Karnataka Times
Trending Stories, Viral News, Gossips & Everything in Kannada

Warranty Claim: ಇಂತಹ ಸಮಯದಲ್ಲಿ ವಾರೆಂಟಿ ಕ್ಲೈಂ ಮಾಡಲು ಸಾಧ್ಯವಿಲ್ಲ! ಬೈಕ್ ಇರುವ ಎಲ್ಲರಿಗೂ ಹೊಸ ರೂಲ್ಸ್

advertisement

ಇತ್ತೀಚಿನ ದಿನದಲ್ಲಿ ದೈನಿಕ ಓಡಾಟಕ್ಕೆ ವಾಹನ ಅತ್ಯಗತ್ಯವಾಗಿದ್ದು ಯಾವ ವಾಹನ ಖರೀದಿ ಮಾಡುವುದು ಎಂದು ತಿಳಿಯುದು ಕಷ್ಟವೇ. ಬೈಕ್ ಅಥವಾ ಸ್ಕೂಟರ್ ಖರೀದಿ ಮಾಡಬೇಕು ಎಂದವರು ಕಂಪೆನಿ ಅಥವಾ ಡೀಲರ್ ಮೂಲಕ ನೀವು ಹೊಸದಾಗಿ ಖರೀದಿ ಮಾಡಿದ ಬಳಿಕ ಅದರಲ್ಲಿ ಸಮಸ್ಯೆ ಕಂಡು ಬಂದರೆ ಆಗ ನೀವು ವಾರಂಟಿ ಕ್ಲೈಮ್ (Warranty Claim) ಮಾಡಲು ಮುಂದಾಗುತ್ತೀರಿ, ಆದರೆ ಅದಕ್ಕು ಮುನ್ನ ಈ ಸುದ್ದಿ ಪೂರ್ತಿ ಓದಲು ಮರೆಯದಿರಿ.

WhatsApp Join Now
Telegram Join Now

ಈಗಿನ ಕಾಲದ ಎಲೆಕ್ಟ್ರಾನಿಕ್ ವಾಹನ ಮತ್ತು ಸಾಂಪ್ರದಾಯಿಕ ಇಂಧನ ವಾಹನ ಎರಡರಲ್ಲೂ ಕೂಡ ಸಮಸ್ಯೆ ಅಧಿಕವಾಗಿ ಕಂಡು ಬರುತ್ತದೆ. ಈ ಬಗ್ಗೆ ನೀವು ವಾರೆಂಟಿ ಅನ್ನು ಕ್ಲೈಂ ಮಾಡಬಹುದು, ಆದರೆ ಈ ಒಂದು ಕಾರಣದಿಂದ ನೀವು ತಪ್ಪನ್ನು ಮಾಡಿದ್ದೇ ಆಗಿದ್ದರೆ ಯಾವುದೇ ಕಾರಣಕ್ಕೆ ವಾರೆಂಟಿ ಕ್ಲೈಮ್ (Warranty Claim) ಮಾಡಲು ಸಾಧ್ಯವಿಲ್ಲ. ಇತ್ತೀಚೆಗೆ ಒಂದು ಪ್ರಕರಣದಿಂದಾಗಿ ಈ ಬಗ್ಗೆ ಹೊಸ ಆದೇಶ ಕೋರ್ಟ್ ಮೂಲಕ ಬಂದಿದೆ.

ಯಾವುದು ಈ ಪ್ರಕರಣ?

