RBI: ಬ್ಯಾಂಕ್ ಖಾತೆಗಳಿಗೆ ಸಂಬಂಧ ಪಟ್ಟಂತೆ ಆರ್ ಬಿಐ ನಿಂದ ಬಂತು ಹೊಸ ರೂಲ್ಸ್!
ಉಳಿತಾಯ ಎನ್ನುವುದು ತಮ್ಮ ಮುಂದಿನ ಭವಿಷ್ಯಕ್ಕೆ ಅಗತ್ಯ. ತಮ್ಮ ಉಳಿತಾಯದ ಹಣವನ್ನು ಜೋಪಾನವಾಗಿ ಇಡಬೇಕಾದರೆ ಬ್ಯಾಂಕ್ ಖಾತೆಗಳು (Bank Accounts) ಬೇಕೇ ಬೇಕು. ಹೀಗಾಗಿ ಇತ್ತೀಚೆಗಿನ ದಿನಗಳಲ್ಲಿ ಎಲ್ಲರೂ ಉಳಿತಾಯದ ಉದ್ದೇಶದಿಂದ ಒಂದಾದರೂ ಬ್ಯಾಂಕ್ ಖಾತೆ (Bank Account) ಯನ್ನು ಹೊಂದಿರುತ್ತಾರೆ. ಆದರೆ ಕೆಲವೊಮ್ಮೆ ಕೆಲವರ ಬಳಿ ಎರಡಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳು ಇರುತ್ತವೆ.
ಇದೀಗ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank Of India) ವು ಬ್ಯಾಂಕ್ ಖಾತೆಗೆ ಸಂಬಂಧ ಪಟ್ಟಂತೆ ಎಚ್ಚರಿಕೆಯನ್ನು ನೀಡಿದ್ದು, ಒಬ್ಬ ವ್ಯಕ್ತಿಯೂ ತಮ್ಮ ಹೆಸರಿನಲ್ಲಿ ಎಷ್ಟು ಬ್ಯಾಂಕ್ ಖಾತೆ ಗಳನ್ನು ಹೊಂದಿರಬಹುದು ಎನ್ನುವುದನ್ನು ಸ್ಪಷ್ಟವಾಗಿ ತಿಳಿಸಿದೆ. ಹಾಗಾದ್ರೆ ಆ ಕುರಿತಾದ ಸಂಪೂರ್ಣ ಮಾಹಿತಿಗೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ ತಿಳಿದುಕೊಳ್ಳಿ.
ಒಬ್ಬ ವ್ಯಕ್ತಿ ಎಷ್ಟು ಬ್ಯಾಂಕ್ ಖಾತೆ (Bank Account) ಗಳನ್ನು ಹೊಂದಬಹುದು?
ಬ್ಯಾಂಕ್ ಖಾತೆಗಳನ್ನು ತೆರೆಯುವಾಗ ತಾವು ತೆರೆಯುವ ಖಾತೆಯೂ ಎಷ್ಟು ಅಗತ್ಯ ಎನ್ನುವುದನ್ನು ಗಮನಿಸಬೇಕು. ಸಾಮಾನ್ಯವಾಗಿ ಗ್ರಾಹಕರು ಚಾಲ್ತಿ ಖಾತೆ (Current Account), ಸಂಬಳ ಖಾತೆ (Salary Account), ಜಂಟಿ ಖಾತೆ (Joint Account) ಅಥವಾ ಉಳಿತಾಯ ಖಾತೆ (Savings Account) ಯನ್ನು ಹೊಂದಿರುತ್ತಾರೆ. ಆದರೆ ಹೀಗಾಗಿ ಆರ್ ಬಿಐ (RBI) ನ ಹೊಸ ನಿಯಮದಲ್ಲಿ ಒಬ್ಬ ವ್ಯಕ್ತಿಯೂ ಇಷ್ಟೇ ಖಾತೆಗಳನ್ನು ತೆರೆಯಬೇಕು ಎನ್ನುವ ಮಿತಿಯನ್ನು ಹಾಕಿಲ್ಲ. ಹೀಗಾಗಿ ಒಬ್ಬ ವ್ಯಕ್ತಿಯೂ ತಮ್ಮ ಅಗತ್ಯತೆ ಅನುಗುಣವಾಗಿ ಎಷ್ಟು ಬೇಕಾದರೂ ಖಾತೆಗಳನ್ನು ತೆರೆಯಬಹುದು. ಆದರೆ ಒಬ್ಬ ವ್ಯಕ್ತಿಯೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ತೆರೆದರೆ, ಆ ಖಾತೆಗಳನ್ನು ಸರಿಯಾಗಿ ನಿರ್ವಹಿಸಬೇಕಾಗುತ್ತದೆ. ಹೀಗಾಗಿ ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ಅಗತ್ಯತೆಗೆ ಅನುಗುಣವಾಗಿ ಖಾತೆಯನ್ನು ತೆರೆಯುವುದು ಸೂಕ್ತವಾಗಿದೆ.