Karnataka Times
Trending Stories, Viral News, Gossips & Everything in Kannada

Anna Bhagya Yojana: ಮೂರು ಕಂತಿನ ಅನ್ನಭಾಗ್ಯ ಯೋಜನೆಯ ಹಣ ಒಂದೇ ಬಾರಿ ಬರಲಿದೆ

advertisement

ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಜನ ಮತ ಸೆಳೆಯಲು ರಾಜ್ಯ ಸರಕಾರ ಐದು ಗ್ಯಾರಂಟಿ ಯೋಜನೆ (5 Guarantee Schemes) ಯನ್ನು ಜಾರಿಗೆ ತಂದಿತ್ತು.ಈ ಎಲ್ಲಾ ಐದು ಯೋಜನೆಗಳು ಕೂಡ ಬಹಳಷ್ಟು ಪ್ರಸಿದ್ದಿ ಯಲ್ಲಿದ್ದು ಎಲ್ಲ ವರ್ಗದ ಜನತೆಯು ಈ ಸೌಲಭ್ಯ ವನ್ನು ಪಡೆಯುತ್ತಿದೆ. ಇದರಲ್ಲಿ ಅನ್ನಭಾಗ್ಯ ಯೋಜನೆಯು ಕೂಡ ಒಂದಾಗಿದ್ದು ಬಡ ವರ್ಗದ ಜನತೆಗೆ ಆಹಾರ ಧಾನ್ಯದ ಜೊತೆಗೆ ಖಾತೆಗೆ ಹಣ ಕೂಡ ಜಮೆ ಯಾಗುತ್ತಿದೆ.

WhatsApp Join Now
Telegram Join Now

ಹಣ ಜಮೆ ಮಾಡುತ್ತಿದೆ:

ರಾಜ್ಯ ಸರಕಾರವು ಅನ್ನಭಾಗ್ಯ ಯೋಜನೆ (Anna Bhagya Yojana) ಯ ಮೂಲಕ ಕೇಂದ್ರ ಸರ್ಕಾರ ನೀಡುತ್ತಿದ್ದ 5 ಕೆ‌ಜಿ ಉಚಿತ ಅಕ್ಕಿಯ ಜೊತೆಗೆ 5 ಕೆ‌ಜಿ ಅಕ್ಕಿ ನಾವು ನೀಡುತ್ತೇವೆ ಎಂದು ರಾಜ್ಯ ಸರಕಾರ ತಿಳಿಸಿತ್ತು. ಆದರೆ ಕೇಂದ್ರ ಸರಕಾರ ಇದಕ್ಕೆ ಒಪ್ಪದ ಕಾರಣ, ಅಕ್ಕಿಯ ಅಭಾವದಿಂದಾಗಿ ಈಗ ಖಾತೆಗೆ ಹಣ ಜಮೆ ಮಾಡುತ್ತಿದೆ‌.ಇದಕ್ಕಾಗಿ ಪ್ರತಿ ಕೆ‌ಜಿ ಗೆ 34ರೂ ಅಂತೆ ಹಣ ವರ್ಗಾವಣೆ ಮಾಡಲು ತೀರ್ಮಾನ ಮಾಡಿದ್ದು ಖಾತೆಗೆ ಹಣವನ್ನು ಕೂಡ ಸಂದಾಯಿತ ಮಾಡುತ್ತಿದೆ.

ಜೂನ್ ತಿಂಗಳ ಹಣ?

 

Image Source: The Financial Express

 

advertisement

ಈಗಾಗಲೇ 10 ಕಂತುಗಳ ವರೆಗೆ ಹಣವನ್ನು ನೇರವಾಗಿ ಖಾತೆಗೆ ವರ್ಗಾವಣೆ ಮಾಡಿದ್ದು 11 ಕಂತಿನ ಹಣವನ್ನು ಅಂದರೆ ಜೂನ್ ತಿಂಗಳ ಹಣವ (Anna Bhagya Money) ನ್ನು ಕೂಡ ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ ಎನ್ನುವ ಮಾಹಿತಿ ಕೂಡ ಲಭ್ಯ ವಾಗಿದೆ.

ಹಣ ಬಂದಿಲ್ಲ:

ಕೆಲವು ಜನರಿಗೆ ಈ ಅನ್ನಭಾಗ್ಯ ಯೋಜನೆ (Anna Bhagya Yojana) ಯ ಹಣ ಜಮೆಯಾಗಿಲ್ಲ. ಇದಕ್ಕೆ ಬ್ಯಾಂಕ್ ಖಾತೆಯ NPCI ಮಾಡಿಸದೆ ಇರುವುದು ಮುಖ್ಯ ಕಾರಣ ಆಗಿದೆ.ಅದೇ ರೀತಿ ರೇಷನ್ ಕಾರ್ಡ್ ಹೆಸರು ಬದಲಾವಣೆ, ಆಧಾರ್ ನಂಬರ್ ಲಿಂಕ್ ಮಾಡದೆ ಇರುವುದು ಸಮಸ್ಯೆ ಆಗಿದ್ದು ಇದರಿಂದ ಹಣ ಬಂದಿಲ್ಲ.ಇದಕ್ಕೆ ಬೇಕಾದ ದಾಖಲೆಗಳನ್ನು ನೀವು ಸರಿ ಪಡಿಸಿಕೊಂಡಲ್ಲಿ ಎಲ್ಲ ಕ್ರಮಗಳನ್ನು ಪಾಲಿಸಿದರೆ ನಿಮಗೆ ಬಾಕಿ ಇರುವ 9 ಮತ್ತು 10 ಕಂತಿನ ಹಣ ಮತ್ತು 11 ಕಂತಿನ ಹಣವು ಒಟ್ಟಿಗೆ ಶೀಘ್ರದಲ್ಲೇ ಅನ್ನಭಾಗ್ಯ ಹಣ ಜಮೆ ಯಾಗಲಿದೆ.

ಅಕ್ಕಿ ವಿತರಣೆ?

ಈಗಾಗಲೇ ಅಕ್ಕಿಯ ಕೊರತೆ ನಿವಾರಣೆ ಆದ ಬಳಿಕ ಅಕ್ಕಿ ನೀಡುವುದಾಗಿ ರಾಜ್ಯ ಸರಕಾರ ಭರವಸೆ ನೀಡಿದೆ.ಈಗಾಗಲೇ ಆಂಧ್ರ ಪ್ರದೇಶ, ತೆಲಂಗಾಣದಿಂದ ಸೇರಿದಂತೆ ಹಲವಡೆಯಿಂದ ಅಕ್ಕಿ ಖರೀದಿಗೆ ಮುಂದಾಗಿದ್ದು ಸಮರ್ಪಕ ರೀತಿಯಲ್ಲಿ ಸಿಗದೇ ಇರುವುದರಿಂದ ಹಣ ಜಮೆ ಮಾಡುತ್ತಿದೆ. ಈ ಬಾರಿ ಅಕ್ಕಿಯ ಉತ್ಪಾದನೆಯು ಕಡಿಮೆಯಾಗಿದ್ದು ಆದರೂ ಸಹ ಆದಷ್ಟು ಬೇಗ ಬಡವರ್ಗದ ಜನತೆಗೆ ಅಕ್ಕಿ ಕೊಡುವ ಪ್ರಯತ್ನವನ್ನ ನಾವು ಮಾಡುತ್ತೇವೆ ಎಂದು ಸಚಿವರು ತಿಳಿಸಿದ್ದಾರೆ.

advertisement

Leave A Reply

Your email address will not be published.