Karnataka Times
Trending Stories, Viral News, Gossips & Everything in Kannada

Nandini Milk Price: ಮತ್ತೆ ಹೆಚ್ಚಳವಾಗುತ್ತಾ ನಂದಿನಿ ಹಾಲಿನ ದರ? ಇಲ್ಲಿದೆ ಅಸಲಿ ವಿಚಾರ

advertisement

ಜನಸಾಮಾನ್ಯರಿಗೆ ಈ ನಂದಿನಿ ಹಾಲು ಎಲ್ಲರಿಗೂ ಚಿರಪರಿಚಿತವಾಗಿದ್ದು, ಹೆಚ್ಚಿನ ಗ್ರಾಹಕರು ನಂದಿನಿ ಹಾಲನ್ನೇ (Nandini Milk) ಖರೀದಿ ಮಾಡುತ್ತಾರೆ. ಆದರೆ ಇದೀಗ ಉತ್ಪಾದಕ ವೆಚ್ಚವನ್ನು ನಿಭಾಯಿಸಲು ರೈತರಿಗೆ ಸಹಾಯವಾಗುವಂತೆ ಮಾಡಲು ಕರ್ನಾಟಕ ಸರ್ಕಾರ (Karnataka Government)  ನಂದಿನಿ ಹಾಲಿನ ಬೆಲೆ (Nandini Milk Price) ಯನ್ನು ಹೆಚ್ಚಿಸಲು ಚಿಂತನೆ ನಡೆಸುತ್ತಿದ್ದು, ಆ ಕುರಿತಾದ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಮಾಹಿತಿಯಲ್ಲಿ ತಿಳಿದುಕೊಳ್ಳಬಹುದು.

 

advertisement

ಕೆಎಂಎಫ್ (KMF) ಗೆ ಮನವಿ ಮಾಡಿರುವ ಹಾಲು ಒಕ್ಕೂಟಗಳು:

ರಾಜ್ಯದಲ್ಲಿರುವ 14 ಹಾಲು ಒಕ್ಕೂಟಗಳು ಕರ್ನಾಟಕ ಹಾಲು ಮಾರಾಟ ಮಹಾಮಂಡಲಿ (KMF)ಗೆ ಮನವಿ ಮಾಡಿದ್ದು, ಈ ಕಾರಣದಿಂದಾಗಿ ಹಾಲಿನ ದರವನ್ನು ಮತ್ತೆ ಹೆಚ್ಚಳ ಮಾಡಲು ಮುಂದಾಗಿದೆ ಎನ್ನಲಾಗಿದೆ. ಈ ಹಿಂದೆ ಹಾಲಿನ ದರದಲ್ಲಿ ಮೂರು ರೂಪಾಯಿಯನ್ನು ಹೆಚ್ಚಳ ಮಾಡಿತ್ತು. ಈ ಹಣವನ್ನು ರೈತರಿಗೆ ನೀಡುತ್ತಿದ್ದು, ಹೀಗಾಗಿ ಹಾಲು ಒಕ್ಕೂಟಗಳು ನಷ್ಟವನ್ನು ಅನುಭವಿಸುತ್ತಿದೆ. ಈ ಎಲ್ಲಾ ನಷ್ಟವನ್ನು ಸರಿದೂಗಿಸುವ ಸಲುವಾಗಿ ದರ ಪರಿಷ್ಕರಣೆ ಮಾಡಲು ಮುಂದಾಗಿದ್ದು, ಒಂದು ವೇಳೆ ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಕ್ಕರೆ ಮತ್ತೆ ಹಾಲಿನ ದರ (Milk Price) ಹೆಚ್ಚಳವಾಗಲಿದೆ.

ಮುಂದಿನ ವರ್ಷ ಜನವರಿಯಲ್ಲಿ ಸಭೆ?

ಹಾಲಿನ ದರ ಹೆಚ್ಚಳಕ್ಕೆ ಸಂಬಂಧ ಪಟ್ಟಂತೆ ಮುಂದಿನ ವರ್ಷ ಜನವರಿ ತಿಂಗಳಿನಲ್ಲಿ ಯಲ್ಲಿ 14 ಹಾಲು ಒಕ್ಕೂಟಗಳ ಸಭೆ ಕರೆಯಲು KMF ಚಿಂತನೆ ನಡೆಸಿದ್ದು, ಎಲ್ಲಾ ವಿಚಾರಗಳನ್ನು ಕೂಲಂಕುಷವಾಗಿ ಗಮನಿಸಿ ದರ ಹೆಚ್ಚಳದ ಬಗ್ಗೆ ತೀರ್ಮಾನ ಮಾಡಲಿದೆ. ಹಾಗಾಗಿ ಹಾಲಿನ ದರ ಹೆಚ್ಚಳವಾಗುವ ತನಕ ಹೀಗಿರುವ ದರದಲ್ಲಿ ಗ್ರಾಹಕರಿಗೆ ನಂದಿನಿ ಹಾಲು ಮಾರುಕಟ್ಟೆಯಲ್ಲಿ ಸಿಗಲಿದೆ.

 

advertisement

Leave A Reply

Your email address will not be published.