Karnataka Times
Trending Stories, Viral News, Gossips & Everything in Kannada

EVM Machine: ನಿಜಕ್ಕೂ ಚುನಾವಣಾ ಇವಿಎಂ ಮಿಷನ್ ಹ್ಯಾಕ್ ಮಾಡಲು ಸಾಧ್ಯವಿದೆಯಾ? ಇಲ್ಲಿದೆ ಉತ್ತರ.

advertisement

ನಿಮಗೆ ಒಂದು ಹತ್ತಿಪ್ಪತ್ತು ವರ್ಷಗಳ ಹಿಂದಿನ ಚುನಾವಣಾ ಅವಧಿ ನೆನಪಿದೆಯಾ? ಆ ಸಮಯದಲ್ಲಿ ಮತಗಟ್ಟೆಗಳಲ್ಲಿ ಮತ ಪೆಟ್ಟಿಗೆಗಳನ್ನ ಇಡಲಾಗುತ್ತಿತ್ತು. ನಾವು ಯಾರಿಗೆ ಮತ ಹಾಕುತ್ತೇವೋ ಅದನ್ನ ಒಂದು ಚೀಟಿಯಲ್ಲಿ ಗುರುತಿಸಿ ಮತ ಪೆಟ್ಟಿಗೆಗೆ ಹಾಕಬೇಕಿತ್ತು. ನಂತರ ಎಣಿಕೆಯ ದಿನ ಒಂದೊಂದೇ ಚೀಟಿಗಳನ್ನ ಮತಪೆಟ್ಟಿಗೆಯಿಂದ ತೆಗೆದು ಎಣಿಕೆ ಮಾಡಲಾಗುತ್ತಿತ್ತು. ಇಂತಹ ಸಂದರ್ಭದಲ್ಲಿ ರಾಜಕೀಯ ಪಕ್ಷದ ಪರವಾಗಿ, ಸಮಾಜದ ವಿರೋಧಿಯಾಗಿ ಈ ಮತ ಪೆಟ್ಟಿಗೆ ಕಳ್ಳತನ ಮಾಡಿದ ಉದಾಹರಣೆಗಳು ಸಾಕಷ್ಟಿವೆ. ಅಂತಹ ಸಂದರ್ಭದಲ್ಲಿ ಮತ ಪೆಟ್ಟಿಗೆ ಕಾಯ್ದುಕೊಳ್ಳುವುದೇ ದೊಡ್ಡ ಸವಾಲಾಗಿತ್ತು. ಇದೇ ಕಾರಣಕ್ಕೆ ಇವಿಎಂ ಮಷೀನ್ ಆವಿಷ್ಕಾರ ಮಾಡಲಾಗಿತ್ತು.

EVM Machine ಹ್ಯಾಕ್ ಮಾಡಲಾಗುತ್ತದೆಯೆ?

ಇತ್ತೀಚಿಗೆ 5 ರಾಜ್ಯಗಳಲ್ಲಿ ಚುನಾವಣೆ ನಡೆದಿದೆ. ಈ ಸಂದರ್ಭದಲ್ಲಿ ಮಧ್ಯಪ್ರದೇಶದಲ್ಲಿ ಬಿಜೆಪಿ (BJP) ಬಹುಮತದಿಂದ ಆಯ್ಕೆಯಾಗಿದೆ. ಇವಿಎಂ ಮಷೀನ್ (EVM Machine) ಅನ್ನು ಟೆಂಪರಿಂಗ್ ಮಾಡಲಾಗಿದೆ ಎಂದು ಕಾಂಗ್ರೆಸ್ ಪಕ್ಷದ ನಾಯಕ ದಿಗ್ವಿಜಯ ಸಿಂಗ್ (Digvijaya Singh) ಆರೋಪ ಮಾಡಿದ್ದಾರೆ.

ವಿಜಯ ಸಿಂಗ್ ಹೇಳಿದ್ದೇನು?

