Karnataka Times
Trending Stories, Viral News, Gossips & Everything in Kannada

Gruha Lakshmi Yojana: ಈ ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆಯ ಈ ತಿಂಗಳ ಹಣ ಮೊದಲ ಹಂತಕ್ಕೆ ಬರಲಿದೆ, ಚೆಕ್ ಮಾಡಿಕೊಳ್ಳಿ.

advertisement

ರಾಜ್ಯದ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಜಾರಿಗೆ ಬಂದ ಪಂಚ ಗ್ಯಾರೆಂಟಿ ಯೋಜನೆಯಲ್ಲಿ ಬಹಳ ಮಹತ್ವದ ಸ್ಥಾನ ಪಡೆಯುವ ಯೋಜನೆ ಎಂದರೆ ಅದು ಗೃಹಲಕ್ಷ್ಮೀ (Gruha Lakshmi). ಗೃಹಲಕ್ಷ್ಮೀ ಯೋಜನೆ  (Gruha Lakshmi Yojana) ಮೂಲಕ ರಾಜ್ಯದ ಅರ್ಹ ಮಹಿಳೆಯರಿಗೆ ಉಚಿತವಾಗಿ ಮಾಸಿಕ ಸಹಾಯಧನವಾಗಿ ಎರಡು ಸಾವಿರ ರೂಪಾಯಿ ಯನ್ನು ನೀಡಲಾಗುತ್ತಿದೆ. ಇದು ಕೆಲವರಿಗೆ ಜೀವನ ಸಾಗಿಸಲು ತಿಂಗಳ ಖರ್ಚಿಗೆ ಕುಟುಂಬ ನಿರ್ವಹಣೆಗೆ ಬಹಳ ಉಪಯುಕ್ತ ಆಗಿದೆ.

ಗೃಹಲಕ್ಷ್ಮೀ ಯೋಜನೆ (Gruha Lakshmi Yojana) ಅಡಿಯಲ್ಲಿ ಈಗಾಗಲೇ ಮೂರು ಕಂತಿನ ಹಣ ಬಿಡುಗಡೆ ಮಾಡಿದ್ದು ನಾಲ್ಕನೇ ಕಂತಿನ ಹಣ ಕೂಡ ಕೆಲ ಭಾಗದಲ್ಲಿ ಜಮೆ ಆಗಿದೆ‌. ಆದರೆ ಅನೇಕ ಭಾಗದಲ್ಲಿ ಇನ್ನೂ ಹಣ ಮಂಜೂರಾಗಿಲ್ಲ ಎಂಬ ದೂರು ಕೇಳಿಬರುತ್ತಿದೆ. ಪ್ರತೀ ತಿಂಗಳಿಗೆ 20ನೇ ತಾರೀಖಿನ ಒಳಗೆ ಹಣ ಜಮೆ ಮಾಡಲು ಸಿಎಂ (CM) ಅವರು ಸೂಚನೆ ನೀಡಿದ್ದರು ಕೆಲ ಜಿಲ್ಲೆಗೆ ಮಾತ್ರ ಹಣ ಮಂಜೂರಾಗಿದ್ದು ಇನ್ನು ಅನೇಕ ಕಡೆ ಹಣ ಇನ್ನು ಖಾತೆಗೆ ಬರಲಿಲ್ಲ.

ಈ ಜಿಲ್ಲೆಯಲ್ಲಿ ಬಿಡುಗಡೆ:

 

 

