Fixed Deposit: FD ಮೇಲೆ 9% ಬಡ್ಡಿ ಘೋಷಿಸಿದ ಈ 4 ಬ್ಯಾಂಕುಗಳು! ಭರ್ಜರಿ ಸಿಹಿಸುದ್ದಿ
ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಉಳಿತಾಯ ಯೋಜನೆಯನ್ನು ಬೆಂಬಲಿಸಲಾಗುತ್ತಿರುವುದನ್ನು ನಾವು ಕಾಣಬಹುದು, ಹಣಕಾಸಿನ ಹೂಡಿಕೆ ಮಾಡಿ ಭವಿಷ್ಯದಲ್ಲಿ ಉಂಟಾಗುವ ಕಷ್ಟಕ್ಕೆ ಮೊದಲೆ ಪರಿಹಾರ ಕಂಡುಕೊಳ್ಳುವುದು ಇಂದಿನ ಜಗತ್ತಿಗೆ ಅವಶ್ಯಕವಾಗಿದೆ. ಹಣಕಾಸಿನ ಹೂಡಿಕೆಯಲ್ಲಿ ಫೈನಾನ್ಸ್ ಬ್ಯಾಂಕ್, ಬ್ಯಾಂಕ್, ಪೋಸ್ಟ್ ಆಫೀಸ್ , ಸಂಘ ಸಂಸ್ಥೆ, ಸಹಕಾರಿ ಸಂಘ ಎಂಬ ಅನೇಕ ಆಯ್ಕೆ ಇದ್ದು ಯಾವುದರಲ್ಲಿ ಹೂಡಿಕೆ ಮಾಡುವುದು ಎಂಬುದು ಗೊಂದಲ ಮಯವಾಗಿರಲಿದೆ. ಹೂಡಿಕೆಯಲ್ಲಿ Fixed Deposit ಮಾಡುವುದರಿಂದ ದೀರ್ಘಾವಧಿಯ ಪ್ರಯೋಜನವನ್ನು ನೀವು ಪಡೆಯಬಹುದು.
9% ಬಡ್ಡಿದರ:
ಎಪ್ರಿಲ್ ಒಂದರಿಂದ ಹೊಸ ಹಣಕಾಸಿನ ವರ್ಷ ಆರಂಭವಾಗಿದ್ದು ಎಲ್ಲ ಹೊಸ ಬ್ಯಾಂಕಿನ ಕ್ರಮ ನೂತನ ಲೆಕ್ಕಾಚಾರದ ಪ್ರಕಾರ ಬರಲಿದೆ. ರೆಪೊ ಬಡ್ಡಿದರ ಕೂಡ RBI ನಿರ್ಧಾರ ಮಾಡಿದ್ದ ಬಳಿಕ ಎಲ್ಲ ಬ್ಯಾಂಕ್ ನ ಉಳಿತಾಯ ಯೋಜನೆ ಮೇಲಿನ ಬಡ್ಡಿದರ ನಿರ್ಧಾರ ಆಗಲಿದೆ, ಈ ನಡುವೆ ಕೆಲವು ಬ್ಯಾಂಕಿನ Fixed Deposit ಮೇಲೆ 9% ನಂತೆ ಹಿರಿಯ ನಾಗರಿಕರಿಗೆ ಬಡ್ಡಿದರ ನೀಡಲಾಗುತ್ತಿದೆ.
ಯಾವುದು ಆ ಬ್ಯಾಂಕುಗಳು?
North East Small Finance Bank:
ಈ ಒಂದು ಬ್ಯಾಂಕ್ ನಲ್ಲಿ ಸಾಮಾನ್ಯ ನಾಗರಿಕರ Fixed Deposit ಮೇಲೆ 7.75% ನಷ್ಟು ಬಡ್ಡಿದರ ಸಿಗಲಿದೆ. ಹಾಗೇಯೇ ಹಿರಿಯ ನಾಗರಿಕರಿಗೆ ಈ ಒಂದು ಬ್ಯಾಂಕ್ ನಲ್ಲಿ 8.5% ನಂತೆ ಬಡ್ಡಿದರ ಸಿಗಲಿದೆ. ಅದೇ ರೀತಿ ಎಷ್ಟು ದಿನಗಳ ಹೂಡಿಕೆ ಎಂಬ ಆಧಾರದ ಮೇಲೆ ಬಡ್ಡಿದರ ಕೂಡ ಬದಲಾಗುತ್ತದೆ. 555- 1,111ದಿನದ ಹೂಡಿಕೆ ಮೇಲೆ ಸಾಮಾನ್ಯ ಗ್ರಾಹಕರಿಗೆ 8.50% ಬಡ್ಡಿದರ ಸಿಗಲಿದೆ , ಹಿರಿಯ ನಾಗರಿಕರಿಗೆ 9.25% ಬಡ್ಡಿದರ ಇಲ್ಲಿ ಸಿಗಲಿದೆ.
