Karnataka Times
Trending Stories, Viral News, Gossips & Everything in Kannada

Agriculture Pump Set: ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಗುಡ್ ನ್ಯೂಸ್ ನೀಡಿದ ಸರ್ಕಾರ,

advertisement

ಇತ್ತೀಚಿನ ದಿನಗಳಲ್ಲಿ ಬಗರ್ ಹುಕುಂ ಯೋಜನೆ (Bagar Hukum Scheme) ಯ ಅಡಿಯಲ್ಲಿ ಸಾಗುವಳಿ ಜಮೀನನ್ನು ಅಕ್ರಮ ಸಕ್ರಮ ಮಾಡಿಕೊಡಲು ಸರ್ಕಾರ ಕ್ರಮ ಕೈಗೊಂಡಿದೆ. ಎಂಟು ತಿಂಗಳ ಒಳಗೆ 15 ವರ್ಷಗಳ ಹಿಂದಿನಿಂದಲೂ ಸರ್ಕಾರಿ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಬಂದಿರುವ ರೈತರಿಗೆ ಸಾಗುವಳಿ ಪತ್ರ ನೀಡಲು ಸರ್ಕಾರ ಮುಂದಾಗಿದೆ.

Illegal Agriculture Pump Set ಸಕ್ರಮಕ್ಕೆ ಆದೇಶ!

ರಾಜ್ಯದಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಅಕ್ರಮ ಕೃಷಿ ಪಂಪ್ ಸೆಟ್ (Agriculture Pump Set) ಗಳನ್ನು ಸಕ್ರಮಗೊಳಿಸುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಈ ಬಗ್ಗೆ ಈಗಾಗಲೇ ರಾಜ್ಯ ಇಂಧನ ಸಚಿವ ಕೆ. ಜೆ ಜಾರ್ಜ್ ಮಾಹಿತಿ ಹಂಚಿಕೊಂಡಿದ್ದಾರೆ. ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಕೆ. ಜೆ ಜಾರ್ಜ್ (K. J. George) 4 ಲಕ್ಷ ಅಕ್ರಮ ಕೃಷಿಗಳನ್ನು ಸಕ್ರಮಗೊಳಿಸಲು ಕ್ರಮ ಕೈಗೊಳ್ಳಲಾಗಿದ್ದು ಸದ್ಯದಲ್ಲಿಯೇ ಈ ಪ್ರಕ್ರಿಯೆ ಆರಂಭವಾಗಲಿದೆ ಎಂದಿದ್ದಾರೆ.

 

 

advertisement

ರೈತರಿಗೆ ಕೃಷಿ ಸಾಗುವಳಿ ಭೂಮಿ ಹಕ್ಕು ಪತ್ರ (Land Title Deed) ನೀಡಲು ಸರ್ಕಾರ ನಿರ್ಧರಿಸಿದೆ. ಸರಿಯಾದ ಸ್ಯಾಟಿಲೈಟ್ ಪರಿಶೀಲನೆ ನಡೆಸಿ ಸಾಗುವಳಿ ಜಮೀನನ್ನು ಅರ್ಹ ರೈತರಿಗೆ ನೀಡಲಾಗುವುದು ಈಗಾಗಲೇ 9 ಲಕ್ಷಕ್ಕೂ ಹೆಚ್ಚಿನ ಅರ್ಜಿಗಳು ಸಂದಾಯವಾಗಿದ್ದು, ಅರ್ಹ ಅರ್ಜಿಗಳನ್ನ ಗುರುತಿಸಿ ಅಂತವರಿಗೆ ಹಕ್ಕು ಪತ್ರ ನೀಡಲು ಇನ್ನು ಎಂಟು ತಿಂಗಳುಗಳ ಅವಧಿಯನ್ನು ಸರ್ಕಾರ ಅಧಿಕಾರಿಗಳಿಗೆ ನೀಡಿದ ಜೊತೆಗೆ ಈಗ 4 ಲಕ್ಷ ಅಕ್ರಮ ಪಂಪ್ ಸೆಟ್ (Illegal Pump Set) ಗಳನ್ನು ಸಕ್ರಮ ಮಾಡುವ ಸರ್ಕಾರದ ನಿರ್ಧಾರದಿಂದ ರೈತರಿಗೆ ಇನ್ನಷ್ಟು ಖುಷಿ ನೀಡಿದೆ.

ವಸತಿ ಶಾಲೆಗಳಿಗೆ ಹೆಚ್ಚಿನ ಹಣ ಬಿಡುಗಡೆ!

ಶ್ರವಣದೋಷ ಹಾಗೂ ದೃಷ್ಟಿ ದೋಷ ಇರುವ ಮಕ್ಕಳನ್ನು ಹೊಂದಿರುವ ವಸತಿ ಶಾಲೆಗಳಿಗೆ ಕ್ಷೇಮಾಭಿವೃದ್ಧಿ ನಿಧಿಯ ಶೇಕಡಾ 15% ಅನ್ನು ವಿನಿಯೋಗಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಇತ್ತೀಚಿಗೆ ನಡೆದ ವಿಧಾನ ಪರಿಷತ್ ಸಭೆಯಲ್ಲಿ ಎಲ್ಲಾ ಸದಸ್ಯರ ಅನುಮೋದನೆ ದೊರಕಿದೆ.

ಬೆಳೆ ಪರಿಹಾರ ಹಣ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ!

ರಾಜ್ಯದ್ಯಂತ 220ಕ್ಕೂ ಹೆಚ್ಚಿನ ಪ್ರದೇಶಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಲಾಗಿದೆ. ಬರ ಪರಿಸ್ಥಿತಿಯಲ್ಲಿ ಬೆಳೆ ಪರಿಹಾರ ನಿಧಿಗಾಗಿ ಕೇಂದ್ರ ಸರ್ಕಾರದ ಎನ್ ಡಿ ಆರ್ ಎಫ್ (NDRF) ಅನುದಾನವನ್ನು ರಾಜ್ಯ ಸರ್ಕಾರ ನಿರೀಕ್ಷೆ ಮಾಡುತ್ತಿದೆ. ಆದರೆ ಇದುವರೆಗೆ ಆ ಹಣ ಬಿಡುಗಡೆ ಆಗದೇ ಇರುವ ಹಿನ್ನಲೆಯಲ್ಲಿ ಅರ್ಹ ರೈತರಿಗೆ ತಲಾ ಎರಡು ಸಾವಿರ ರೂಪಾಯಿಗಳನ್ನು ಮೊದಲ ಕಂತಿನ ಹಣವಾಗಿ ಪಾವತಿಸಲು ಸರ್ಕಾರ ನಿರ್ಧರಿಸಿದೆ ಎಂದು ಕೃಷಿ ಸಚಿವ ಎನ್ ಚೆಲುವರಾಯಸ್ವಾಮಿ (Minister N Chaluvarayaswamy) ಮಾಹಿತಿ ನೀಡಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಅರ್ಹ ಫಲಾನುಭವಿ ರೈತರ ಖಾತೆಗೆ ಸಾವಿರ ರೂಪಾಯಿಗಳು ನೇರವಾಗಿ ಜಮಾ ಆಗಲಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.

advertisement

Leave A Reply

Your email address will not be published.