Karnataka Times
Trending Stories, Viral News, Gossips & Everything in Kannada

Car Price: ಕಾರು ಖರೀದಿಸುವವರಿಗೆ ಕಹಿಸುದ್ದಿ, ಮುಂದಿನ ತಿಂಗಳಿಂದ ಈ ಕಂಪನಿಗಳ ಕಾರಿನ ಬೆಲೆಯಲ್ಲಿ ಭಾರಿ ಏರಿಕೆ.

advertisement

ಇಂದು ಪ್ರತಿಯೊಬ್ಬರಿಗೂ ವಾಹನದ ಅವಶ್ಯಕತೆ ಇದ್ದೆ ಇದೆ. ಯಾಕಂದ್ರೆ ವಾಹನ ಕೂಡ ಪ್ರತಿಯೊಬ್ಬರ ಮೂಲಭೂತ ವಸ್ತುವಾಗಿ ಬಿಟ್ಟಿದೆ, ಅದರಲ್ಲೂ ಇಂದು ಹೆಚ್ಚಿನ ಜನರಿಗೆ ಕಾರಿನ ಮೇಲೆ ಕ್ರೇಜ್ ಇದ್ದೆ ಇರುತ್ತದೆ. ತಮ್ಮ‌ ಇಷ್ಟದ ಕಾರು ಖರೀದಿಸಬೇಕು, ಟ್ರಿಪ್ (Trip) ಹೋಗಬೇಕು ಇತ್ಯಾದಿ ಕನಸು ಇದ್ದೆ ಇರುತ್ತದೆ, ಅದರೆ ಇಂದು ಅಷ್ಟೆ ಪ್ರಮಾಣದ ಹಣ ಇದ್ದರೆ ಮಾತ್ರ ತಾವು ಅಂದುಕೊಂಡತಂಹ ಪ್ರತಿಷ್ಠಿತ ಕಂಪನಿಗಳ ಕಾರು ಖರೀದಿಸಲು ಸಾಧ್ಯ. ‌

ಬೆಲೆ ಹೆಚ್ಚಳ:

2023 ರ ವರ್ಷವು ಇನ್ನೇನು ಕೊನೆಗೊಳ್ಳಲಿದ್ದು ಹೊಸ ವರ್ಷ ಬರಲಿದೆ. ಆದರೆ 2024 ರಲ್ಲಿ ಕೆಲವು ಕಂಪನಿಗಳ ಕಾರಿನ‌ ಬೆಲೆ ಹೆಚ್ಚಾಗಲಿದೆ. ಅದರಲ್ಲಿ ಮುಖ್ಯವಾಗಿ ಮಾರುತಿ (Maruti Suzuki), ಹ್ಯುಂಡೈ (Hyundai) ಮತ್ತು ಟಾಟಾ (Tata) ಸೇರಿದಂತೆ ಹಲವಾರು ಕಾರು ಬ್ರಾಂಡ್‌ಗಳು ತಮ್ಮ ವಿವಿಧ ಮಾಡೆಲ್‌ ನ ಕಾರುಗಳ ಬೆಲೆ (Car Price) ಹೆಚ್ಚು ಮಾಡಲಿದೆ.

ಈ ಕಾರುಗಳ ಬೆಲೆ ಹೆಚ್ಚಳ:

ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚಗಳು, ಹೆಚ್ಚುತ್ತಿರುವ ಸರಕುಗಳ ಬೆಲೆಗಳಿಂದಾಗಿ ಜನವರಿ 2024 ರಿಂದ ಬೆಲೆ ಹೆಚ್ಚಿಸುವುದಾಗಿ ಹುಂಡೈ (Hyundai) ಕಂಪನಿ ದೃಢಪಡಿಸಿದೆ.