 

 

ಚಿಪ್ಪು ಇರುವ ಯಾವುದೇ ಮಿಷನ್ ಅನ್ನು ಹ್ಯಾಕ್ (Hack) ಮಾಡಬಹುದು. ನಾನು 2003 ರಿಂದಲೂ ಇವಿಎಂ ಮಷೀನ್ (EVM Machine) ಮತದಾನವನ್ನು ವಿರೋಧಿಸಿಕೊಂಡು ಬಂದಿದ್ದೇನೆ. ಭಾರತೀಯ ಪ್ರಜಾಪ್ರಭುತ್ವದಲ್ಲಿ ಈ ರೀತಿಯಾದಂತಹ ಪ್ರೊಫೆಷನಲ್ ಹ್ಯಾಕರ್ ಗಳು (Professional Hackers) ಇವಿಎಂ ಮಷೀನ್ ಹ್ಯಾಕ್ ಮಾಡುವುದು ದೊಡ್ಡ ವಿಚಾರವೇನು ಅಲ್ಲ. ಸುಪ್ರೀಂ ಕೋರ್ಟ್ ಹಾಗೂ ಗೌರವಾನ್ವಿತ ಇಸಿಐ ಪ್ರಜಾಪ್ರಭುತ್ವವನ್ನು ರಕ್ಷಿಸಬೇಕು ಎಂದು ಹೇಳಿದ್ದಾರೆ.

advertisement

EVM Machine ಬಗ್ಗೆ ನಿಮಗೆ ಗೊತ್ತಿರದ ವಿಚಾರಗಳು!

 

 

ಹೀಗೆ ಇವಿಎಂ ಮಷೀನ್ ಹ್ಯಾಕ್ ಮಾಡಲಾಗುತ್ತದೆ ಎಂದು ದೂರುವವರ ಮಧ್ಯೆ ನಿಜಕ್ಕೂ ಇವಿಎಂ ಮಷೀನ್ ಹ್ಯಾಕ್ ಮಾಡಲಾಗುತ್ತದೆಯೆ ಎಂಬುದನ್ನ ತಿಳಿದುಕೊಳ್ಳಬೇಕು. ಇವಿಎಂ ಮಷೀನ್ (EVM Machine) ಬಳಸಿ ಮತದಾನ ಮಾಡುವುದು ಕೇವಲ ಭಾರತದಲ್ಲಿ ಮಾತ್ರವಲ್ಲ ವಿಶ್ವದ ಇತರ ದೇಶಗಳಲ್ಲಿಯೂ ಕೂಡ ಇವಿಎಂ ಮಷೀನ್ ಮೂಲಕ ಮತದಾನ ಚಾಲ್ತಿಯಲ್ಲಿ ಇದೆ. ಈ ಹಿನ್ನೆಲೆಯಲ್ಲಿ ನಿಜಕ್ಕೂ ಮಷೀನ್ ಹ್ಯಾಕ್ ಮಾಡಲು ಸಾಧ್ಯವೇ ಎನ್ನುವ ಪ್ರಶ್ನೆ ಮೂಡುವುದು ಸಹಜ ಇದಕ್ಕೆ ಇಲ್ಲಿಗೆ ಉತ್ತರ.

ಇವಿಎಂ ಮಷೀನ್ ಹ್ಯಾಕ್ ಮಾಡಬಹುದು ಎಂದು ಪ್ರತಿ ಬಾರಿ ಸೋತ ಪಕ್ಷಗಳು ದೂರುತ್ತಲೇ ಇರುತ್ತವೆ. ಆದರೆ 2017ರಲ್ಲಿ ಚುನಾವಣಾ ಆಯೋಗ ಎಲ್ಲಾ ರಾಜಕೀಯ ಪಕ್ಷಗಳಿಗೂ ಬಹಿರಂಗವಾಗಿ ಸವಾಲು ಹಾಕಿತ್ತು. ಯಾವುದೇ ರಾಜಕೀಯ ಪಕ್ಷದ ಅಭ್ಯರ್ಥಿಗಳು ಚುನಾವಣಾ ಆಯೋಗದ ಕಚೇರಿಗೆ ಬಂದು ಇವಿಎಂ ಮಷೀನ್ ಹ್ಯಾಕ್ ಮಾಡಿ ತೋರಿಸಬಹುದು ಎಂದು ಸವಾಲು ಮಾಡಿತ್ತು.

