Karnataka Times
Trending Stories, Viral News, Gossips & Everything in Kannada

Spam Message: ನಿಮ್ಮ ಮೊಬೈಲ್ ಗೆ ಇಂತಹ ಮೆಸೇಜ್‌ ಬಂದ್ರೆ ಓಪನ್ ಮಾಡ್ಬೇಡಿ, ಇಲ್ಲಾಂದ್ರೆ ಬ್ಯಾಂಕ್ ಖಾತೆ ಖಾಲಿ ಆಗುತ್ತೆ!

advertisement

ಇಂದು ಅನ್ಲೈನ ವಹಿವಾಟುಗಳು ಹೆಚ್ಚಾಗಿದೆ. ಅದೇ ರೀತಿ ಜನರನ್ನು ಬಹಳಷ್ಟು ಬೇಗನೆ ಮೋಸ ಮಾಡುವ ಪ್ರಕರಣಗಳು ಕೂಡ ಹೆಚ್ಚಾಗಿದೆ. ಇಂದು ಜನರು ಗೂಗಲ್ ಪೇ (Google Pay) , ಪೋನ್ ಪೇ (PhonePe)ಇತ್ಯಾದಿಯನ್ನು ಬಳಸಿಯೇ ಹಣ ಡೆಬಿಟ್ ಕ್ರಿಡಿಟ್ ಮಾಡಿಕೊಳ್ಳುತ್ತಾರೆ. ಆದರೆ ಇಂದು ಫೇಕ್ ಐಡಿ ತೆರೆದು ಮೋಸಗೊಳಿಸಿ ಅದೆಷ್ಟೋ ಮಂದಿ ತಮ್ಮ ಖಾತೆಯಿಂದ ಹಣ ಕಳೆದು ಕೊಂಡಿದ್ದಾರೆ. ಹಾಗಾಗಿ ಪ್ರತಿಯೊಬ್ಬರು ಎಚ್ಚೆತ್ತುಕೊಳ್ಳುವುದು ಬಹಳ ಮುಖ್ಯ ವಾಗುತ್ತದೆ. ಇಂತಹ ಮೆಸೇಜ್‌ (Message)ಗಳನ್ನು ಓದಿ ಪ್ರತಿ ಕ್ರಿಯೆ ನೀಡುವ ಬದಲು ಅವುಗಳನ್ನು ಡಿಲೀಟ್‌ ಮಾಡುವುದು ಬಹಳ ಉತ್ತಮ.

ಸಂದೇಶ ಬಂದ್ರೆ ನಿರ್ಲಕ್ಷಿಸಿ

ಇಂದು ಸ್ಮಾರ್ಟ್‌ಫೋನ್‌ಗಳಲ್ಲಿ ಹಲವು ರೀತಿಯ ಸಂದೇಶ ಗಳು ಬರುತ್ತವೆ. ಅದರಲ್ಲೂ ಆಧಾರ್ ಕಾರ್ಡ್ (Aadhaar Card), ಮೊಬೈಲ್ ಸಂಖ್ಯೆ, ಬ್ಯಾಂಕ್ ಖಾತೆ ಇತ್ಯಾದಿ ಲಿಂಕ್ ಮಾಡುವುದು ಕಡ್ಡಾಯ ವಾಗಿರುವುದರಿಂದ ನಮ್ಮ‌ ಮಾಹಿತಿಗಳನ್ನು ಹಂಚಿಕೊಳ್ಳುವ ಮುನ್ನ ತಿಳಿದಿರಬೇಕು.ಇಂದು ಬ್ಯಾಂಕ್ ಆಫರ್ಸ್‌, ಲೋನ್‌ಗಳ ಮೇಲಿನ, ಆಧಾರ್ ಲಿಂಕ್ ಬಗ್ಗೆ ಇತ್ಯಾದಿ ಸಂದೇಶ ಗಳು ಬರುತ್ತವೆ. ಕೆಲವರು ಆ ಸಂದೇಶ ನಿರ್ಲಕ್ಷಿಸಿದರೆ, ಅನೇಕರು ಅದನ್ನು ತೆರೆದು ಪ್ರತಿಕ್ರಿಯಿಸುತ್ತಾರೆ. ಆದರೆ ಪ್ರತಿಕ್ರಿಯೆ ನೀಡುವ ಮುನ್ನ ಆಗುತ್ತಿರುವ ಮೋಸ ವಂಚನೆಗಳ ಬಗ್ಗೆಯು ಎಚ್ಚೆತ್ತುಕೊಳ್ಳಿ.

advertisement

ಈ ಸಂದೇಶ ತೆರೆಯದಿರಿ

  • ನಿಮಗೆ ಈ ಬ್ಯಾಂಕ್‌ನಿಂದ ಸಾಲ ನೀಡಲಾಗುತ್ತಿದೆ, ಇದರಲ್ಲಿ ಕಡಿಮೆ ಬಡ್ಡಿ ಸಿಗಲಿದೆ.ಅತೀ ಶೀಘ್ರದಲ್ಲೆ ಸಾಲ ದೊರೆಯಲಿದೆ. ಇಂತಹ ಸಂದೇಶ ಬಂದರೆ ನೀವು ನಿರ್ಲಕ್ಷಿಸಬೇಕು.
  • ಉಚಿತ ಬ್ಯಾಂಕ್ ಖಾತೆಯನ್ನು ತೆರೆಯುವ ಮೂಲಕ ಪ್ರಯೋಜನಗಳನ್ನು ಪಡೆಯಬಹುದು.ಈ ಸಂದೇಶ ಬಂದರೂ ನಿರ್ಲಕ್ಷ್ಯ ವಹಿಸುವುದು ಮುಖ್ಯ.
  • ಕೆಲವೊಮ್ಮೆ ಬ್ಯಾಂಕ್ ಸಿಬಂದಿಗಳು ಎಂದು ನೆಪ ಹೇಳಿ ಗ್ರಾಹಕರಿಗೆ ಕರೆ ಮಾಡಿ ಓಟಿಪಿ ಕೇಳುತ್ತಾರೆ. ಇಂತಹ ಸಂದರ್ಭದಲ್ಲಿ ಮೆಸೇಜ್‌ಗಳು ಬಂದಲ್ಲಿ ಓಟಿಪಿಯನ್ನು ಶೇರ್‌ ಮಾಡುವ ಬಗ್ಗೆ ಜಾಗೃತೆ ವಹಿಸಿ‌
  • ಆಧಾರ್ ಲಿಂಕ್, ಬ್ಯಾಂಕ್ ಖಾತೆ ಲಿಂಕ್ ಎಂದು‌ ನಂಬಿಸಿಕೊಂಡು ಮೋಸ ಮಾಡುವ ಖದೀಮರು ಬಹಳಷ್ಟು ಮಂದಿ ಇದ್ದಾರೆ. ಇಂತಹ ಸಂದೇಶ ಬಂದರೆ ನಿರ್ಲಕ್ಷ್ಯ ಮಾಡುವುದು ಉತ್ತಮ.
  • ಅದೇ ರೀತಿ ನಿಮಗೆ ಬ್ಯಾಂಕ್‌ನಿಂದ ತ್ವರಿತ ನಗದು ಸಾಲವನ್ನು ನೀಡಲಾಗುತ್ತಿದೆ, ಈ ಸಂದೇಶ ತೆರೆದು ಕ್ಲಿಕ್ ಮಾಡಿ ಎಂದು ಇದ್ದರೆ ಅದನ್ನು ಕೂಡಲೇ ಡಿಲೀಟ್‌ ಮಾಡಿ.

advertisement

Leave A Reply

Your email address will not be published.