Karnataka Times
Trending Stories, Viral News, Gossips & Everything in Kannada

PAN Card: ಪ್ಯಾನ್ ಕಾರ್ಡ್ ಬಳಸುವವರಿಗೆ ಹೊಸ ನಿಯಮ, ಉಲ್ಲಂಘನೆ ಮಾಡಿದ್ರೆ ದಂಡ

advertisement

ಬ್ಯಾಂಕಿನ ಆರ್ಥಿಕ ಚಟುವಟಿಕೆಯನ್ನು ನಿಭಾಯಿಸಲು ಪ್ಯಾನ್ ಕಾರ್ಡ್ (PAN Card) ಇಂದು ಕಡ್ಡಾಯವಾಗಿದ್ದು ನಿಗಧಿತ ಮೊತ್ತದ ಹಣ ವಾಪಾಸ್ಸು ಪಡೆಯುವ ಹಾಗೂ ದೊಡ್ಡ ಮೊತ್ತದ ಹೂಡಿಕೆ ಇನ್ನು ಅನೇಕ ಸಂದರ್ಭದಲ್ಲಿ ಪ್ಯಾನ್ ಕಾರ್ಡ್ (PAN Card) ಅನ್ನು ಕೇಳಲಾಗುತ್ತದೆ. ಅದೇ ರೀತಿ ಸರಕಾರ ಪ್ಯಾನ್ ಕಾರ್ಡ್ಅನ್ನು ಅನೇಕ ಬ್ಯಾಂಕ್ ಸಂಬಂಧಿತ ವ್ಯವಹಾರಕ್ಕೆ ಕಡ್ಡಾಯ ಮಾಡಿದ್ದ ಕಾರಣ ಅಕ್ರಮವಾಗಿ ಎರಡು ಮೂರು ಪ್ಯಾನ್ ಕಾರ್ಡ್ ಮಾಡಿಸುವವರ ಪ್ರಮಾಣ ಅಧಿಕವಾಗುತ್ತದೆ‌. ಆದರೆ ಇನ್ನು ಮುಂದೆ ಈ ರೀತಿ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಸರಕಾರ ಚಿಂತಿಸಿದೆ.

ಬ್ಯಾಂಕಿನ ಕಾರ್ಯ ಚಟುವಟಿಕೆಗೆ, ಸಾಲ (Loan) ವ್ಯವಹಾರಕ್ಕೆ, ಆನ್ಲೈನ್ ಪಾವತಿ (Online Payment) ಇತರ ಪ್ರಕ್ರಿಯೆಗೆ ಪ್ಯಾನ್ ಕಾರ್ಡ್ ಕಡ್ಡಾಯ ಮಾಡಲಾಗುತ್ತಿದ್ದು ಬ್ಯಾಂಕಿನ ಹಣಕಾಸಿನ ವ್ಯವಹಾರಕ್ಕೆ ಪ್ಯಾನ್ ಕಾರ್ಡ್ ಅವಶ್ಯಕವಾಗಿದೆ. ಈ ಪ್ಯಾನ್ ಕಾರ್ಡಿನ ಸಂಖ್ಯೆಯೂ (PAN Card Number) ಆದಾಯ ತೆರಿಗೆ ಇಲಾಖೆ (Income Tax Department) ಯಿಂದ ನೋಂದಾಯಿಸಲ್ಪಟ್ಟಿದ್ದಾಗಿದ್ದು ಇದರ ಸಂಖ್ಯೆ ತುಂಬಾ ವೈಶಿಷ್ಟ್ಯ ದಿಂದ ಕೂಡಿದ ಸಂಖ್ಯೆಯನ್ನು ನಾವು ಕಾಣಬಹುದು.

ಕಾನೂನು ಬಾಹಿರ:

 

 

