Karnataka Times
Trending Stories, Viral News, Gossips & Everything in Kannada

Karnataka One: ಕರ್ನಾಟಕ ಓನ್ ಕೇಂದ್ರ ತೆರೆಯಲು ಅರ್ಜಿ ಆಹ್ವಾನ, ಏನೆಲ್ಲ ಆರ್ಹತೆ ಬೇಕು?

advertisement

ಇಂದು ಸಾಮಾನ್ಯ ಜನರು ಕೂಡ ತ್ವರಿತ ಗತಿಯಲ್ಲಿ ಸರಕಾರದ ಸೌಲಭ್ಯ ಪಡೆಯುದು, ಮಾಹಿತಿ‌ ಪಡೆದು ಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಪಂಚಾಯತಿ ವ್ಯಾಪ್ತಿ, ಪುರಸಭೆ ನಗರಸಭೆ ಇತ್ಯಾದಿ ಸರಕಾರಿ ಇಲಾಖೆಗಳಲ್ಲಿ ನಾಗರಿಕ ಕೇಂದ್ರಿತ ಸೇವೆಗಳನ್ನು ಗ್ರಾಹಕರಿಗೆ ನೀಡುವುದು, ಅರ್ಜಿ ಸಲ್ಲಿಕೆ ಮಾಹಿತಿ ನೀಡುವುದು ಇತ್ಯಾದಿ ಬಹಳ ಮುಖ್ಯವಾಗುತ್ತದೆ. ಇದೀಗ ಈ ಕರ್ನಾಟಕ ಒನ್ (Karnataka One) ಫ್ರಾಂಚೈಸಿಗೆ ಅರ್ಜಿಯನ್ನು ಸಲ್ಲಿಸಲು ಸೂಕ್ತ ಅವಕಾಶ ಇದೆ.

What is Karnataka One Portal ?

 

 

ಇದು ಒಂದು ಆನ್‌ಲೈನ್ ಪ್ಲಾಟ್‌ಫಾರ್ಮ್ (Online Platform) ಆಗಿದ್ದು, ಇದರ ಮೂಲಕ ನಾಗರಿಕ ಕೇಂದ್ರಿತ ಸೇವೆಗಳನ್ನು ಕಲ್ಪಿಸಲು ಗ್ರಾಹಕರಿಗೆ ಸಹಾಯ ಮಾಡುತ್ತದೆ. ಕರ್ನಾಟಕ ಸರ್ಕಾರವು ನೀಡುವ ಎಲ್ಲಾ ಸೇವೆಗಳನ್ನು ಪ್ರವೇಶಿಸಲು ಜನರು ಈ ಪೋರ್ಟಲ್‌ (Portal) ನಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ. ಸರ್ಕಾರದ ಬಹು ಸೇವೆಗಳನ್ನು ಒದಗಿಸುದರ ಜೊತೆಗೆ ಸಾಮಾನ್ಯ ನಿವಾಸಿಗಳಿಗೆ ಈ ವೆಬ್ ಗೇಟ್‌ವೇ ಮೂಲಕ ಕೆಲವು ಸೇವೆಗಳು ಲಭ್ಯವಿರುತ್ತದೆ.ಅದೇ ರೀತಿ ಸಕಾಲ, ಮಾಹಿತಿ ಹಕ್ಕು ಅಧಿನಿಯಮ, ಬ್ಯಾಂಕಿಂಗ್‌ ಸೇವೆಗಳು ನಿವಾರಣೆ ಕೋರಿ ಅರ್ಜಿಗಳನ್ನು ಇಲ್ಲಿ ಸ್ವೀಕರಿಸಲಾಗುತ್ತದೆ.

ಅರ್ಜಿ ಸಲ್ಲಿಕೆ ಮಾಡಲು ಈ ದಾಖಲಾತಿ ಅವಶ್ಯಕ

  • Bank Pass Book
  • Aadhaar Card
  • Education Certificate
  • Computer Certificate

advertisement

ಅರ್ಜಿ ಸಲ್ಲಿಸಲು ಹೀಗೆ ಮಾಡಿ:

ಇದಕ್ಜೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಇರಲಿದೆ. https://www.karnatakaone.gov.in/Public ಈ ಲಿಂಕ್ ಮೂಲಕ ಅರ್ಜಿಯನ್ನು ಹಾಕಬಹುದಾಗಿದೆ.

ಈ ಸೇವೆ ನೀವು ಪಡೆಯಬಹುದು

  • ಆಧಾರ್‌ ಸೇವೆ
  • ಚುನಾವಣಾ ಆಯೋಗ ಸೇವೆ
  • ಇ-ಸ್ಟಾಂಪಿಂಗ್
  • ಪಾಸ್ಪೋರ್ಟ್ ನೊಂದಣಿ
  • ಆಹಾರ ಆಧಾರಿತ ಸೇವೆಗಳು
  • ನಾಗರಿಕ ಸರಬರಾಜು ಇತ್ಯಾದಿ ಹಲವು ಸೇವೆ ಪಡೆಯಬಹುದು.

ಅರ್ಹತೆ:

ಪದವಿಯೊಂದಿಗೆ ಕಂಪ್ಯೂಟರ್‌ ಜ್ಞಾನ ಹೊಂದಿರಬೇಕು, ಕರ್ನಾಟಕ ರಾಜ್ಯದ ಖಾಯಂ ನಿವಾಸಿ ಆಗಿದ್ದು, 18 ವರ್ಷ ಮೀರಿದ ಯುವಕ ಯುವತಿಯರು ಅರ್ಜಿ ಸಲ್ಲಿಸಬಹುದು, ಹೆಚ್ಚಿನ ಮಾಹಿತಿಗಾಗಿ ಸರ್ಕಾರದ ಸಹಾಯವಾಣಿ ಸಂಖ್ಯೆ 9148712473 ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.

advertisement

Leave A Reply

Your email address will not be published.