Karnataka Times
Trending Stories, Viral News, Gossips & Everything in Kannada

Crop Compensation Amount: ಬೆಳೆ ಪರಿಹಾರ ಮೊತ್ತ ಯಾವಾಗ ಸಿಗಲಿದೆ? ಕಂದಾಯ ಸಚಿವರಿಂದ ಸ್ಪಷ್ಟನೆ

advertisement

ಈ ಬಾರಿ ಹವಾಮಾನ ವೈಪರಿತ್ಯ ದೇಶಾದ್ಯಂತ ಕಾಡಿದ್ದ ಸಮಸ್ಯೆಯಾಗಿದ್ದು ಕೆಲವೆಡೆ ಚಂಡಮಾರುತ ಬಂದು ಅಪ್ಪಳಿಸಿದರೆ ಇನ್ನೂ ಹಲವೆಡೆ ಮಳೆ ಅಭಾವದಿಂದ ಬದುಕಿದ್ದವರ ನೆಲೆಯನ್ನೇ ಕಂಗಾಲು ಮಾಡುತ್ತಿದೆ. ಈ ಬಾರಿ ಮಳೆ ಬರದೇ ಇದ್ದು, ರೈತರಿಗೆ ಹೆಚ್ಚು ಸಂಕಷ್ಟ ಪಡುವಂತಾಗಿದ್ದು ಎನ್ನಬಹುದು. ಕಷ್ಟ ಪಟ್ಟು ಸಾಲ (Loan) ಸೂಲ ಮಾಡಿ ಬಿತ್ತಿದ್ದ ಬೆಳೆ ಫಸಲು ಬರುವ ಮೊದಲೇ ಮಳೆ ಕಾಣದೆ ನಷ್ಟವಾಗಿದ್ದು ಎಲ್ಲರಿಗೂ ತಿಳಿದ ವಿಚಾರವಾಗಿದೆ.

ರಾಜ್ಯ ಮಟ್ಟದ ಚರ್ಚೆ:

ಒಂದೆಡೆ ಫಸಲು ಬರಲಿಲ್ಲ ಎಂಬ ಸಮಸ್ಯೆ ಕಾಡಿದ್ದರೆ ಬಾವಿಯಿಂದ ಪಂಪ್ (Pump) ಮೂಲಕ ನೀರು ಹಾಯಿಸ್ತೇವೆ ಅಂದೋರಿಗೂ ಪ್ರಾಣಿ ದಾಳಿ, ಕೀಟನಾಶಕ ಇನ್ನು ಅನೇಕ ಕಾರಣಕ್ಕೆ ಬೆಳೆ ಹಾನಿ ಸಹ ಆಗಿದೆ. ಹಾಗಾಗಿ ರೈತರ ಸಂಕಷ್ಟ ಬಗೆಹರಿಸಲು ಸರಕಾರಕ್ಕೆ ಅನೇಕ ಬಾರಿ ಮನವಿ ಮಾಡಿ ಬೆಳೆ ಹಾನಿಗೆ ಪರಿಹಾರ ಕೇಳಲಾಗಿದ್ದು ಸದ್ಯ ಈ ವಿಚಾರ ರಾಜ್ಯ ಮಟ್ಟದಲ್ಲಿ ದೊಡ್ಡ ಮಟ್ಟಿಗೆ ಚರ್ಚೆಯಾಗುತ್ತಿದೆ.

 

advertisement

ಕೇಂದ್ರಕ್ಕೆ ಮನವಿ:

 

 

ಈಗಾಗಲೇ ಈ ಬಗ್ಗೆ ರಾಜ್ಯ ವಿಧಾನ ಪರಿಷತ್ ನಲ್ಲಿ ಚರ್ಚೆಯಾಗುತ್ತಿದೆ. ಬಿಜೆಪಿ ಸದಸ್ಯರೊಬ್ಬರು ರೈತರ ಬೆಳೆ ಹಾನಿ (Crop Damage) ಪರಿಹಾರದ ಬಗ್ಗೆ ಪ್ರಶ್ನೆ ಮಾಡಿದ್ದು ಅದಕ್ಕೆ ಕಂದಾಯ ಸಚಿವರು ಸಂಪೂರ್ಣ ಸ್ಪಷ್ಟನೆ ನೀಡಿದ್ದಾರೆ. ರಾಜ್ಯ ವಿಪತ್ತು ಪ್ರಾಧಿಕಾರ ಈಗಾಗಲೇ ಸಭೆ ನಡಿಸಿ ಸಮಿತಿ ಮತ್ತು ಉಪಸಮಿತಿ ರಚಿಸಿದ್ದೇವೆ. ಮುಂಗಾರು ಅವಧಿಯಲ್ಲಿ ಸೆಪ್ಟೆಂಬರ್ 13 ರಿಂದಲೇ ಬರ ಪರಿಸ್ಥಿತಿ ಘೋಷಣೆ ಆಗಿದೆ. ಹಾಗಾಗಿ ಸೆಪ್ಟೆಂಬರ್ 22 ರಂದೇ ನಾವು ಕೇಂದ್ರಕ್ಕೆ ಮನವಿ ಸಲ್ಲಿಸಿದ್ದೇವೆ. ಈಗಾಗಲೇ ಮೇವಿನ ಕೊರತೆ ನೀಗಿಸಲು 7 ಲಕ್ಷಕ್ಕೂ ಅಧಿಕ ಬಿತ್ತನೆ ಬೀಜದ ಕಿಟ್ ನೀಡಿದ್ದೇವೆ ಎಂದರು.

