Karnataka Times
Trending Stories, Viral News, Gossips & Everything in Kannada

Bike Parcel: ಬೈಕ್ ಅನ್ನು ಕಡಿಮೆ ಬೆಲೆಗೆ ರೈಲ್ವೆ ಮೂಲಕ ಪಾರ್ಸೆಲ್ ಮಾಡಬಹುದು ಹೇಗೆ?

advertisement

ಸಾಮಾನ್ಯವಾಗಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಬೈಕ್, ಕಾರು ಮೊದಲಾದ ವಾಹನಗಳನ್ನು ಸ್ಥಳಾಂತರಿಸುವ ಸಂದರ್ಭ ಬರಬಹುದು, ನಾವು ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ವಲಸೆ ಹೋಗುವುದಿದ್ದರೆ ಅಥವಾ ಬೇರೆ ಸ್ಥಳದಲ್ಲಿ ಕೆಲಸ ಸಿಕ್ಕು ಆ ಜಾಗದಲ್ಲಿಯೇ ಉಳಿದುಕೊಳ್ಳುವ ಪರಿಸ್ಥಿತಿ ಬಂದರೆ ನಮ್ಮ ಮನೆಯ ವಸ್ತುಗಳನ್ನ ಅಥವಾ ಬೈಕ್ ಕಾರು ಮೊದಲಾದ ದೊಡ್ಡ ಭಾರದ ವಸ್ತುಗಳನ್ನ ರವಾನಿಸಬೇಕಾದ ಸಂದರ್ಭ ಬರಬಹುದು. ಇದಕ್ಕಾಗಿ ಸಾಕಷ್ಟು ಖಾಸಗಿ ಸಂಸ್ಥೆಗಳು ಲಗೇಜ್ ಟ್ರಾನ್ಸ್ಪೋರ್ಟೇಶನ್ (Luggage Transportation) ಕೆಲಸವನ್ನು ಮಾಡುತ್ತವೆ.

ಎಲ್ಲರಿಗೂ ತಿಳಿದಿರುವಂತೆ ಟ್ರಾನ್ಸ್ಪೋರ್ಟೆಶನ್ ಚಾರ್ಜ್ ಸಿಕ್ಕಾಪಟ್ಟೆ ಜಾಸ್ತಿ ಇರುತ್ತೆ. ಅದರಲ್ಲೂ ನೀವು ಖಾಸಗಿ ವಾಹನದಲ್ಲಿ ಒಂದು ಬೈಕ್ ಅನ್ನು ಇನ್ನೊಂದು ಸ್ಥಳಕ್ಕೆ ಕಳುಹಿಸಬೇಕು ಎಂದಾದರೆ ಹೆಚ್ಚು ಹಣ ಕೊಡಬೇಕು ಹಾಗಾದ್ರೆ ಇನ್ನು ಮುಂದೆ ತಲೆಬಿಸಿ ಮಾಡಿಕೊಳ್ಳಬೇಡಿ ಯಾಕೆಂದರೆ ನೀವು ಖಾಸಗಿ ಕಂಪನಿಗಳನ್ನು ಪಾರ್ಸೆಲ್ ಗಾಗಿ ಅವಲಂಬಿಸಬೇಕಾಗಿಲ್ಲ ಸರ್ಕಾರಿ ರೈಲ್ವೆ ಮೂಲಕವೂ ಬೈಕ್ ಪಾರ್ಸೆಲ್ ಕಳುಹಿಸಬಹುದು. ಇದಕ್ಕೆ ಸುಲಭ ಮಾರ್ಗಗಳು ಇವೆ ಪಾರ್ಸೆಲ್ ದರವೂ ಕೂಡ ಕಡಿಮೆ ಇರುತ್ತೆ.

ರೈಲ್ವೆ ಮುಖಾಂತರ ಬೈಕ್ ಪಾರ್ಸೆಲ್ ಮಾಡುವುದು ಹೇಗೆ?

