Karnataka Times
Trending Stories, Viral News, Gossips & Everything in Kannada

Arecanut Plantation: ಕರ್ನಾಟಕದ ಯಾವುದೇ ಮೂಲೆಯಲ್ಲಿ ಸಣ್ಣ ಅಡಿಕೆ ತೋಟ ಇದ್ದವರಿಗೂ ಗುಡ್ ನ್ಯೂಸ್

advertisement

2023-24ನೇ ಸಾಲಿನಲ್ಲಿ ರೈತರಿಗೆ ಬೆಳೆ ವಿಚಾರದಲ್ಲಿ ಬಹಳ ನಷ್ಟ ಆಗಿದೆ ಎನ್ನಬಹುದು. ಹಾಗಾಗಿ ಬೆಳೆ ಬಾರದೇ ಕಂಗಾಲಾದ ರೈತರು ರಾಜ್ಯ ಸರಕಾರದ ಬೆಳೆ ವಿಮೆ (Crop Insurance) ಯಾವಾಗ ಬರುತ್ತದೆ ಎಂದು ಕಾಯುವುದೇ ಆಗಿದೆ. ಇದೀಗ ರಾಜ್ಯ ಸರಕಾರದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಲ್ಲಿ ಕೆಲವು ಅಗತ್ಯ ಮಾರ್ಪಾಡು ಮಾಡಿ ಈ ಮೂಲಕ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ (Crop Insurance Scheme) ಯಲ್ಲಿ ಅಗತ್ಯ ಮರುವಿನ್ಯಾಸಗೊಳಿಸಲಾಗಿದೆ. ಹಾಗಾಗಿ ರಾಜ್ಯದ ರೈತರಿಗೆ ಇದೊಂದು ಸಂತಸದ ಸುದ್ದಿ ಎನ್ನಬಹುದು.

WhatsApp Join Now
Telegram Join Now

ಬೆಳೆವಿಮೆ (Crop Insurance) ಯನ್ನು ರೈತರು ಬೆಳೆ ನಷ್ಟ ಆಗಿದೆ ಎಂದ ಕೂಡಲೇ ನೀಡಲಾರರು ಅದಕ್ಕೆ ಬದಲಾಗಿ ಬೆಳೆ ನಷ್ಟ ಆಗಿದೆ ಅಥವಾ ಇಲ್ಲ ಎಂಬುದನ್ನು ಪರಿಶೀಲನೆ ಮಾಡಲು ಅಧ್ಯಯನ ತಂಡ ಕೂಡ ಬರಲಿದೆ. ಈ ಮೂಲಕ ಹವಾಮಾನ ವೈಪರೀತ್ಯಗಳಿಂದ ಮಳೆ, ಗಾಳಿ, ಪ್ರವಾಹ, ಮಣ್ಣಿನ ಫಲವತ್ತತೆ ಅಭಾವ ಇವೆಲ್ಲವೂ ಕೂಡ ಪರಿಶೀಲನೆ ಮಾಡಲಾಗುವುದು. ಹಾಗಾಗು ಟೆಲಿಮೆಟ್ರಿಕ್ ಮಳೆ ಮಾಪನ ಕೇಂದ್ರದ ಮೂಲಕ ದಾಖಲಿಸುವ ಅಂಶಗಳ ಆಧಾರದ ಮೇಲೆ ಬೆಳೆ ವಿಮೆ ಎಷ್ಟು ಪ್ರಮಾಣದಲ್ಲಿ ನಷ್ಟ ಆಗಿದೆ ಎಂಬುದನ್ನು ತಿಳಿಯಲಾಗುವುದು.

ಕೆಲವು ಅಂಶ ಅಳವಡಿಕೆ:

 

Image Source: Nimbus Agro Farms

 

ಬೆಳೆ ವಿಮೆ ಯೋಜನೆ (Crop Insurance Scheme) ಮರು ವಿನ್ಯಾಸ ಗೊಳಿಸಿದ್ದ ಕಾರಣ ಗೆದ್ದೆಯ ಬೇಸಾಯ ಮಾತ್ರವಲ್ಲದೆ ತೋಟಗಾರಿಕೆ ಬೆಳೆಗೂ ಕೂಡ ಬೆಳೆ ವಿಮೆ ನೀಡುವ ಕೆಲವು ಅಗತ್ಯ ಮಾರ್ಪಾಡು ಮಾಡಲಾಗುತ್ತಿದೆ. ಬಹುವಾರ್ಷಿಕ ಬೆಳೆಯಾದ ಅಡಿಕೆ, ದಾಳಿಂಬೆ,‌ಮಾವು ಬೆಳೆಗಳ ನಷ್ಟವನ್ನು ಕೂಡ ಭರಿಸಲು ಕೂಡ ಬಳಕೆ ಮಾಡಿಕೊಳ್ಳಲಾಗುವುದು.

