Karnataka Times
Trending Stories, Viral News, Gossips & Everything in Kannada

Cash Limit: ಇನ್ನು ಮುಂದೆ ಇದಕ್ಕಿಂತ ಹೆಚ್ಚು ನಗದು ಹಣ ಮನೆಯಲ್ಲಿ ಪತ್ತೆಯಾದರೆ 137% ದಂಡ ಪಾವತಿಸಬೇಕು!

advertisement

ಇನ್ನೇನು 2023 ಮುಗಿದು 2024 ಹೊಸ ಹಣಕಾಸಿನ ವರ್ಷ ಆರಂಭವಾಗಲಿದೆ. ಹೊಸ ಹಣಕಾಸಿನ ವರ್ಷ ಅಂದ್ರೆ ಟ್ಯಾಕ್ಸ್ ಪಾವತಿ ಮಾಡುವುದು ಬಹಳ ದೊಡ್ಡ ಕೆಲಸವಾಗಿದೆ. ಸಾಕಷ್ಟು ಜನ ತಾವು ದುಡಿದ ಹಣಕ್ಕೆ ಸರಿಯಾಗಿ ಟ್ಯಾಕ್ಸ್ ಪಾವತಿ ಮಾಡುವುದಿಲ್ಲ. ಇದನ್ನು ಗಮನದಲ್ಲಿ ಇಟ್ಟುಕೊಂಡು ಸರ್ಕಾರ ಕೆಲವು ಪ್ರಮುಖ ನಿಯಮಗಳನ್ನು ಜಾರಿಗೆ ತಂದಿದೆ.

ಕಪ್ಪು ಹಣ ತಡೆಗಟ್ಟುವ ಸಲುವಾಗಿ ಈಗಾಗಲೇ ಎರಡು ಬಾರಿ ನೋಟ್ ಬ್ಯಾನ್ ಕೂಡ ಮಾಡಲಾಗಿದೆ. ಆದರೂ ಒಂದಷ್ಟು ಕಪ್ಪು ಹಣ ಕೆಲವರ ಮನೆಯಲ್ಲಿ ಸಂಗ್ರಹ ಆಗ್ತಾ ಇರೋದು ಸರ್ಕಾರದ ಗಮನಕ್ಕೆ ಬಂದಂತಿದೆ. ಇದೆ ಕಾರಣಕ್ಕೆ ನೀವು ಎಷ್ಟು ಕ್ಯಾಶ್ ಅನ್ನು ಮನೆಯಲ್ಲಿ ಹೊಂದಿರಬಹುದು ಎನ್ನುವ ಮಿತಿ ವಿಧಿಸಲಾಗಿದ್ದು ಅದಕ್ಕಿಂತ ಹೆಚ್ಚಿಗೆ ಹಣ ಇಟ್ಟುಕೊಂಡಿದ್ದರೆ ಆದಾಯ ತೆರಿಗೆ (Income Tax)  ದಂಡ ವಿಧಿಸಬಹುದು ಅಥವಾ ನಿಮ್ಮ ಬಳಿ ಇರುವ ಹಣಕ್ಕೆ ನೀವು ಸರಿಯಾದ ದಾಖಲೆ ನೀಡಿದರೆ ಯಾವುದೇ ಶಿಕ್ಷೆಗೆ ಗುರಿಯಾಗಬೇಕಿಲ್ಲ.

ಆದಾಯ ತೆರಿಗೆ ನಿಯಮಗಳು!

ಇಂದು ನಾವು ಬಹುತೇಕ ಎಲ್ಲಾ ಹಣಕಾಸಿನ ವಹಿವಾಟನ್ನು ಡಿಜಿಟಲ್ ವಹಿವಾಟಿಗೆ ಕನ್ವರ್ಟ್ ಮಾಡಿಕೊಂಡಿದ್ದೇವೆ. ಅಂದರೆ ಕೆಲವರ ಮನೆಯಲ್ಲಿ ನಿಯಮಕ್ಕಿಂತ ಹೆಚ್ಚಿಗೆ ನಗದು ಇಟ್ಟುಕೊಂಡಿದ್ದರೆ ಅಂತವರು ಆದಾಯ ತೆರಿಗೆ ಕಾಯ್ದೆ ಅಡಿಯಲ್ಲಿ ದಂಡ ಪಾವತಿಸಬೇಕಾಗುತ್ತದೆ. ಹಾಗಾದ್ರೆ ನೀವು ಮನೆಯಲ್ಲಿ ಎಷ್ಟು ಹಣ ಇಟ್ಟುಕೊಳ್ಳಬಹುದು ಗೊತ್ತಾ?

