Karnataka Times
Trending Stories, Viral News, Gossips & Everything in Kannada

Brian Lara: ವಿರಾಟ್, ರೋಹಿತ್ ಅಲ್ಲ, ಟೀಮ್ ಇಂಡಿಯಾದ ಈ ಸ್ಟಾರ್ ಬ್ಯಾಟ್ಸಮನ್ ಲಾರಾ ಅವರ ರೆಕಾರ್ಡ್ ಮುರಿಯಲಿದ್ದಾನೆ.

advertisement

ಟೀಮ್ ಇಂಡಿಯಾದ ಭರವಸೆಯ ಆಟಗಾರರಲ್ಲಿ ಶುಭಮನ್‌ ಗಿಲ್‌ (Shubhman Gill) ಕೂಡ ಒಬ್ಬರು. ಸಿಕ್ಕ ಅವಕಾಶದಲ್ಲಿ ಅಬ್ಬರಿಸುತ್ತಿರುವ ಗಿಲ್‌, ಭವಿಷ್ಯದ ಟೀಮ್ ಇಂಡಿಯಾದ ಸ್ಟಾರ್ ಪ್ಲೇಯರ್. ಈ ಪ್ಲೇಯರ್‌ ಆಟವನ್ನು ಕಂಡು ಅದೆಷ್ಟೋ ಕ್ರಿಕೆಟ್‌ ದಿಗ್ಗಜರು ಅವರ ಬೆನ್ನು ತಟ್ಟಿದ್ದಾರೆ. ಶುಭಮನ್ ಗಿಲ್ ಒಬ್ಬ ಬೆಸ್ಟ್‌ ಬ್ಯಾಟ್ಸ್‌ಮನ್, ನಾನು ನನ್ನ 19 ನೇ ವಯಸ್ಸಿನಲ್ಲಿ 10% ರಷ್ಟು ಕೂಡ ಇರಲಿಲ್ಲ ಎಂದು ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್‌ ಕೊಹ್ಲಿ (Virat Kohli)  ಅವರು ಈಗಾಗಲೇ ಹೇಳಿದ್ದಾರೆ. ಇದೀಗ ಕ್ರಿಕೆಟ್ ಜಗತ್ತಿನ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿರುವ ವೆಸ್ಟ್ ಇಂಡೀಸ್‌ನ ಬ್ರಿಯಾನ್ ಲಾರಾ ಅವರು ಕೂಡ ಭಾರತೀಯ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಬಗ್ಗೆ ದೊಡ್ಡ ಭವಿಷ್ಯ ನುಡಿದಿದ್ದಾರೆ.

ಶುಭಮನ್ ಗಿಲ್ ನನ್ನ 401ಮತ್ತು 501 ರನ್‌ಗಳ ದಾಖಲೆಯನ್ನು ಮುರಿಯಬಹುದು ಎಂದು ಅನುಭವಿ ಬ್ರಿಯಾನ್ ಲಾರಾ (Brian Lara) ಹೇಳಿದ್ದಾರೆ. ಇದಲ್ಲದೆ, ಅವರು ಗಿಲ್ ಪ್ರಸ್ತುತ ಕಾಲದ ಅತ್ಯಂತ ಪ್ರತಿಭಾವಂತ ಬ್ಯಾಟ್ಸ್‌ಮನ್ ಎಂದು ಬಣ್ಣಿಸಿದ್ದಾರೆ. ಬ್ರಿಯಾನ್ ಲಾರಾ ಟೆಸ್ಟ್ ಮತ್ತು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಮಾಡಿದ ದಾಖಲೆಯನ್ನು ಹೊಂದಿದ್ದಾರೆ.

2004ರಲ್ಲಿ ಇಂಗ್ಲೆಂಡ್ ವಿರುದ್ಧ ಆಡಿದ ಪಂದ್ಯದಲ್ಲಿ ಅಜೇಯ 400 ರನ್‌ಗಳ ಇನ್ನಿಂಗ್ಸ್‌ ಆಡುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದರು. ಇದರ ಹೊರತಾಗಿ, 1994 ರಲ್ಲಿ, ವೆಸ್ಟ್ ಇಂಡೀಸ್ ದಂತಕಥೆ, ಕೌಂಟಿ ಕ್ರಿಕೆಟ್‌ನಲ್ಲಿ ವಾರ್ವಿಕ್‌ಶೈರ್‌ ಪರ ಆಡುವಾಗ, ಡರ್ಹಾಮ್ ವಿರುದ್ಧ ಅಜೇಯ 501 ರನ್ ಗಳಿಸಿದ್ದರು.
ಪ್ರಸ್ತುತ ಟೆಸ್ಟ್ ಪಂದ್ಯಗಳ ಇನ್ನಿಂಗ್ಸ್‌ನಲ್ಲಿ ಒಟ್ಟು 400 ರನ್ ಗಳಿಸಿದರೆ ಉತ್ತಮವೆಂದು ಅಂದಾಜಿಸಲಾಗುತ್ತದೆ. ಸಾಧ್ಯವಾದಷ್ಟು ಬೇಗ ಶುಭಮನ್ ಗಿಲ್ ಅವರು ತಮ್ಮ 400 ಮತ್ತು 501 ರನ್‌ಗಳ ದಾಖಲೆಯನ್ನು ಮುರಿಯಬಹುದು ಎಂದು ಬ್ರಿಯಾನ್ ಲಾರಾ ಹೇಳಿದ್ದಾರೆ.