advertisement

ಆದರೆ ಈ ಬೆಳೆ ವಿಮೆಯನ್ನು ಪಡೆಯಲು ಬ್ಯಾಂಕ್ ನಲ್ಲಿ ಹಾಗೂ ಸಾಮಾನ್ಯ ಸೇವಾ ಕೇಂದ್ರದಲ್ಲಿ ಹಾಗೂ ಕೇಂದ್ರ ಆರ್ಥಿಕ ಸಂಸ್ಥೆಯಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಹಾಗೇ ನೋಂದಣಿ ಮಾಡಿದವರಿಗೆ ಮಾತ್ರವೇ ಬೆಳೆ ವಿಮೆ ಪರಿಹಾರ ಬರಲಿದೆ.

ಎಷ್ಟು ಮೊತ್ತ ಸಿಗಲಿದೆ?

 

Image Source: Tv9

 

ಅಡಿಕೆ ಬೆಳೆಗೆ (Arecanut Plantation) ಪ್ರತೀ ಹೆಕ್ಟೇರ್ ಮೇಲೆ ಬೆಳೆ ವಿಮೆ (Crop Insurance) ನೀಡಲಾಗುವುದು. ಅಡಿಕೆ ಪ್ರತೀ ಹೆಕ್ಟೇರ್ ಗೆ 1,28,000 ರೂಪಾಯಿ ಬೆಳೆ ವಿಮೆ ಪರಿಹಾರ ಮೊತ್ತವಾಗಿ ನೀಡಲಾಗುವುದು ಇದಕ್ಕೆ ರೈತರು 5 ಕಂತಿನಲ್ಲಿ 6,400 ರೂಪಾಯಿ ಪಾವತಿಸಬೇಕು. ಆಗ ಬೆಳೆ ನಷ್ಟ ಆದ ಸಂದರ್ಭದಲ್ಲಿ ವಿಮೆ ಮೊತ್ತವನ್ನು ಪಡೆಯಬಹುದು. ದಾಳಿಂಬೆ ಪ್ರತೀ ಹೆಕ್ಟೇರ್ ಗೆ 1,27,000 ರೂಪಾಯಿ ಬೆಳೆ ವಿಮೆ ಪರಿಹಾರ ಮೊತ್ತವಾಗಿ ನೀಡಲಾಗುವುದು ಇದಕ್ಕೆ ರೈತರು 5 ಕಂತಿನಲ್ಲಿ 6,350 ರೂಪಾಯಿ ಪಾವತಿಸಬೇಕು. ಆಗ ಬೆಳೆ ನಷ್ಟ ಆದ ಸಂದರ್ಭದಲ್ಲಿ ವಿಮೆ ಮೊತ್ತವನ್ನು ಪಡೆಯಬಹುದು.

ಮಾವಿನ ಬೆಳೆಗೆ ಪ್ರತೀ ಹೆಕ್ಟೇರ್ ಗೆ 80,000 ರೂಪಾಯಿ ಬೆಳೆ ವಿಮೆ ಪರಿಹಾರ ಮೊತ್ತವಾಗಿ ನೀಡಲಾಗುವುದು ಇದಕ್ಕೆ ರೈತರು 5 ಕಂತಿನಲ್ಲಿ 4000 ರೂಪಾಯಿ ಪಾವತಿಸಬೇಕು. ಆಗ ಬೆಳೆ ನಷ್ಟ ಆದ ಸಂದರ್ಭದಲ್ಲಿ ವಿಮೆ ಮೊತ್ತವನ್ನು ಪಡೆಯಬಹುದು. ಹೀಗಾಗಿ ವಿಮೆ ಉದ್ದೇಶಕ್ಕಾಗಿ ರೈತರು ಮೊದಲು ಹಣ ಪಾವತಿ ಮಾಡಿದರೆ ಬೆಳೆ ನಷ್ಟ ಆದಂತಹ ಸಂದರ್ಭದಲ್ಲಿ ಬೆಳೆ ವಿಮೆ ರೈತರಿಗೆ ಆರ್ಥಿಕ ನೆರವು ಸಿಗಲಿದೆ. ಈ ಬಗ್ಗೆ ನಿಮಗೆ ಯಾವುದೇ ಗೊಂದಲ ಇದ್ದರೆ ಅಥವಾ ನೀವು ಬೆಳೆ ವಿಮೆಗೆ ನೋಂದಣಿ ಮಾಡಲು ಬಯಸಿದರೆ ಆಗ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಹಾಗೂ ತೋಟಗಾರಿಕೆ ಇಲಾಖೆ ಅಥವಾ ಬ್ಯಾಂಕಿನಲ್ಲಿ ಈ ಬಗ್ಗೆ ಮಾಹಿತಿ ಕೂಡ ಪಡೆಯಬಹುದು.

advertisement

Leave A Reply

Your email address will not be published.