EVM ಮೂಲಕ ಮತದಾನ!

ಈಗ ಮತದಾನದ ಪ್ರಕ್ರಿಯೆ ಇನ್ನಷ್ಟು ಸುಲಭವಾಗಿದೆ. ಬೇರೆ ಬೇರೆ ರೀತಿಯ ಪಕ್ಷದ ಚಿಹ್ನೆ ಹಾಗೂ ಹೆಸರು ಇರುವ ಬಟನ್ಗಳು ಇರುತ್ತವೆ. ಒಮ್ಮೆ ಒಬ್ಬ ವ್ಯಕ್ತಿ ಒಂದು ಬಟನ್ ಪ್ರೆಸ್ (Butten Press) ಮಾಡಿ ನಂತರ ಮತ್ತೊಂದು ಬಟನ್ ಪ್ರೆಸ್ ಮಾಡಿದರು ಕೂಡ ಮೊದಲ ಬಟನ್ ಮಾತ್ರ ಮಾನ್ಯವಾಗುತ್ತದೆ. ಹಾಗಾಗಿ ಇಲ್ಲಿ ಯಾವುದೇ ಮತದಾನ ವೇಸ್ಟ್ ಆಗುವುದಿಲ್ಲ. ಒಮ್ಮೆ ಒಬ್ಬ ವ್ಯಕ್ತಿ ಒಂದು ಬಟನ್ ಒತ್ತಿದ ತಕ್ಷಣ ಪಕ್ಕದಲ್ಲಿ ಇರುವ ಮತ್ತೊಂದು ಯಂತ್ರಕ್ಕೆ ರವಾನೆ ಆಗುತ್ತದೆ ಹಾಗಾಗಿ ಮಾನ್ಯವಾಗಿರುವ ಮತ ಮಾತ್ರ ಇನ್ನೊಂದು ಮಷೀನ್ ನಲ್ಲಿ ಉಳಿದುಕೊಳ್ಳುತ್ತದೆ.

ಹಿಂದೆ ಬ್ಯಾಲೆಟ್ ಪೇಪರ್ ಎಣಿಕೆಗೆ ಕನಿಷ್ಠ 40 ಗಂಟೆಗಳ ಸಮಯ ಬೇಕಿತ್ತು. ಈಗ ಕೆಲವೇ ಗಂಟೆಗಳಲ್ಲಿ ಮತ ಎಣಿಕೆ ಪೂರ್ಣಗೊಳ್ಳುತ್ತದೆ. ಅರ್ಧ ಮಾತ್ರವಲ್ಲದೆ ಬ್ರೆಜಿಲ್, ನೇಪಾಳ, ಫಿಲಿಪೈನ್ಸ್, ಭೂತಾನ್, ನಾರ್ವೆ, ಕೆನಡಾ ಮೊದಲಾದ ದೇಶಗಳಲ್ಲಿಯೂ ಕೂಡ ಇವಿಎಂ ಮಷೀನ್ ಮೂಲಕವೇ ಮತದಾನ ಮಾಡಲಾಗುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ ಇತರ ದೇಶಗಳು ಕೂಡ ನಂಬುವಂತಹ ಇವಿಎಂ ಮಷೀನ್ ಮತದಾನ ಹೆಚ್ಚು ಮಾನ್ಯವಾಗಿದೆ ಎಂದರೆ ಅದಕ್ಕೆ ಮುಖ್ಯ ಕಾರಣ ಇವಿಎಂ ಮಷೀನ್ ಅನ್ನು ಯಾರು ಕೂಡ ಹ್ಯಾಕ್ ಮಾಡಲು ಸಾಧ್ಯವೇ ಇಲ್ಲ. ಅಂತಹ ಅತ್ಯದ್ಭುತ ತಂತ್ರಜ್ಞಾನವನ್ನು ಇವಿಎಂ ಮಷೀನ್ ನಲ್ಲಿ ಬಳಸಲಾಗುತ್ತದೆ.

advertisement

Leave A Reply

Your email address will not be published.