ಮನೆಯಲ್ಲಿ ಹಣ ಇಟ್ಟುಕೊಳ್ಳುವುದಕ್ಕೆ ತೆರಿಗೆ ಮಿತಿ ಇದೆಯೇ?

advertisement

ಆದಾಯ ತೆರಿಗೆ ಕಾನೂನಿನ ಪ್ರಕಾರ ಮನೆಯಲ್ಲಿ ಎಷ್ಟು ಹಣ ಇಟ್ಟುಕೊಳ್ಳಬಹುದು ಎನ್ನುವುದಕ್ಕೆ ಯಾವುದೇ ಮಿತಿಯನ್ನು ವಿಧಿಸಿಲ್ಲ. ನೀವು ಮನೆಯಲ್ಲಿ ಬೇಕಾದಷ್ಟು ಹಣವನ್ನು ಇಟ್ಟುಕೊಳ್ಳಬಹುದು. ಹಣ ಇಟ್ಟುಕೊಳ್ಳುವುದು ಕಾನೂನುಬಾಹಿರ ಚಟುವಟಿಕೆ ಅಲ್ಲ. ಆದರೆ ಇದರಲ್ಲಿ ಒಂದು ಶರತ್ತು ಕೂಡ ಇದೆ. ನೀವು ನಿಮ್ಮ ಮನೆಯಲ್ಲಿ ನಗದು ಎಷ್ಟು ಬೇಕಾದರೂ ಇಟ್ಟುಕೊಳ್ಳಬಹುದು ಆದರೆ ಪ್ರತಿಯೊಂದು ರೂಪಾಯಿಗಳಿಗೂ ಕೂಡ ಸರಿಯಾದ ಲೆಕ್ಕ ಇರಬೇಕು. ಒಂದು ವೇಳೆ ನಿಮ್ಮ ಸ್ಥಳದ ಮೇಲೆ ಐಟಿ ದಾಳಿ ನಡೆದರೂ ಕೂಡ ನಿಮ್ಮ ಬಳಿ ಇರುವ ಹಣಕ್ಕೆ ಮೂಲ ದಾಖಲೆಗಳನ್ನು ಒದಗಿಸಬೇಕು. ಇಲ್ಲವಾದರೆ ಆ ಹಣವನ್ನು ಕಪ್ಪು ಹಣ ಎಂದು ಪರಿಗಣಿಸಲಾಗುತ್ತದೆ. ಈ ಹಣ ಎಲ್ಲಿಂದ ಬಂತು? ಇಷ್ಟೊಂದು ಹಣ ಯಾರು ಕೊಟ್ರು ಎನ್ನುವುದಕ್ಕೆ ಆದಾಯ ತೆರಿಗೆ ಸಮಂಜಸವಾದ ಉತ್ತರ ನೀವು ಕೊಡದೆ ಇದ್ದಾಗ ಅಧಿಕ ದಂಡವನ್ನು ಕೂಡ ಪಾವತಿಸಬೇಕಾಗುತ್ತದೆ.

ಆದಾಯ ತೆರಿಗೆ ದಂಡ ವಿಧಿಸಬಹುದು!

ನಗದು ವಹಿವಾಟಿಗೆ ಸಂಬಂಧಪಟ್ಟ ಹಾಗೆ ಕೆಲವು ಪ್ರಮುಖ ನಿಯಮಗಳು ಇವೆ. ಉದಾಹರಣೆಗೆ ಕೆಲವು ಉದ್ಯಮಿಗಳು ವ್ಯವಹಾರ ನಡೆಸಿದ ನಂತರ ದೊಡ್ಡ ಮೊತ್ತದ ಹಣವನ್ನು ಮನೆಗೆ ತೆಗೆದುಕೊಂಡು ಬರಬಹುದು. ಅದನ್ನ ಮರುದಿನ ಬ್ಯಾಂಕಿಗೆ ಡೆಪಾಸಿಟ್ ಇಡುತ್ತಾರೆ ಎಂದು ಭಾವಿಸಿ. ಆದರೆ ಇದೇ ದಿನ ನಿಮ್ಮ ಮನೆಯ ಮೇಲೆ ಐಟಿ ರೈಡ್ ಆದ್ರೆ ಅಷ್ಟು ಹಣ ಆದಾಯ ತೆರಿಗೆ ಇಲಾಖೆಗೆ ಸಿಗುತ್ತದೆ. ಆಗ ನೀವು ಸರಿಯಾದ ದಾಖಲೆ ಕೊಡಬೇಕು. ಇಲ್ಲವಾದರೆ ಅಷ್ಟು ಹಣವನ್ನು ಆದಾಯ ತೆರಿಗೆ ಇಲಾಖೆ ಮುಟ್ಟುಗೋಲು ಹಾಕಿಕೊಳ್ಳುತ್ತದೆ ಜೊತೆಗೆ ಶೇಕಡಾ 137 ರಷ್ಟು ದಂಡವನ್ನು ಪಾವತಿಸಬೇಕಾಗುತ್ತದೆ.

