Karnataka Times
Trending Stories, Viral News, Gossips & Everything in Kannada

Toll Plaza: ಇನ್ನು ಮುಂದೆ ಟೋಲ್ ಹಣ ಕಟ್ಟಲು ಕಾಯುವಂತಿಲ್ಲ, ಹೊಸ ವ್ಯವಸ್ಥೆ ಜಾರಿಗೆ!

advertisement

ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸವಾರರು ಸಾಗಬೇಕಾದರೆ ಟೋಲ್ ಸಹ ನೀಡಬೇಕು. ಇಂತಿಷ್ಟು ಕಿ.ಮೀಟರ್ ವರೆಗೆ ಟೋಲ್ (Toll) ವಿನಾಯಿತಿ ಇದ್ದು ಆ್ಯಂಬುಲೆನ್ಸ್ (Ambulance) ಫೈಯರ್ ಇಂಜಿನ್ (Fire Engine), ಸೈಕಲ್ (Cycle), ಬೈಕ್ (Bike) ಹಾಗೂ ಸರಕಾರಿ ಅಧಿಕಾರಿಗಳ ಮತ್ತು ಸೇನೆಯ ವಾಹನಗಳಿಗೆ ಹೊರತಾಗಿ ನೀವು ರಾಷ್ಟ್ರೀಯ ಹೆದ್ದಾರಿ ಸಾಗಲು ಟೋಲ್ (Toll) ನೀಡುವುದು ಕಡ್ಡಾಯವಾಗಿದೆ. ಇದೀಗ ಇದೇ ಟೋಲ್ (Toll Plaza) ವ್ಯವಸ್ಥೆಯಲ್ಲಿ ವಿನೂತನ ಸೇರ್ಪಡೆ ಮಾಡಲಾಗುತ್ತಿದ್ದು ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ರಸ್ತೆ ನಿರ್ಮಾಣದ ವೆಚ್ಚ ಬರಿಸಲು ಮತ್ತು ರಸ್ತೆ ದುರಸ್ತಿ ಇತರ ಕಾರಣಕ್ಕೆ ಟೋಲ್ (Toll) ಸಂಗ್ರಹ ಮಾಡಲಾಗುತ್ತದೆ. ಇದು ಸರಕಾರದ ಆದಾಯ ಮೂಲ ಕೂಡ ಆಗಿದೆ. ಟೋಲ್ ಕಟ್ಟುವ ವ್ಯವಸ್ಥೆಗೆ ಅನೇಕ ಹೊಸ ಕ್ರಮ ಈ ಹಿಂದಿನಿಂದಲೂ ಜಾರಿ ಯಾಗುತ್ತಿದೆ. ಟೋಲ್ ಕಟ್ಟುವ ಪ್ರಕ್ರಿಯೆ ವಿಳಂಬ ಆದರೆ ಇಲ್ಲವೇ ನೂರು ಮೀಟರ್ ಗಿಂತ ಹೆಚ್ಚು ಉದ್ದದಲ್ಲಿ ವಾಹನಗಳು ಸರತಿ ಸಾಲು ನಿಂತರೆ ಟೋಲ್ ವಿನಾಯಿತಿ ಸಹ ನೀಡಲಾಗಿದೆ.

GPS ಆಧಾರಿತ ವ್ಯವಸ್ಥೆ:

ಇದರ ಜೊತೆಗೆ ಟೋಲ್ (Toll Plaza) ನಲ್ಲಿ ವಿಳಂಬ ಪ್ರಕ್ರಿಯೆ ಚಿಲ್ಲರೆ ಸಮಸ್ಯೆ ನಿವಾರಣೆ ಇತರ ಅಂಶ ಗಮನದಲ್ಲಿಟ್ಟುಕೊಂಡು ನೂತನ ವ್ಯವಸ್ಥೆ ಜಾರಿಗೆ ತರಲು ಚಿಂತಿಸಲಾಗುತ್ತಿದೆ. ಈ ಮೂಲಕ 2024 ರೊಳಗೆ ಜಿಪಿಎಸ್ ಆಧಾರಿತ ಟೋಲ್ (Toll) ಸಂಗ್ರಹ ವ್ಯವಸ್ಥೆ ಪರಿಚಯಿಸಲಾಗುವುದರ ಬಗ್ಗೆ ಮಹತ್ವದ ಮಾಹಿತಿಯೊಂದು ತಿಳಿದು ಬಂದಿದೆ. ಈ ಬಗ್ಗೆ ಸ್ವತಃ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಅವರು ಹೇಳಿಕೆಯೊಂದನ್ನು ನೀಡಿದ್ದಾರೆ.

advertisement

Toll ಸಂಗ್ರಹ:

 

 

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ (Nitin Gadkari) ಅವರು ನೂತನ ಟೋಲ್ (Toll) ಸಂಗ್ರಹ ವಿಧಾನದ ಬಗ್ಗೆ ಮಾತಾಡಿದ್ದಾರೆ. ಶೀಘ್ರವೇ ಟೋಲ್ ಪ್ಲಾಜಾ (Toll Plaza) ವ್ಯವಸ್ಥೆ ಬದಲಾಗಲಿದೆ. 2019ರಲ್ಲಿ ಟೋಲ್ (Toll) ಸಂಗ್ರಹಕ್ಕೆ 8 ನಿಮಿಷ ಹಿಡಿಯುತ್ತಿತ್ತು ಆದರೆ 2022-23ರ ಅವಧಿಯಲ್ಲಿ ವಾಹನ ಸವಾರರು 47 ಸೆಕೆಂಡು ಕಾಯುತ್ತಿದ್ದಾರೆ. ಕೆಲ ಸ್ಥಳದಲ್ಲಿ ಈ ವ್ಯವಸ್ಥೆ ವೈಪರೀತ್ಯ ಹೊಂದಿದೆ‌. ತುಂಬಾ ಜನಸಂಖ್ಯೆ ಇರುವಲ್ಲಿ ಪೀಕ್ ಅವರ್ ನಲ್ಲಿ ಈಗಲೂ ಜನ ಟೋಲ್ ಗೇಟ್ ನಲ್ಲಿ ಕಾಯುತ್ತಿದ್ದಾರೆ.

ಹಾಗಾಗಿ ಇನ್ನು ಮುಂದೆ GPS ಆಧಾರಿತ ಟೋಲ್ ಸಂಗ್ರಹಕ್ಕೆ ಮುಂದಾಗಲಿದ್ದೇವೆ. ಮಾರ್ಚ್ ತಿಂಗಳಿನಿಂದಲೇ ಈ ವ್ಯವಸ್ಥೆ ಜಾರಿ ಬರುವ ಕಾರಣ ಜನರಿಗೆ ಹೆಚ್ಚು ಉಪಯುಕ್ತ ಆಗಲಿದೆ. ಉಪಗ್ರಹ ಆಧಾರಿತ ಟೋಲ್ ಸಂಗ್ರಹ ವಿಧಾನವು ಸಂಚಾರ ದಟ್ಟಣೆ ಕಡಿಮೆ ಮಾಡುವ ಜೊತೆಗೆ ಜನರು ಪ್ರಯಾಣ ಮಾಡಿದ್ದ ದೂರಕ್ಕೆ ಮಾತ್ರವೇ ಶುಲ್ಕ ವಿಧಿಸಲಾಗುವುದು. ಇದರಲ್ಲಿ ನಿಮ್ಮ ವಾಹನಗಳಿಗೆ ಸ್ವಯಂ ಚಾಲಿತ ರೀಡರ್‌ ಕ್ಯಾಮರಾ ಅಳವಡಿಕೆ ಮಾಡಲಾಗುವುದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಹೇಳಿದ್ದಾರೆ.

advertisement

Leave A Reply

Your email address will not be published.