Karnataka Times
Trending Stories, Viral News, Gossips & Everything in Kannada

Railway Ticket: ಇನ್ಮುಂದೆ ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸಿ, ಗುಡ್ ನ್ಯೂಸ್ ನೀಡಿದ ರೈಲ್ವೆ ಇಲಾಖೆ!

advertisement

ವಿಶ್ವದಲ್ಲಿಯೇ ನಾಲ್ಕನೇ ಅತಿ ದೊಡ್ಡ ರೈಲು ಜಾಲವನ್ನು ಹೊಂದಿರುವ ದೇಶ ಭಾರತ. ನಮ್ಮಲ್ಲಿ ಪ್ರತಿದಿನ ಸುಮಾರು 1.2 ಕೋಟಿ ಜನ ರೈಲಿನಲ್ಲಿ ಪ್ರಯಾಣ ಮಾಡುತ್ತಾರೆ ಎಂದರೆ ಆಶ್ಚರ್ಯವಾಗಲೇಬೇಕು. ಪ್ರತಿದಿನ ಇಷ್ಟೊಂದು ಜನ ರೈಲಿನ ಮೂಲಕ ಪ್ರಯಾಣ ಬೆಳೆಸುತ್ತಾರೆ ಅಲ್ಲದೆ ಪ್ರತಿಯೊಬ್ಬರೂ ಟಿಕೆಟ್ (Railway Ticket) ತೆಗೆದುಕೊಂಡು ಪ್ರಯಾಣ ಬೆಳೆಸಲೇಬೇಕು ಎನ್ನುವುದು ಕಡ್ಡಾಯವಾಗಿರುವ ನಿಯಮ. ಈ ನಿಯಮದ ಹೊರತಾಗಿ ಈಗ ರೈಲ್ವೆ ಇಲಾಖೆಯ ಹೊಸ ನಿಯಮದ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು ಅದರಲ್ಲೂ ರೈಲಿನಲ್ಲಿ ಹೆಚ್ಚಾಗಿ ಪ್ರಯಾಣ ಮಾಡುವವರಾಗಿದ್ದರೆ ನಿಮಗೆ ಈ ನಿಯಮ ಅನ್ವಯವಾಗಬಹುದು.

ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸಿ!

ರೈಲಿನಲ್ಲಿ ಪ್ರಯಾಣಿಸುವಾಗ ಟಿಕೆಟ್ ಪಡೆದುಕೊಳ್ಳುವುದು ಕಡ್ಡಾಯ. ನೀವು ಎಷ್ಟೇ ದೂರದ ಪ್ರಯಾಣ ಮಾಡುವುದಿದ್ದರೂ ಕೂಡ ರೈಲ್ವೆ ಟಿಕೆಟ್ ನಿಮ್ಮ ಬಳಿ ಇರಬೇಕು. ರೈಲು ಹತ್ತಿದ ನಂತರ ಮಧ್ಯದಲ್ಲಿ ಟಿಸಿ ಟಿಕೆಟ್ ಕೇಳಿದಾಗ ತೋರಿಸಬೇಕು. ಆನ್ಲೈನ್ ಮೂಲಕ ರೈಲ್ವೆ ಟಿಕೆಟ್ ಬುಕ್ ಮಾಡಬಹುದು ಅಥವಾ ಆಫ್ಲೈನ್ ನಲ್ಲಿ ರೈಲ್ವೆ ನಿಲ್ದಾಣಗಳಲ್ಲಿಯೂ ಕೂಡ ಕೌಂಟರ್ ನಲ್ಲಿ ಟಿಕೆಟ್ ಬುಕ್ ಮಾಡಿಕೊಳ್ಳಲು ಅವಕಾಶವಿದೆ.

ಇಷ್ಟೆಲ್ಲಾ ಅವಕಾಶದ ನಡುವೆಯೂ ಕೂಡ ಕೆಲವೊಮ್ಮೆ ಟಿಕೆಟ್ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ರೈಲು ಹತ್ತುವುದು ಅನಿವಾರ್ಯವಾಗಿರುತ್ತದೆ. ಆದರೆ ಎಲ್ಲರಿಗೂ ಗೊತ್ತಿರುವ ಹಾಗೆ ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣ ಮಾಡುವುದು ಅಪರಾಧ ಒಂದು ವೇಳೆ ಸಿಕ್ಕಿ ಬಿದ್ದರೆ ಭಾರಿ ಪ್ರಮಾಣದ ದಂಡ ಹಾಗೂ ಶಿಕ್ಷೆ ಕೂಡ ವಿಧಿಸಬಹುದು. ಆದರೆ ರೈಲ್ವೆ ಇಲಾಖೆ  ಈಗ ಹೊಸ ನಿಯಮ ಜಾರಿಗೆ ತಂದಿದೆ. ರೈಲಿನಲ್ಲಿ ಟಿಕೆಟ್ ಇಲ್ಲದೆಯೂ ಕೂಡ ಪ್ರಯಾಣ ಮಾಡಬಹುದು ಎನ್ನುವ ನಿಯಮ ಜಾರಿಗೆ ಬಂದಿದೆ.