advertisement

ಕೋಲಾರ, ಮಂಡ್ಯ, ಬಿಜಾಪುರ, ಬೆಂಗಳೂರು, ರಾಯಚೂರು, ಚಿತ್ರದುರ್ಗ, ಬೆಳಗಾವಿ , ಬಳ್ಳಾರಿ, ಧಾವಣಗೆರೆ, ಬಾಗಲಕೋಟೆ, ಉತ್ತರ ಕನ್ನಡ, ಉಡುಪಿ, ಮೈಸೂರು, ಧಾರವಾಡ, ಹಾಸನ, ಗದಗ ಈ ಭಾಗದಲ್ಲಿ ಈಗಾಗಲೇ Gruha Lakshmi Yojana ಹಣ ಮಂಜೂರಾಗಿದ್ದು ಖಾತೆಗೆಹಣ ಜಮಾ ಆಗುತ್ತಿದೆ ಉಳಿದವರಿಗೆ ಹಂತ ಹಂತವಾಗಿ ಹಣ ಕೈ ತಲುಪಲಿದೆ ಎಂದು ಹೇಳಬಹುದು. ಹಾಗಾಗಿ ಡಿಸೆಂಬರ್ ನಾಲ್ಕನೇ ಕಂತಿಬ ಹಣ ಯಾವಾಗ ಬರುತ್ತೇ ಎಂದು ಕಾಯುತ್ತಿದ್ದವರಿಗೆ ಈ ಮಾಹಿತಿ ಸ್ವಲ್ಪ ರಿಲ್ಯಾಕ್ಸ್ ಆಗಲಿದೆ.

ಸಮಸ್ಯೆ ಇದ್ದರೆ ಹೀಗೆ ಮಾಡಿ:

ಗೃಹಲಕ್ಷ್ಮೀ (Gruha Lakshmi) ಕಂತಿನ ಹಣ ಒಮ್ಮೆ ಕೂಡ ಬಾರದೇ ಇದ್ದವರ ಪಟ್ಟಿ ಈಗಾಗಲೇ ಸಿದ್ಧ ಮಾಡಿ ಅಂತವರಿಗೆ ಈ ಬಗ್ಗೆ ಮಾಹಿರಜ ನೀಡಲು ಆಶಾ ಕಾರ್ಯಕರ್ತೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ತಿಳಿಸಲಾಗಿದೆ. ನಿಮಗೆ ಹಣ ಬರದೇ ಇರಲು ಮುಖ್ಯ ಕಾರಣ ನಿಮ್ಮ ಆಧಾರ್ ಲಿಂಕ್ (Aadhaar Link) ಇಲ್ಲದಿರುವುದು ಹಾಗೂ ಬ್ಯಾಂಕ್ ಖಾತೆ ಸಕ್ರಿಯವಾಗದಿರುವುದು ಹಾಗಾಗಿ ಈ ಬಗ್ಗೆ ಮೊದಲೇ ಎಚ್ಚೆತ್ತುಕೊಂಡು ಸಮಸ್ಯೆ ಕಂಡು ಬಂದರೆ ಆಶಾ ಕಾರ್ಯಕರ್ತೆಯರ ಸಲಹೆ ಸೂಚನೆ ಮಾರ್ಗ ದರ್ಶನ ಪಾಲಿಸಿ.

ಅದೇ ರೀತಿ ಮನೆಯ ಯಜಮಾನಿ ಸ್ಥಾನ ಕೂಡ ಖಾತರಿ ಪಡಿಸುವುದು ಅತ್ಯವಶ್ಯಕವಾಗಿದೆ. ಗೃಹಲಕ್ಷ್ಮೀ ಹಣ (Gruha Lakshmi Money) ಪಡೆಯುವ ಉದ್ದೇಶಕ್ಕಾಗಿಯೇ ಮನೆ ಹಿರಿಯ ಮಹಿಳೆ ಅಥವಾ ಯಜಮಾನಿ ಹೆಸರು ಫೋಟೋ ಬದಲಿಸಲು ನೂತನ ರೇಶನ್ ಕಾರ್ಡ್ (Ration Card) ಗೆ ಅರ್ಜಿ ಹಾಕಿದ್ದವರಿಗೆ ಇಲ್ಲೊಂದು ಮಹತ್ವದ ಮಾಹಿತಿ ಇದೆ. ಹಳೆ ಅರ್ಜಿ ಇನ್ನೇನು 15 ದಿನದೊಳಗೆ ಪರಿಶೀಲನೆ ಆಗಲಿದ್ದು ಶೀಘ್ರವೇ ನಿಮಗೆ ನೂತನ ರೇಶನ್ ಕಾರ್ಡ್ ಕೂಡ ಲಭ್ಯವಾಗಲಿದೆ.

advertisement

Leave A Reply

Your email address will not be published.