advertisement

ಕೆಲ ದಿನಗಳ ಹಿಂದೆ ನಡೆದ ಸಂದರ್ಶನ ಒಂದರಲ್ಲಿ ಮಾತನಾಡಿದ ಬ್ರಿಯಾನ್ ಲಾರಾ, ಶುಭಮನ್ ಗಿಲ್ ನನ್ನ ದಾಖಲೆಗಳನ್ನು ಮುರಿಯಬಹುದು ಎಂದು ಹೇಳಿದ್ದಾರೆ. ಈಗಿನ ಹೊಸ ಪೀಳಿಗೆಯಲ್ಲಿ ಗಿಲ್ ಅತ್ಯಂತ ಪ್ರತಿಭಾವಂತ ಬ್ಯಾಟ್ಸ್‌ಮನ್. ಮುಂಬರುವ ವರ್ಷಗಳಲ್ಲಿ ಅವರು ಕ್ರಿಕೆಟ್ ಅನ್ನು ಆಳುತ್ತಾರೆ. ಅವರು ನನ್ನ ದೊಡ್ಡ ದಾಖಲೆಗಳನ್ನು ಮುರಿಯುತ್ತಾರೆ ಎಂಬುದು ನನಗೆ ಈಗಾಗಲೇ ಖಚಿತವಾಗಿದೆ ಎಂದು ಹೇಳಿದ್ದಾರೆ.

ವಿಶ್ವಕಪ್ ನಲ್ಲಿ ಗಿಲ್ ನೀಡಿರುವ ಪ್ರದರ್ಶನದ ಬಗ್ಗೆ ಮಾತನಾಡಿರುವ ಲಾರಾ, ಅವರು ವಿಶ್ವಕಪ್‌ನಲ್ಲಿ ಶತಕ ಗಳಿಸಲಿಲ್ಲ, ಆದರೆ ಅವರು ಮೊದಲು ಆಡಿದ ಇತರ ಇನ್ನಿಂಗ್ಸ್‌ಗಳನ್ನು ನೋಡಬೇಕು. ಅವರು ಎಲ್ಲಾ ಮೂರು ಸ್ವರೂಪಗಳಲ್ಲಿ ಶತಕಗಳನ್ನು ಗಳಿಸಿದ್ದಾರೆ. ಅಲ್ಲದೇ ಅವರು ಏಕದಿನ ಕ್ರಿಕೆಟ್ ನಲ್ಲಿ ದ್ವಿಶತಕ ಬಾರಿಸಿದ್ದಾರೆ. ಏಕದಿನ ಮತ್ತು ಐಪಿಎಲ್‌ ನಲ್ಲಿ ಅನೇಕ ಉತ್ತಮ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ಅವರು ಭವಿಷ್ಯದಲ್ಲಿ ಅನೇಕ ಐಸಿಸಿ ಟೂರ್ನಿ ಆಡುತ್ತಾರೆ ಎಂದು ನನಗೆ ಖಾತ್ರಿಯಿದೆ.

24 ನೇ ವಯಸ್ಸಿನ, ಶುಭಮನ್ ಗಿಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅನೇಕ ದೊಡ್ಡ ದಾಖಲೆಗಳನ್ನು ನಿರ್ಮಿದ್ದಾರೆ. ಗಿಲ್ ಎಲ್ಲಾ ಮೂರು ಮಾದರಿಗಳಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ. ಏಕದಿನದಲ್ಲಿ ದ್ವಿಶತಕ ಸಿಡಿಸಿದ ಅತ್ಯಂತ ಕಿರಿಯ ಆಟಗಾರ. ಗಿಲ್ 18 ಟೆಸ್ಟ್ ಪಂದ್ಯಗಳ 33 ಇನ್ನಿಂಗ್ಸ್‌ಗಳಲ್ಲಿ 32.20 ಸರಾಸರಿಯಲ್ಲಿ 966 ರನ್ ಗಳಿಸಿದ್ದಾರೆ. ಹಾಗಾಗಿ ಅವರ ಮೇಲೆ ತುಂಬಾ ನಿರೀಕ್ಷೆಗಳಿವೆ ಎನ್ನಲಾಗುತ್ತಿದೆ.

advertisement

Leave A Reply

Your email address will not be published.