ಹಣದ ಮೊತ್ತ ಎಷ್ಟು?

ಪರಿಹಾರ ಮೊತ್ತ ಕಡಿಮೆ ಆಯಿತು ಎಂದು ವಿಪಕ್ಷ ನಾಯಕರು ಕೇಳಿದ್ದಕ್ಕೆ ಉತ್ತರಿಸಿದ್ದ ಕಂದಾಯ ಸಚಿವರು, ಬರ ಪರಿಹಾರಕ್ಕೆ ರಾಜ್ಯದ ನಾನಾ ಭಾಗದಿಂದ ಮನವಿ ಬಂದಿದ್ದು ಕೇಂದ್ರಕ್ಕೆ ರಾಜ್ಯದ ಹಣಕಾಸನ್ನು ಬೇಗ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೇವೆ. ಅವರು ಇನ್ನು ಸಹ ಹಣ ಮಂಜೂರು ಮಾಡಲಿಲ್ಲ ಹಾಗಾಗಿ ರಾಜ್ಯದಿಂದಲೇ ಬರ ಪರಿಹಾರಕ್ಕೆ ಎರಡು ಸಾವಿರ ರೂಪಾಯಿ ಕೊಡಲು ಸಿಎಂ ಅವರು ಸೂಚಿಸಿದ್ದಾರೆ. ಕಂತಿನ ಆಧಾರದಲ್ಲಿ ಹಣ ಬಿಡುಗಡೆ ಆಗಲಿದ್ದು ಮುಂದಿನವಾರ ಹಣ ಬಿಡುಗಡೆ ಆಗಲಿದೆ‌. ಇದು ಕಡಿಮೆ ಮೊತ್ತ ಎಂದು ಗೊತ್ತಿದೆ ಆದರೆ ಕೇಂದ್ರ ಅನುದಾನ ಬರುತ್ತಿದ್ದಂತೆ ಅಷ್ಟು ಪರಿಹಾರ ಮೊತ್ತ ನೀಡುವೆವು ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

ಬಳಿಕ ಮಾತನಾಡಿ, ರೈತರಿಗೆ ಕೃಷಿ ಚಟುವಟಿಕೆಗೆ ಮಾತ್ರವಲ್ಲದೇ ರಾಜ್ಯದ ನಾನಾ ಭಾಗದಲ್ಲಿ ಕುಡಿಯಲು ಸಹ ನೀರಿನ ಸಮಸ್ಯೆ ಇದೆ. ಇದರ ಪರಿಹಾರಕ್ಕೆ ಖಾಸಗಿ ಜೊತೆ ಕೈ ಜೋಡಿಸಿದ್ದೇವೆ. ಚಿತ್ರದುರ್ಗ, ವಿಜಾಪುರ, ಬಾಗಲಕೋಟೆ ಇನ್ನು ಅನೇಕ ಕಡೆ ನೀಡಿನ ಸಮಸ್ಯೆ ಸರಿಪಡಿಸಲು ಖಾಸಗಿ ಬೋರ್ ವೆಲ್ (Private Borewell) ಅನ್ನು ಬಾಡಿಗೆ ಪಡೆದಿದ್ದೇವೆ. ಹಲವೆಡೆ ನೀರಿನ ಟ್ಯಾಂಕರ್ ಮೂಲಕ ನೀರಿನ ಸೌಲಭ್ಯ ನೀಡಿದ್ದೇವೆ ಎಂದು ಅವರು ಹೇಳಿದ್ದಾರೆ.

advertisement

Leave A Reply

Your email address will not be published.