ಆನ್ಲೈನ್ ಮೂಲಕ ಅಥವಾ ಆಫ್ಲೈನ್ ಮೂಲಕ ಬೈಕ್ ಪಾರ್ಸೆಲ್ (Bike Parcel) ಮಾಡಲು ಬುಕಿಂಗ್ ಮಾಡಿಕೊಳ್ಳಬಹುದು. ಆದರೆ ಪಾರ್ಸಲ್ ಮಾಡುವುದಕ್ಕೂ ಬಹಳ ಸಮಯದ ಮೊದಲ ಬುಕಿಂಗ್ ಮಾಡಿಕೊಳ್ಳಬೇಕು ಎನ್ನುವುದನ್ನು ನೆನಪಿಟ್ಟುಕೊಳ್ಳಿ.

advertisement

ಆಫ್ ಲೈನ್ ಬುಕಿಂಗ್!

ಆಫ್ಲೈನ್ ಮೂಲಕ ಬೈಕ್ ಪಾರ್ಸೆಲ್ ಮಾಡುವುದಿದ್ದರೆ ನೀವು ಮೊದಲು ಹತ್ತಿರದ ರೈಲ್ವೆ ನಿಲ್ದಾಣಕ್ಕೆ ಹೋಗಿ ಪಾರ್ಸೆಲ್ ಬುಕಿಂಗ್ ವಿಭಾಗವನ್ನು ಸಂಪರ್ಕಿಸಿ. ಅಲ್ಲಿ ಕೊಡುವ ಅರ್ಜಿ ಫಾರಂ ಅನ್ನು ಭರ್ತಿ ಮಾಡಬೇಕು ಹಾಗೂ ಹಸ್ತಾಕ್ಷರದಲ್ಲಿ ನೀವು ಪಾರ್ಸಲ್ ಮಾಡಲು ಬಯಸುವ ಬೈಕ್ ಯಾವುದು ಅದರ ಬಗ್ಗೆ ವಿವರಣೆ, ಎಲ್ಲಿಗೆ , ಯಾಕೆ ಕಳುಹಿಸಬೇಕು ಈ ಎಲ್ಲಾ ಮಾಹಿತಿಗಳನ್ನು ನೀಡಬೇಕು. ನಂತರದಲ್ಲಿ ನೀವು ನಿಮ್ಮ ಸಂಪೂರ್ಣ ವಿವರಗಳನ್ನು ಕೊಟ್ಟು ನಿಮ್ಮ ಪಾರ್ಸೆಲ್ ಬೈಕ್ ನ ತೂಕವನ್ನು ಚೆಕ್ ಮಾಡಬೇಕು. ತೂಕದ ಆಧಾರದ ಮೇಲೆ ಪಾರ್ಸೆಲ್ ದರ ನಿರ್ಧಾರವಾಗುತ್ತದೆ.

ನಿಮ್ಮ ಪಾರ್ಸೆಲ್ ತೂಕ ಮಾಡಿಕೊಂಡ ನಂತರ ಠೇವಣಿ ಹಣವನ್ನು ಇಡಬೇಕು. ನಿಮಗೆ ಒಂದು ರಿಸಿಪ್ಟ್ ಕೊಡಲಾಗುತ್ತೆ ಅದನ್ನ ಭದ್ರವಾಗಿ ಇರಿಸಿಕೊಳ್ಳಿ. ರಿಸಿಪ್ಟ್ ಪಡೆದ ನಂತರ ನಿಮಗೆ ರೈಲು ಸಂಖ್ಯೆ, ನಿಲ್ದಾಣಕ್ಕೆ ಬರುವ ಸಮಯ ಈ ಎಲ್ಲ ಮಾಹಿತಿಗಳನ್ನು ಕೂಡ ಕೊಡಲಾಗುತ್ತದೆ. ಮಾಹಿತಿ ಆಧಾರದ ಮೇಲೆ ನೀವು ಎಲ್ಲಿಗೆ ಪಾರ್ಸೆಲ್ ಕಳುಹಿಸುತ್ತೀರೋ ಅಲ್ಲಿಯವರು ಪಾರ್ಸೆಲ್ ಇಳಿಸಿಕೊಳ್ಳುವುದಕ್ಕೂ ಕೂಡ ಸಹಾಯವಾಗುತ್ತದೆ.