ಅದೇ ರೀತಿ ಟಾಟಾ ಮೋಟಾರ್ಸ್ (Tat Motors) ತನ್ನ ಎಲ್ಲಾ ICE ಮತ್ತು EV ಎಲೆಕ್ಟ್ರಿಕ್ ವಾಹನ ಸೇರಿದಂತೆ ವಿವಿಧ ಮಾದರಿಗಳ ಕಾರಿನ ಬೆಲೆ (Car Price) ಗಳನ್ನು ಜನವರಿ 2024 ರಿಂದ ಹೆಚ್ಚಿಸುವ ನಿರ್ಧಾರವನ್ನು ತಿಳಿಸಿದೆ. ಟಾಟಾ ಟಿಯಾಗೊ ಇವಿ (Tata Tiago EV), ಟಾಟಾ ಟಿಗೊರ್ ಇವಿ (Tata Tigor EV) ಮತ್ತು ಟಾಟಾ ನೆಕ್ಸಾನ್ ಇವಿ (Tata Nexon EV) ಇತ್ಯಾದಿಗಳ ಬೆಲೆ ಏರಿಕೆ ಮಾಡಬಹುದು.

 

advertisement

 

ಇತ್ತೀಚಿಗೆ ಬಿಡುಗಡೆಯಾದ ಹೋಂಡಾ ಎಲಿವೇಟ್ (Honda Elevate) ಸೇರಿದಂತೆ ಹೋಂಡಾ ಕೂಡ ತನ್ನ ವಿವಿಧ ಮಾಡೆಲ್ ನ ಬೆಲೆಯನ್ನು ಹೆಚ್ಚಿಸಲಿದೆ. ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚಗಳು, ಬಳಕೆಯ ವಸ್ತುಗಳೆ ಹೆಚ್ಚಳಕ್ಕೆ ಕಾರಣ ಎಂದು ಹೋಂಡಾ ಕಂಪನಿ ಮಾಹಿತಿ ನೀಡಿದೆ.

 

 

ಐಷಾರಾಮಿ ವಾಹನ ತಯಾರಕ Audi ತನ್ನ ಕಾರುಗಳ ಬೆಲೆಯನ್ನು ಹೆಚ್ಚು ಮಾಡಲಿದ್ದು ಕಾರು ಪ್ರೀಯರಿಗೆ ಇದು ಬೇಸರದ ಸಂಗತಿ ಯಾಗಿದೆ. ಭಾರತದಲ್ಲಿ, ಆಡಿ ಒಟ್ಟು 15 ಮಾದರಿಗಳನ್ನು ಮಾರಾಟ ಮಾಡುತ್ತಿದ್ದು ಹೆಚ್ಚು ಕ್ರೇಜ್ ಹುಟ್ಟಿಸಿರುವ ಕಾರುಗಳಾಗಿದೆ.

ಇವುಗಳ ಬೆಲೆ ಏರಿಕೆ ಇಲ್ಲ:

ಇನ್ನು ಕೆಲವೊಂದಿಷ್ಟು ಕಂಪನಿ ಗಳು ಬೆಲೆ ಏರಿಕೆ ಬಗ್ಗೆ ಮಾಹಿತಿ ನೀಡಿದ್ದು ರೆನಾಲ್ಟ್ (Renault), ನಿಸ್ಸಾನ್ (Nissan), ಕಿಯಾ (KIA) ಮತ್ತು ಜೀಪ್‌ (Jeep) ನಂತಹ ಇತರ ವಾಹನ ತಯಾರಕರು ಬೆಲೆ ಹೆಚ್ಚು ಮಾಡುವ ಬಗ್ಗೆ ಮಾಹಿತಿ ನೀಡಿಲ್ಲ, ಆದರೆ ಮುಂದಿನ‌ ದಿನದಲ್ಲಿ‌ ಈ ಕಂಪನಿಯ ವಾಹನಗಳಲ್ಲಿಯು ಬೆಲೆ (Car Price) ಏರಿಕೆ ಬಿಸಿ ತಟ್ಟಬಹುದು.

advertisement

Leave A Reply

Your email address will not be published.