Karnataka Times
Trending Stories, Viral News, Gossips & Everything in Kannada

Cheque Bounce: ಚೆಕ್ ಬೌನ್ಸ್ ನಿಯಮಗಳಲ್ಲಿ ಬದಲಾವಣೆ ತಂದ ಆರ್ ಬಿ ಐ; ಇನ್ನು ಮುಂದೆ ಈ ಕೆಲ್ಸ ಮಾಡಿದ್ರೆ 2 ವರ್ಷ ಜೈಲು ಶಿಕ್ಷೆ ಗ್ಯಾರಂಟಿ!

advertisement

ನೀವು ಬ್ಯಾಂಕಿಂಗ್ ವ್ಯವಹಾರ ಮಾಡುತ್ತೀರಿ ಅಂದರೆ ಬ್ಯಾಂಕ್ನಿಂದ ಸಾಕಷ್ಟು ಸೌಲಭ್ಯಗಳನ್ನು ನೀಡಲಾಗುತ್ತದೆ. ಒಮ್ಮೆ ಬ್ಯಾಂಕ್ ನಲ್ಲಿ ಖಾತೆ ತೆರೆದರೆ ಡೆಬಿಟ್ ಕಾರ್ಡ್ (Debit Card), ಕ್ರೆಡಿಟ್ ಕಾರ್ಡ್ (Credit Card), ಚೆಕ್ ಬುಕ್ (Cheque Book) ಹೀಗೆ ಹತ್ತು ಹಲವು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಬಹುತೇಕ ಎಲ್ಲರೂ ಹಣಕಾಸಿನ ವ್ಯವಹಾರವನ್ನು ಆನ್ಲೈನ್ ಮೂಲಕವೇ ಮಾಡುತ್ತಾರೆ. ಆದರೆ ಕೆಲವೊಂದು ದೊಡ್ಡ ಮೊತ್ತದ ಹಣಕಾಸಿನ ವ್ಯವಹಾರಕ್ಕೆ ಚೆಕ್ ಬರೆಯುವುದು ಅನಿವಾರ್ಯವಾಗುತ್ತದೆ. ನೀವು ಚೆಕ್ ಬುಕ್ ಬಳಸಿ ಪಾವತಿ ಮಾಡುವವರಾಗಿದ್ರೆ ಈ ಸುದ್ದಿ ನಿಮಗಾಗಿ.

Change in Check Bounce Rules!

ಸಾಕಷ್ಟು ಹಣಕಾಸಿನ ವ್ಯವಹಾರ ಮಾಡುವವರು ಚೆಕ್ ಬುಕ್ (Cheque Book) ಮೂಲಕ ಹಣಕಾಸಿನ ವ್ಯವಹಾರ ಮಾಡುತ್ತಾರೆ. ಇದರ ಜೊತೆಗೆ ಇತ್ತೀಚಿನ ದಿನಗಳಲ್ಲಿ ಚೆಕ್ ಬೌನ್ಸ್ (Cheque Bounce) ಪ್ರಕರಣಗಳು ಕೂಡ ಜಾಸ್ತಿ ಆಗುತ್ತಿವೆ. ಇದಕ್ಕೆಲ್ಲ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಚೆಕ್ ಬೌನ್ಸ್ ನಿಯಮಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿದೆ. ಪ್ರತಿಯೊಂದು ಬ್ಯಾಂಕುಗಳಲ್ಲಿಯೂ ಕೂಡ ಇದನ್ನ ಅನ್ವಯಿಸಿಕೊಳ್ಳಬೇಕು ಎಂದು ಆರ್‌ಬಿಐ ಸೂಚನೆ ನೀಡಿದೆ.

ಹಣಕಾಸು ಸಚಿವಾಲಯದ ಆದೇಶ!