ಇನ್ನು ರೈಲಿನಲ್ಲಿ ಬೈಕ್ ಪಾರ್ಸೆಲ್ ಮಾಡುವುದಾದರೆ ಸಾರಿಗೆ ಶುಲ್ಕ ಪ್ರತಿ 500 ಕಿಲೋಮೀಟರ್ ಗೆ 1200 ರೂಪಾಯಿಗಳಷ್ಟು ಇರುತ್ತವೆ. ಇದು ಪಾರ್ಸೆಲ್ ತೂಕದ ಆಧಾರದ ಮೇಲೆ ಸಮಯದ ಆಧಾರದ ಮೇಲೆ ವ್ಯತ್ಯಾಸವು ಕೂಡ ಆಗಬಹುದು. ಹಾಗಾಗಿ ನೀವು ರೈಲ್ವೆ ಸ್ಟೇಷನ್ ನಲ್ಲಿ ಪಾರ್ಸಲ್ ವಿಭಾಗದಲ್ಲಿ ಮೊದಲು ಇದರ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.

ಆನ್ಲೈನ್ ಮೂಲಕ ಬುಕಿಂಗ್!

ನೀವು ಆನ್ಲೈನ್ ಮೂಲಕವೂ ಕೂಡ ಬೈಕ್ ಪಾರ್ಸೆಲ್ ಬುಕಿಂಗ್ ಮಾಡಿಕೊಳ್ಳಬಹುದು. ಇದಕ್ಕಾಗಿ ಸರ್ಕಾರದ ಅಧಿಕೃತ ವೆಬ್ಸೈಟ್ https://www.parcel.indianrail.gov.in ನೀಡಿ ನಿಮ್ಮ ಮೊಬೈಲ್ ಸಂಖ್ಯೆ ಹಾಗೂ ಪಾರ್ಸಲ್ ಮಾಡಲು ಬಯಸುವ ಬೈಕ್ ನ ವಿವರ ಎಲ್ಲಾ ಮಾಹಿತಿಗಳನ್ನು ನಮೂದಿಸಬೇಕು. ನಿಮ್ಮ ಬೈಕ್ ನಾ ತೂಕ ಎಷ್ಟಿದೆ ಎಂಬುದನ್ನು ನೀವೇ ತೂಕ ಮಾಡಿ ಅದನ್ನು ನಮೂದಿಸಬೇಕು ರೈಲ್ವೆ ನಿಲ್ದಾಣದಲ್ಲಿ ಇದನ್ನ ಮತ್ತೆ ಚೆಕ್ ಮಾಡಲಾಗುತ್ತೆ. ಈ ರೀತಿಯಾಗಿ ನೀವು ಆನ್ಲೈನ್ ನಲ್ಲಿ ಬುಕ್ಕಿಂಗ್ ಮಾಡಿಕೊಂಡು ಆನ್ಲೈನ್ ಪೇಮೆಂಟ್ ಕೂಡ ಮಾಡಬಹುದು. ಇಷ್ಟು ಮಾಡಿದ್ರೆ ಸುಲಭವಾಗಿ ನೀವು ಯಾವುದೇ ತೊಂದರೆ ಇಲ್ಲದೆ ಕಡಿಮೆ ಖರ್ಚಿನಲ್ಲಿ ನಿಮ್ಮ ಬೈಕ್ ಅನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವರ್ಗಾವಣೆ ಮಾಡಬಹುದು.

advertisement

Leave A Reply

Your email address will not be published.