ನೂ ಹೊರಹಾಕಿ ತಾಜಾ ಮತ್ತು ನೈಸರ್ಗಿಕ ಗಾಳಿ ಬರುವಂತೆ ಮಾಡುತ್ತದೆ.
  • ಕಾರ್ಖಾನೆಗಳು (Factories) ಅಥವಾ ಆವರಣದೊಳಗೆ ಹೆಚ್ಚು ಕೆಲಸ ಮಾಡುವುದರಿಂದ ಬಹಳಷ್ಟು ಶಾಖ ಹೆಚ್ಚಾಗಿ ಕೆಲಸಗಾರರಿಗೆ ಕಾರ್ಖಾನೆ ಒಳಗೆ ಬಿಸಿ ಹೆಚ್ಚಾಗುತ್ತದೆ. ಇದನ್ನು ತಡೆಯುವ ಮೂಲಕ ಕಾರ್ಯ ನಿರ್ವಹಿಸುತ್ತದೆ.

advertisement

Leave A Reply

Your email address will not be published.