advertisement

ಬ್ಯಾಂಕಿನ ಮತ್ತು ಸರಕಾರಿ ಯೋಜನೆ ಪ್ರಯೋಜನ ಪಡೆಯಲು ಪ್ಯಾನ್ ಕಾರ್ಡ್ ಅನ್ನು ಕಡ್ಡಾಯ ಮಾಡಲಾಗುತ್ತಿದ್ದು ಒಬ್ಬೊಬ್ಬರಿಗೆ ಒಂದೊಂದು ಕಾರ್ಡ್ ಮಾತ್ರ ನೀಡುತ್ತಾರೆ ಆದರೆ ಜನ ಅಕ್ರಮವಾಗಿ ಮೂರು‌ನಾಲ್ಕು ಕಾರ್ಡ್ ಸಂಗ್ರಹ ಮಾಡುತ್ತಿದ್ದಾರೆ. ಆದಾಯ ತೆರಿಗೆ ಇಲಾಖೆ ನಿಯಮ (Income Tax Department Rule) ದ ಪ್ರಕಾರ ಓರ್ವ ವ್ಯಕ್ತಿ ಒಂದು ಪ್ಯಾನ್ ಕಾರ್ಡ್ (PAN Card) ಅನ್ನು ಮಾತ್ರವೇ ಹೊಂದಿರಬೇಕು. ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಅನ್ನು ಹೊಂದಿದ್ದರೆ ಅದು ಕಾನೂನಿನ ನಿಯಮ ಉಲ್ಲಂಘನೆ ಆದಂತೆ. ಹಾಗಾಗಿ ಈ ನಿಯಮ ಉಲ್ಲಂಘನೆ ಆದರೆ ಶಿಕ್ಷೆ ಕೂಡ ವಿಧಿಸಲಾಗುವುದು.

ಶಿಕ್ಷೆ ಏನು?

ಆದಾಯ ತೆರಿಗೆ ಇಲಾಖೆ ನಿಯಮ ಉಲ್ಲಂಘನೆ ಆದರೆ ಅದು ಕಾನೂನು ಬಾಹಿರವಾದಂತೆ ಈ ಕ್ರಮಕ್ಕೂ ಕೂಡ ಪ್ರತ್ಯೇಕ ನೀತಿ ನಿರ್ಬಂಧ ಇದೆ. 1916ರ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 272B ಇದರ ಅಡಿಯಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈ ಮೂಲಕ ವ್ಯಕ್ತಿಯ ವಿರುದ್ಧ ಹತ್ತು ಸಾವಿರ ರೂಪಾಯಿ ದಂಡ ವಿಧಿಸಲು ಸಹ ಆದೇಶನೀಡಲಾಗಿದೆ. ಅದೇ ರೀತಿ ಸ್ವ ಘೋಷಿತವಾಗಿ ಎರಡನೇ ಪ್ಯಾನ್ ಕಾರ್ಡ್ ಅನ್ನು ಸೆರೆಂಡರ್ ಮಾಡಲು ಸಹ ಅನುಮತಿಸಲಾಗಿದೆ‌

ಹೀಗೆ ಮಾಡಿ:

  • ನಿಮಗೆ ಗೊತ್ತು ಅಥವಾ ಗೊತ್ತಿಲ್ಲದೆಯೋ ಎರಡು ಪ್ಯಾನ್ ಕಾರ್ಡ್ ಅನ್ನು ನೀವು ಬಳಕೆ ಮಾಡುತ್ತಿದ್ದರೆ ಆಗ ನೀವು ಒಂದು ಕಾರ್ಡ್ ಅನ್ನು ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಹಿಂದಿರುಗಿಸಬಹುದು.
  • ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ. ಫಾರ್ಮ್ 49A ಅನ್ನು ಭರ್ತಿ ಮಾಡಿ ಸೆರೆಂಡರ್ ಮಾಡಬೇಕಾದ ಪ್ಯಾನ್ ಸಂಖ್ಯೆ ನಮೋದಿಸಿ. ಬಳಿಕ ಆ ಫಾರ್ಮ್ ಅನ್ನು UTI ಅಥವಾ NSDL ಫೆಸಿಲಿಟೇಶನ್ ಸೆಂಟರ್ ಗೆ ಕಳುಹಿಸಬೇಕು.
  • ಆನ್ಲೈನ್ ಮೂಲಕ ಕಾರ್ಡ್ ಹಿಂದಿರುಗಿಸಲು https://www.tin-nsdl.com/faqs/pan/faq-pan-cancellation.html ಭೇಟಿ ನೀಡಬೇಕು. ಅಲ್ಲಿ ನೀವು ಬಳಕೆ ಮಾಡಲು ಬಯಸುವ ಪ್ಯಾನ್ ಕಾರ್ಡ್ ನಂಬರ್ ಅನ್ನು ನಮೋದಿಸಿ ಪ್ಯಾನ್ ಕಾರ್ಡ್ ಬದಲಾವಣೆ ವಿನಂತಿ ಅರ್ಜಿ ಸಲ್ಲಿಸಬೇಕು.

advertisement

Leave A Reply

Your email address will not be published.