ಎಷ್ಟು ನಗದು ವ್ಯವಹಾರ ಮಾಡಬಹುದು?

  • ಒಂದು ಹಣಕಾಸು ವರ್ಷದಲ್ಲಿ ಅಂದ್ರೆ ಏಪ್ರಿಲ್ ನಿಂದ ಮಾರ್ಚ್ ತಿಂಗಳುಗಳವರೆಗೆ 20 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ನಗದು ವಹಿವಾಟು ನಡೆಸಿದರೆ ಅದಕ್ಕೆ ಸರಿಯಾದ ದಾಖಲೆ ಇರಬೇಕು ಇಲ್ಲವಾದರೆ ದಂಡ ಪಾವತಿಸಬೇಕು.
  • 20 ಲಕ್ಷಕ್ಕಿಂತ ಹೆಚ್ಚು ಠೇವಣಿಯನ್ನು ಒಂದು ವರ್ಷದಲ್ಲಿ ಇಟ್ಟರೆ ಪಾನ್ ಕಾರ್ಡ್ ಹಾಗೂ ಆಧಾರ್ ಮಾಹಿತಿಯನ್ನು ಕೊಡಲೇಬೇಕು ಹಾಗೂ ಆ ಹಣದ ಮೂಲವನ್ನು ತಿಳಿಸಬೇಕು 20 ಲಕ್ಷಕ್ಕಿಂತ ಹೆಚ್ಚಿನ ಹಣ ದಂಡವಾಗಿ ಪಾವತಿಸಬೇಕಾಗಬಹುದು.
  • ಪ್ಯಾನ್ ಸಂಖ್ಯೆ ಇಲ್ಲದೆ ಒಂದು ಸಲಕ್ಕೆ 50,000ರೂ.ಗಳಿಗಿಂತ ಹೆಚ್ಚಿನ ಠೇವಣಿಯನ್ನು ನಿಮ್ಮ ಖಾತೆಯಲ್ಲಿ ಇಡುವಂತಿಲ್ಲ.
  • ಎರಡು ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಮೌಲ್ಯದ ವಸ್ತು ಖರೀದಿ ಮಾಡುವುದಾದರೆ ನಗದು ರೂಪದಲ್ಲಿ ಮಾಡುವಂತಿಲ್ಲ.
  • ಒಂದು ವೇಳೆ ಎರಡು ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಹಣವನ್ನು ನಗದು ರೂಪದಲ್ಲಿ ಪಡೆದುಕೊಳ್ಳುವುದಿದ್ದರೆ ಪಾನ್ ಕಾರ್ಡ್ (Pan Card) ಹಾಗೂ ಆಧಾರ್ ಕಾರ್ಡ್ (Aadhar Card) ನ ಪ್ರತಿ ಒದಗಿಸಬೇಕಾಗುತ್ತದೆ.
  • ಅದೇ ರೀತಿ ಒಂದು ದಿನದಲ್ಲಿ ಯಾರಿಂದಲೂ ಕೂಡ ಎರಡು ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಪಡೆದುಕೊಳ್ಳುವಂತಿಲ್ಲ ಇದಕ್ಕಾಗಿ ನೀವು ಬ್ಯಾಂಕ್ ಮೂಲಕ ವಹಿವಾಟು ನಡೆಸಬಹುದೇ ಹೊರತು ಕ್ಯಾಶ್ ವ್ಯವಹಾರ ಮಾಡುವಂತಿಲ್ಲ. ಇದಿಷ್ಟು ತೆರಿಗೆ ಇಲಾಖೆಯ ಹೊಸ ನಿಯಮಗಳಾಗಿದ್ದು ಒಂದು ವೇಳೆ ಈ ನಿಯಮಗಳನ್ನ ಉಲ್ಲಂಘಿಸಿದರೆ ಲೆಕ್ಕವಿಲ್ಲದ ಹಣಕ್ಕೆ ಲೆಕ್ಕವಿಲ್ಲದಷ್ಟು ದಂಡ ಪಾವತಿಸಬೇಕಾಗುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳಿ.

advertisement

Leave A Reply

Your email address will not be published.