Karnataka Times
Trending Stories, Viral News, Gossips & Everything in Kannada

RBI: 500 ರೂಪಾಯಿ ನೋಟಿಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ ಆರ್‌ಬಿಐ.

advertisement

ಇತ್ತೀಚೆಗಷ್ಟೇ RBI 500 ರೂ.ಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿತ್ತು ಅದರ ನಂತರದಲ್ಲಿ ಜನರ ಟೆನ್ಷನ್ ಹೆಚ್ಚಾಗಿದೆ.  ಹೌದು 2000 ರೂಪಾಯಿ ನೋಟುಗಳ ನಂತರ ಈಗ 500 ರೂಪಾಯಿ ನೋಟುಗಳ ಚಲಾವಣೆ ನಿಲ್ಲಲಿದೆ. ಆದ್ದರಿಂದ RBI ಈ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ಭಾರತೀಯ ರಿಸರ್ವ್ ಬ್ಯಾಂಕ್ (RBI) 2000 ರೂಪಾಯಿ ನೋಟುಗಳನ್ನು ಹಿಂತೆಗೆದುಕೊಂಡ ನಂತರ ಈಗ 500 ರೂಪಾಯಿ ನೋಟು (500 Rupee Note) ಗಳ ಸಮಸ್ಯೆ ಆರಂಭವಾಗಿದೆ. ಆರ್‌ಬಿಐನ ಇತ್ತೀಚಿನ ವಾರ್ಷಿಕ ವರದಿಯಲ್ಲಿ 500 ರೂಪಾಯಿ ನೋಟುಗಳಿಗೆ ಸಂಬಂಧಿಸಿದ ದೊಡ್ಡ ಸಮಸ್ಯೆಯೊಂದು ಬಹಿರಂಗವಾಗಿದೆ.

2000 ರೂ.ಗಳ ಗುಲಾಬಿ ನೋಟುಗಳ ಚಲಾವಣೆ ಮುಚ್ಚಿದ ನಂತರ ಇದೀಗ 500 ರೂ.ಗಳ ನೋಟುಗಳು (500 Rupee Notes) ರಿಸರ್ವ್ ಬ್ಯಾಂಕ್‌ಗೆ ಗಂಭೀರ ಸಮಸ್ಯೆಯಾಗುತ್ತಿದೆ. ಈಗಾಗಲೇ ಹೇಳಿರುವ ವರದಿಯ ಪ್ರಕಾರ, ನಕಲಿ 500 ರೂ ನೋಟುಗಳ ಒಳನುಸುಳುವಿಕೆ ಕಂಡುಬಂದಿದೆ. 2022-23ರ ಹಣಕಾಸು ವರ್ಷದಲ್ಲಿ ಸುಮಾರು 91 ಸಾವಿರ ರೂಪಾಯಿಯ 500ರ ನಕಲಿ ನೋಟುಗಳು ಪತ್ತೆಯಾಗಿದ್ದು, ಇದು ಹಿಂದಿನ ವರ್ಷ 2021-22ಕ್ಕಿಂತ ಶೇ.14.6ರಷ್ಟು ಹೆಚ್ಚಾಗಿದೆ.

ಇನ್ನು 2020-21ನೇ ಹಣಕಾಸು ವರ್ಷದಲ್ಲಿ 39,453 ರೂಪಾಯಿ 500 ನಕಲಿ ನೋಟುಗಳು (Fake 500 Rupee Note) ಪತ್ತೆಯಾಗಿದ್ದರೆ, 2021-22ರಲ್ಲಿ ಈ ಸಂಖ್ಯೆ 76 ಸಾವಿರಕ್ಕೆ ಏರಿಕೆಯಾಗಿತ್ತು. ಹೀಗಾಗಿ ಹೆಚ್ಚುತ್ತಿರುವ ನಕಲಿ ನೋಟುಗಳ ಸಂಖ್ಯೆ ಆರ್‌ಬಿಐಗೆ ತೀವ್ರ ಆತಂಕದ ವಿಷಯವಾಗಿದೆ.

ಕಳವಳ ವ್ಯಕ್ತಪಡಿಸಿದ RBI:

ಭಾರತೀಯ ರಿಸರ್ವ್ ಬ್ಯಾಂಕ್ (RBI) ಇತ್ತೀಚೆಗೆ ತನ್ನ ವಾರ್ಷಿಕ ವರದಿಯಲ್ಲಿ ದೇಶದಲ್ಲಿ ಹೆಚ್ಚುತ್ತಿರುವ 500 ಮತ್ತು 2000 ರೂಪಾಯಿಗಳ ನಕಲಿ ನೋಟುಗಳ (Fake Notes) ಬಗ್ಗೆ ಕಳವಳಕಾರಿ ಮಾಹಿತಿಯನ್ನು ಹಂಚಿಕೊಂಡಿದೆ. ವರದಿಯ ಪ್ರಕಾರ, 2000 ರೂಪಾಯಿ ನೋಟುಗಳ (2000 Rupee Notes) ಅಮಾನ್ಯೀಕರಣದ ನಂತರ, ಈಗ 500 ರೂಪಾಯಿ ನೋಟುಗಳು (500 Rupee Notes) ದೊಡ್ಡ ಪ್ರಮಾಣದಲ್ಲಿ ವಂಚಕರ ಗುರಿಯಾಗಿದೆ.