ಬೆಂಗಳೂರಿನಲ್ಲಿ ಖಾಸಗಿ ಉದ್ಯೋಗ ಮಾಡುವ ವ್ಯಕ್ತಿ ಯೊಬ್ಬರು 2022ರಲ್ಲಿ ಯಮಹಾ ಬೈಕ್ ಒಂದನ್ನು ಖರೀದಿ ಮಾಡಿದ್ದಾರೆ ಆದರೆ ಆ ಬೈಕ್ ಸರ್ವಿಸ್ ಸಮಸ್ಯೆ ಇದ್ದ ಹಿನ್ನೆಲೆಯಲ್ಲಿ ವಾರೆಂಟಿ ಕ್ಲೈಮ್ (Warranty Claim) ಮಾಡಲು ಮುಂದಾಗಿದ್ದಾರೆ. ಆ ಮೂಲಕ ಬೈಕ್ ಸ್ಪೀಡೋಮೀಟರ್ ಸಮಸ್ಯೆಯಾಗಿದೆ (Bike Speedometer Problem) ಎಂದು ವಾರೆಂಟಿ ಕ್ಲೈಂ (Warranty Claim) ಮಾಡಿ ಗಾಡಿ ಬದಲು ಮಾಡುವಂತೆ ಕೋರಿದ್ದಾರೆ. ಆದ್ರೆ ಡೀಲರ್ ಅವರು ಈ ಮನವಿ ತಿರಸ್ಕರಿಸಿದ್ದಾರೆ.

advertisement

ಅರ್ಜಿ ಸಲ್ಲಿಕೆ:

 

Image Source: Autocar India

 

ಡೀಲರ್ ತಮ್ಮ ಮನವಿಯನ್ನು ತಿರಸ್ಕಾರ ಮಾಡಿದ್ದ ಕಾರಣ ಆ ವ್ಯಕ್ತಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಗೆ ಅರ್ಜಿ ಸಲ್ಲಿಸಿದ್ದಾರೆ. ತನಗೆ ವಾರೆಂಟಿ ಕ್ಲೈಂ ಮಾಡಿ ಪರಿಹಾರ ಕೋರುವಂತೆ ಮನವಿ ಮಾಡಿದ್ದಾರೆ. ಅರ್ಜಿ ಮೂಲಕ ಗ್ರಾಹಕರ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದು ಈ ಬಗ್ಗೆ ಈ ಪ್ರಕರಣವನ್ನು ತಿರಸ್ಕಾರ ಮಾಡಲಾಗಿದೆ.

ಕಾರಣ ಏನು?

ಬೈಕ್ ನ ವಾರೆಂಟಿ ಯಲ್ಲಿ ಉಚಿತ ಬೈಕ್ ಸರ್ವೀಸ್ ಸಂಬಂಧ ಪಟ್ಟಂತೆ ನಾಲ್ಕು ಕೂಪನ್ ಅನ್ನು ನೀಡಲಾಗಿದ್ದು ಅವೆಲ್ಲವೂ ಹಾಗೆ ಇದೆ ಯಾವುದನ್ನು ಕೂಡ ಬಳಕೆ ಮಾಡಲಿಲ್ಲ ಎಂಬುದು ತಿಳಿದು ಬಂದಿದೆ. ಅದರ ಜೊತೆಗೆ ಕೇಬಲ್, ಎಲೆಕ್ಟ್ರಾನಿಕ್ ವೈಯರ್, ಸಾಮಾಗ್ರಿಗಳು ವಾರೆಂಟಿ ವ್ಯಾಪ್ತಿಗೆ ಬರುವುದಿಲ್ಲ ಎಂಬುದು ತಿಳಿದು ಬಂದಿದೆ. ಫ್ರೀ ಸರ್ವೀಸ್ ಬಳಕೆ ಮಾಡದೇ ಇರುವುದು ತಪ್ಪು, ಉಚಿತ ಬೈಕ್ ಸರ್ವಿಸಿಂಗ್ ಸೇವೆಗಳನ್ನು ನಿಗಧಿತ ಅವಧಿ ಒಳಗೆ ಪಡೆಯದೇ ಇದ್ದವರನ್ನು ವಾರೆಂಟಿ ಕ್ಲೈಂ ಮಾಡಿಕೊಳ್ಳಲು ಸಾಧ್ಯವಗದು ಎಂದು ಗ್ರಾಹಕರ ನ್ಯಾಯಾಲಯವು ತಿಳಿಸಿದೆ.

advertisement

Leave A Reply

Your email address will not be published.