ವರದಿಯ ಪ್ರಕಾರ ಹೊಸ ಚೆಕ್ ಬೌನ್ಸ್ ನಿಯಮಗಳನ್ನು (Cheque Bounce Rules) ಸದ್ಯದಲ್ಲಿಯೇ ಜಾರಿಗೆ ತರಲಾಗುವುದು. ಇದಕ್ಕೆ ಸುಪ್ರೀಂಕೋರ್ಟ್ (Supreme Court) ತಜ್ಞರ ಸಮಿತಿಯನ್ನು ಕೂಡ ಸರ್ಕಾರ ರಚಿಸಿದ್ದು ಹಲವು ತಜ್ಞರಿಂದ ಶಿಫಾರಸು ಪಡೆದುಕೊಳ್ಳಲಾಗಿದೆ ಹಾಗೂ ಹಲವು ಸಲಹೆಗಳನ್ನು ಸ್ವೀಕರಿಸಲಾಗಿದೆ. ಈ ಈ ಎಲ್ಲಾ ಸಲಹೆಗಳನ್ನು ಕ್ರೋಢಿಕರಿಸಿ ಹೊಸ ಚೆಕ್ ಬೌನ್ಸ್ ನಿಯಮ ರೂಪಿಸಲಾಗಿದೆ.

What are The Check Bounce Rules?

 

 

advertisement

ಕೇಂದ್ರ ಹಣಕಾಸು ಸಚಿವಾಲಯ ಚೆಕ್ ಬೌನ್ಸ್ ನಿಯಮದ (Cheque Bounce Rule) ಅಡಿಯಲ್ಲಿ ಕೆಲವು ಪ್ರಮುಖ ವಿಚಾರಗಳನ್ನು ಸ್ಪಷ್ಟಪಡಿಸಿದೆ. ಬ್ಯಾಂಕಿನಲ್ಲಿ ಗ್ರಾಹಕರು ತಮ್ಮ ಖಾತೆಯಲ್ಲಿ ಸಾಕಷ್ಟು ಬ್ಯಾಲೆನ್ಸ್ ಇಲ್ಲದೆ ಇದ್ದಾಗ ಚೆಕ್ (Cheque) ನೀಡಿದರೆ, ಅಂತಹ ಗ್ರಾಹಕರ ಇತರ ಬ್ಯಾಂಕ ಖಾತೆಗಳಲ್ಲಿ ಇರುವ ಹಣವನ್ನು ಕಡಿತಗೊಳಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು.

ನೀವು ಚೆಕ್ ಮೂಲಕ ಪಾವತಿ ಮಾಡುತ್ತಿದ್ದೀರಿ ಎಂದರೆ ಬ್ಯಾಂಕ್ ನಲ್ಲಿ ಚೆಕ್ ನಲ್ಲಿ ಬರೆದಷ್ಟು ಮೊತ್ತದ ಹಣ ಇರಲೇಬೇಕು ಇಲ್ಲವಾದಲ್ಲಿ ಚೆಕ್ ಬೌನ್ಸ್ ಪೆನಾಲ್ಟಿ (Check Bounce Penalty) ಎಂದು ಹೆಚ್ಚುವರಿ ದಂಡವನ್ನು ಪಾವತಿಸಬೇಕಾಗುತ್ತದೆ. ಅಷ್ಟೇ ಅಲ್ದೆ ಅಂತಹ ಗ್ರಾಹಕರಿಗೆ ಹೊಸ ಬ್ಯಾಂಕ್ ಖಾತೆ ತೆರೆಯುವುದನ್ನು ನಿಷೇಧಿಸಲಾಗುತ್ತದೆ ಹಾಗೂ ಇನ್ನೂ ಇತರ ಕಾನೂನು ಕ್ರಮಗಳನ್ನು ಕೈಗೊಳ್ಳಬಹುದು.

ಹೊಸ ನಿಯಮದ ಪ್ರಕಾರ ಚೆಕ್ ಬೌನ್ಸ್ ಪ್ರಕರಣವನ್ನು ತಡೆಗಟ್ಟುವ ಸಲುವಾಗಿ ಯಾರು ತಮ್ಮ ಖಾತೆಯಲ್ಲಿ ಹಣ ಹೊಂದಿಲ್ಲವೋ ಅಂತವರು ಚೆಕ್ ನೀಡಿದರೆ ಬೌನ್ಸ್ ಆದಾಗ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಯಾವುದೇ ಕಾರಣಕ್ಕೂ ಬ್ಯಾಂಕ್ ನಲ್ಲಿ ಬ್ಯಾಲೆನ್ಸ್ (Balance) ಇಲ್ಲದೆ ಆ ವ್ಯಕ್ತಿ ಚೆಕ್ ನೀಡುವಂತಿಲ್ಲ.