advertisement

ನಕಲಿ ನೋಟುಗಳ ಸಂಖ್ಯೆ ಹೆಚ್ಚಳ:

 

 

2022-23ರ ಹಣಕಾಸು ವರ್ಷದಲ್ಲಿ ನಕಲಿ 500 ರೂಪಾಯಿ ನೋಟು (500 Rupee Note) ಗಳ ಸಂಖ್ಯೆಯಲ್ಲಿ ಭಾರಿ ಏರಿಕೆ ದಾಖಲಾಗಿದೆ. ಈ ವರ್ಷ ಸುಮಾರು 91 ಸಾವಿರ ರೂಪಾಯಿ ಮೌಲ್ಯದ ನಕಲಿ ನೋಟುಗಳು ಪತ್ತೆಯಾಗಿದ್ದು, ಕಳೆದ ವರ್ಷಕ್ಕಿಂತ ಶೇ.14.6ರಷ್ಟು ಹೆಚ್ಚು. ಇದಕ್ಕೆ ವ್ಯತಿರಿಕ್ತವಾಗಿ, ನಕಲಿ 2,000 ನೋಟುಗಳ ಸಂಖ್ಯೆಯಲ್ಲಿ 28% ಕುಸಿತ ಕಂಡುಬಂದಿದೆ, ಅದು 9,806 ನೋಟುಗಳಷ್ಟಿತ್ತು, 100, 50, 20 ಮತ್ತು 10 ರೂಪಾಯಿಯ ನಕಲಿ ನೋಟುಗಳು ಸಹ ಪತ್ತೆಯಾಗಿವೆ ಎಂದು ರಿಸರ್ವ್ ಬ್ಯಾಂಕ್ ವರದಿ ಹೇಳಿದೆ. ಅದರಲ್ಲೂ 20 ರೂಪಾಯಿಯ ನಕಲಿ ನೋಟುಗಳ ಸಂಖ್ಯೆ ಶೇ.8.4ರಷ್ಟು ಹೆಚ್ಚಾಗಿದೆ.

ನೋಟುಗಳನ್ನು ಮುದ್ರಿಸಲು ಆರ್‌ಬಿಐ ಖರ್ಚು ಮಾಡಿದ ಹಣವೇಷ್ಟು?

2022-23ರಲ್ಲಿ ನೋಟುಗಳನ್ನು ಮುದ್ರಿಸಲು RBI ಒಟ್ಟು 4,682.80 ಕೋಟಿ ರೂಪಾಯಿ ಖರ್ಚು ಮಾಡಿದೆ. ಇದು ಕಳೆದ ವರ್ಷಕ್ಕಿಂತ ಕಡಿಮೆಯಾಗಿದೆ. ಮಾರ್ಚ್ 31, 2023 ರಂತೆ, ದೇಶದ ಒಟ್ಟು ಕರೆನ್ಸಿ ಚಲಾವಣೆಯಲ್ಲಿ 500 ರೂಪಾಯಿ ನೋಟುಗಳ ಪಾಲು 37.9% ರಷ್ಟಿದ್ದರೆ, ರೂ 10 ನೋಟುಗಳ ಪಾಲು 19.2% ಆಗಿದೆ. ನಕಲಿ ನೋಟುಗಳನ್ನು ಗುರುತಿಸುವುದು ಮತ್ತು ಅವುಗಳನ್ನು ವ್ಯವಸ್ಥೆಯಿಂದ ತೆಗೆದುಹಾಕುವುದು ಆರ್‌ಬಿಐಗೆ ಪ್ರಮುಖ ಸವಾಲಾಗಿದೆ.

ಈ ಪರಿಸ್ಥಿತಿಯನ್ನು ನಿಭಾಯಿಸಲು ಆರ್‌ಬಿಐ ಮತ್ತು ಸಂಬಂಧಪಟ್ಟ ಅಧಿಕಾರಿಗಳು ನಿರಂತರ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇದರಿಂದ ನಕಲಿ ನೋಟುಗಳ ನುಸುಳುವಿಕೆಯನ್ನು ನಿಲ್ಲಿಸಬಹುದು ಮತ್ತು ನಾಗರಿಕರ ವಿಶ್ವಾಸವನ್ನು ಉಳಿಸಿಕೊಳ್ಳಬಹುದಾಗಿದೆ. ಇದರೊಂದಿಗೆ ಸಾರ್ವಜನಿಕರಿಗೂ ಎಚ್ಚರಿಕೆ ನೀಡಿ ನಕಲಿ ನೋಟುಗಳನ್ನು ಗುರುತಿಸುವಂತೆ ಜಾಗೃತಿ ಮೂಡಿಸಲಾಗುತ್ತಿದೆ.

advertisement

Leave A Reply

Your email address will not be published.