advertisement

ಹೌದು, ರೈಲಿನಲ್ಲಿ ನೀವು ಪ್ರಯಾಣಿಸುವುದಾದರೆ ಟಿಕೆಟ್ ಇಲ್ಲದೆಯೂ ಕೂಡ ಪ್ರಯಾಣಿಸಬಹುದು. ಅನಿವಾರ್ಯ ಕಾರಣಗಳಿಗೆ ಟಿಕೆಟ್ ಇಲ್ಲದೆ ರೈಲು ಹತ್ತಿಕೊಂಡರೆ ನಂತರ ರೈಲಿನಲ್ಲಿ TTE ಯನ್ನು ಸಂಪರ್ಕಿಸಿ ತಕ್ಷಣ ಟಿಕೆಟ್ ಪಡೆದುಕೊಳ್ಳಬೇಕು. ನೀವು ಸರಿಯಾದ ಕಾರಣ ನೀಡಿದಾಗ ಮಾತ್ರ ನಿಮಗೆ ಟಿಕೆಟ್ ನೀಡಲಾಗುತ್ತದೆ ಇಲ್ಲವಾದರೆ 250ರೂ.ಗಳ ದಂಡ ಪಾವತಿಸಬೇಕು ಬಳಿಕ ಟಿಕೆಟ್ ವಿತರಣೆ ಮಾಡಲಾಗುತ್ತದೆ.

TTE ಬಳಿ ಹ್ಯಾಂಡ್ ಓಲ್ಡ್ ಮಷೀನ್ ಇದ್ದು ನೀವು ಈ ಮಷೀನ್ ಸಹಾಯದಿಂದ ಟಿಕೆಟ್ ಪಡೆಯಬಹುದಾಗಿದೆ. ಇಲ್ಲಿ ನಿಮ್ಮ ಹೆಸರು ಹಾಗೂ ಯಾವ ಪ್ರದೇಶಕ್ಕೆ ಪ್ರಯಾಣ ಬೆಳೆಸುತ್ತೀರಿ ಎಂಬುದನ್ನು ನಮೂದಿಸಲಾಗುತ್ತದೆ. ಟಿಕೆಟ್ ದರ ಎಷ್ಟಿದೆಯೋ ಅಷ್ಟನ್ನ ಪಾವತಿ ಮಾಡಬೇಕು. ಆದಾಗ್ಯೂ ನೀವು ರೈಲು ಹತ್ತುವುದಕ್ಕೂ ಮೊದಲು ಟಿಕೆಟ್ ಖರೀದಿ ಮಾಡದೆ ಇದ್ದರೆ 250ರೂ.ಗಳ ದಂಡ ಪಾವತಿಸಬೇಕಾಗುತ್ತದೆ.

ಖಾಲಿ ಇರುವ ಸೀಟ್ ಪಡೆದುಕೊಳ್ಳಿ!

ಎಷ್ಟೋ ಬಾರಿ ಟಿಕೆಟ್ ಖರೀದಿ ಮಾಡಿದರೂ ನಂತರ ಸೀಟ್ ಆಲೌಟ್ ಆಗಿರುವುದಿಲ್ಲ. ಅಂತಹ ಸಂದರ್ಭದಲ್ಲಿ ನೀವು ಟಿಕೆಟ್ ಪಡೆದು ರೈಲು ಹತ್ತಿದ ನಂತರ TTE ಬಳಿ ಖಾಲಿ ಇರುವ ಸೀಟ್ ನೀಡುವಂತೆ ಕೇಳಿಕೊಳ್ಳಬಹುದು ಯಾವುದಾದರೂ ಒಬ್ಬ ಪ್ರಯಾಣಿಕರು ಬಾರದೆ ಇದ್ದಾಗ ಅಥವಾ ಸೀಟ್ ಖಾಲಿ ಇದ್ದಾಗ ಆ ಬರ್ತ್ ನ್ನೂ ನಿಮಗೆ ನೀಡಲಾಗುತ್ತದೆ.

ಮೊಬೈಲ್ ನಲ್ಲಿ ಟಿಕೆಟ್ ಬುಕ್ ಮಾಡಿ!

ಭಾರತೀಯ ರೈಲ್ವೆ ಇಲಾಖೆಯ ಟಿಕೆಟ್ ಆಪ್ಲಿಕೇಶನ್ UTS ನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್ ಲೋಡ್ ಮಾಡಿಕೊಂಡು ಲಾಗಿನ್ ಆಗಿ ನಂತರ ಟಿಕೆಟ್ ಬುಕ್ಕಿಂಗ್ ಮಾಡಿಕೊಳ್ಳಬಹುದು. ಅಪ್ಲಿಕೇಶನ್ ಮೂಲಕ ಪ್ರಯಾಣದ ಟಿಕೆಟ್ ಹಾಗೂ ಪ್ಲಾಟ್ ಫಾರ್ಮ್ ಟಿಕೆಟ್ ಅನ್ನು ಪಡೆದುಕೊಳ್ಳಬಹುದು. ಮುಂದಿನ ಬಾರಿ ಅನಿವಾರ್ಯ ಸಂದರ್ಭದಲ್ಲಿ ಟಿಕೆಟ್ ಇಲ್ಲದೆ ಪ್ರಯಾಣ ಮಾಡುವ ಪರಿಸ್ಥಿತಿ ಎದುರಾದರೆ ರೈಲು ಹತ್ತಿದ ನಂತರ TTE ಅಧಿಕಾರಿ ಸಂಪರ್ಕಿಸುವುದನ್ನ ಮರೆಯಬೇಡಿ.

advertisement

Leave A Reply

Your email address will not be published.