ಅದೇ ರೀತಿ ಚೆಕ್ ಬೌನ್ಸ್ ಮಾಡಿದ ವ್ಯಕ್ತಿಗೆ ಹೊಸ ಬ್ಯಾಂಕು ಖಾತೆ ತೆರೆಯಲು ಕೂಡ ಅವಕಾಶ ಇರುವುದಿಲ್ಲ. ಆತನ ಸಾಲದ ಡಿಫಾಲ್ಟರ್ ಆಗಿಯೂ ಗುರುತಿಸಬಹುದು. ಇದರ ಜೊತೆಗೆ ಇದು ಸಿಬಿಲ್ ಸ್ಕೋರ್ (CIBIL Score) ಮೇಲೆ ಕೂಡ ನೇರವಾಗಿ ಪರಿಣಾಮ ಬೀರುತ್ತದೆ. ಈ ಹಿನ್ನೆಲೆಯಲ್ಲಿ ಚೆಕ್ ಬೌನ್ಸ್ ಮಾಡಿರುವ ವ್ಯಕ್ತಿ ಬ್ಯಾಂಕನಲ್ಲಿ ಸಾಲ (Loan) ಪಡೆದುಕೊಳ್ಳಲು ಅರ್ಹತೆ ಹೊಂದಿರುವುದಿಲ್ಲ ಅಥವಾ ಆತನಿಗೆ ಯಾವುದೇ ಬ್ಯಾಂಕ್ ಕೂಡ ಸಾಲ ನೀಡುವುದಿಲ್ಲ.

Check Bounce ಆದರೆ ಶಿಕ್ಷೆ!

ನಮ್ಮ ದೇಶದಲ್ಲಿ ಈಗಾಗಲೇ ಈ ನಿಯಮ ಜಾರಿಯಲ್ಲಿ ಇದೆ. ಚೆಕ್ ಬೌನ್ಸ್ ಪೆನಾಲ್ಟಿ ಜೊತೆಗೆ ಆ ವ್ಯಕ್ತಿಗೆ ಜೈಲು ಕಂಬಿ ಎಣಿಸುವ ಶಿಕ್ಷೆಯನ್ನು ಕೂಡ ನೀಡಲಾಗುತ್ತದೆ. ಆದರೆ ಈಗ ಹೊಸ ನಿಯಮದ ಅಡಿಯಲ್ಲಿ ಚೆಕ್ ಬೌನ್ಸ್ ಪೆನಾಲ್ಟಿಗೆ ಸಂಬಂಧಪಟ್ಟ ಹಾಗೆ ಯಾವುದೇ ರೀತಿಯ ಬದಲಾವಣೆಗಳನ್ನು ಕೂಡ ಮಾಡಿಲ್ಲ. ಚೆಕ್ ಬೌನ್ಸ್ (Cheque Bounce) ಆಗಿರುವ ಸಂದರ್ಭದಲ್ಲಿ ಚೆಕ್ ನೀಡಿದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದ್ದರೆ ಅವರಿಗೆ ಚೆಕ್ ಬೌನ್ಸ್ ಶುಲ್ಕವನ್ನು ವಿಧಿಸಲಾಗುತ್ತದೆ.

ಇದು ಚೆಕ್ ನಲ್ಲಿ ನಮೂದಿಸಲಾಗಿರುವ ಮೊತ್ತದ ಎರಡು ಪಟ್ಟು ಜಾಸ್ತಿ ಇರಬಹುದು ಇದರ ಜೊತೆಗೆ ಎರಡು ವರ್ಷಗಳ ಕಾಲ ಜೈಲು ಶಿಕ್ಷೆ ಕೂಡ ಆಗುವ ಸಾಧ್ಯತೆ ಇರುತ್ತದೆ. ಒಟ್ಟಿನಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಚೆಕ್ ಬೌನ್ಸ್ ಪ್ರಕರಣವನ್ನು ತಡೆಗಟ್ಟುವ ಸಲುವಾಗಿ ಕೇಂದ್ರ ಸರ್ಕಾರ ಆರ್‌ಬಿಐ (RBI) ನೇತೃತ್ವದಲ್ಲಿ ಈ ಹೊಸ ನಿಯಮಗಳನ್ನು ಜಾರಿಗೆ ತಂದಿದೆ.

advertisement

Leave A Reply

Your email address will not be published.