Suryoday Small Finance Bank:
ಈ ಒಂದು ಬ್ಯಾಂಕಿನಲ್ಲಿ ಉಳಿತಾಯ ಯೋಜನೆಗೆ ಅಧಿಕ ಪ್ರಾಮುಖ್ಯತೆ ನೀಡಲಾಗುವುದು. ಸಾಮಾನ್ಯ ಗ್ರಾಹಕರಿಗೆ 4% ರಿಂದ 9.01% ವರೆಗೆ ಬಡ್ಡಿದರ ಸಿಗಲಿದೆ. ಇನ್ನು ಹಿರಿಯ ನಾಗರಿಕರಿಗೆ ತಮ್ಮ Fixed Deposit ಮೇಲೆ 4.40% ನಿಂದ 9.25% ನಷ್ಟು ಬಡ್ಡಿದರ ಸಿಗಲಿದೆ. ಅವಧಿಯ ಆಧಾರದ ಮೇಲೆ ಬಡ್ಡಿದರ ಕೂಡ ಬದಲಾಗಲಿದೆ. ಈ ಬಡ್ಡಿದರದ ಮೊತ್ತವು 2 ರಿಂದ 4ವರ್ಷದ ಅವಧಿಗೆ ಸಂಬಂದ ಪಟ್ಟದ್ದಾಗಿದೆ.
Ujjivan Small Finance Bank:
ಈ ಒಂದು ಬ್ಯಾಂಕ್ ನಲ್ಲಿ ಸಾಮಾನ್ಯ ನಾಗರಿಕರ Fixed Deposit ಮೇಲೆ 3.75%. ನಿಂದ 8.50%. ನಂತೆ ಬಡ್ಡಿದರ ನಿಮಗೆ ಸಿಗಲಿದೆ. ಇಲ್ಲಿ 15 ತಿಂಗಳ FD ಮೇಲೆ ಗರಿಷ್ಠವಾಗಿ 8.50% ನಷ್ಟು ಬಡ್ಡಿದರ ನಿಮಗೆ ಸಿಗಲಿದೆ. ಹಿರಿಯ ನಾಗರಿಕರಿಗೆ 9% ನಷ್ಟು ಬಡ್ಡಿದರ ಸಿಗಲಿದೆ.
Shivalik Small Finance Bank:
ಈ ಒಂದು ಬ್ಯಾಂಕಿನಲ್ಲಿ ಸಾಮಾನ್ಯ ನಾಗರಿಕರಿಗೆ ಹಾಗೂ ಹಿರಿಯ ನಾಗರಿಕರಿಗೆ ವ್ಯತ್ಯಾಸಾತ್ಮಕ ಬಡ್ಡಿದರ ನೀಡಲಾಗುವುದು. ಸಾಮಾನ್ಯ ಗ್ರಾಹಕರಿಗೆ 3.50% ರಿಂದ 8.70% ವರೆಗೆ ಬಡ್ಡಿದರ ಸಿಗಲಿದೆ. ಇನ್ನು ಹಿರಿಯ ನಾಗರಿಕರಿಗೆ ತಮ್ಮFD ಮೇಲೆ 9.20% ನಷ್ಟು ಬಡ್ಡಿದರ ಸಿಗಲಿದೆ. ನೀವು ಎಷ್ಟು ವರ್ಷಕ್ಕೆ FD ಮಾಡಿದ್ದೀರಿ ಎಂಬ ಆಧಾರದ ಮೇಲೆ ಸಿಗುವ ಬಡ್ಡಿದರದಲ್ಲಿ ವ್ಯತ್ಯಾಸ ಆಗಲಿದೆ.