Karnataka Times
Trending Stories, Viral News, Gossips & Everything in Kannada

Gruha Lakshmi Yojana: ಒತ್ತಾಯದ ಮೇರೆಗೆ ಗೃಹಲಕ್ಷ್ಮಿ ಯೋಜನೆಯಲ್ಲಿ ದೊಡ್ಡ ಬದಲಾವಣೆ ಮಾಡಿದ ಸರ್ಕಾರ! ಅಧಿಕೃತ ಆದೇಶ

advertisement

ರಾಜ್ಯದ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆ (Gruha Lakshmi Yojana) ಯಿಂದ ಮಾಸಿಕ ಎರಡು ಸಾವಿರ ರೂಪಾಯಿ ಮೊತ್ತ ಬರುವುದು ನಮಗೆಲ್ಲ ತಿಳಿದೆ ಇದೆ. ಕಾಂಗ್ರೆಸ್ ಸರಕಾರದ ಪಂಚ ಯೋಜನೆಯಲ್ಲಿ ಒಂದಾದ ಗೃಹಲಕ್ಷ್ಮೀ ಹಣದ ಮೂಲಕ ಅನೇಕ ಮಹಿಳೆಯರು ಮಾಸಿಕವಾಗಿ ಸರಕಾರದ ಆರ್ಥಿಕ ನೆರವು ಪಡೆದು ಕುಟುಂಬ ಸಾಗಿಸುತ್ತಿದ್ದಾರೆ. ತಮ್ಮ ಕೆಲವು ಬೇಡಿಕೆಯನ್ನು ಕೂಡ ಇದೇ ಹಣದಿಂದ ಪೂರೈಸಿಕೊಳ್ಳುತ್ತಿದ್ದು ಸದ್ಯ ಈ ಗೃಹಲಕ್ಷ್ಮೀ ಹಣ (Gruha Lakshmi Money) ಕ್ಕೆ ಸಂಬಂಧ ಪಟ್ಟಂತೆ ಬಿಗ್ ಅಪ್ಡೇಟ್ ಮಾಹಿತಿಯೊಂದು ಹೊರ ಬಿದ್ದಿದೆ.

WhatsApp Join Now
Telegram Join Now

ಮನವಿಗೆ ಸ್ಪಂದನೆ:

ಗೃಹಲಕ್ಷ್ಮೀ ಯೋಜನೆ (Gruha Lakshmi Yojana) ಯಿಂದ ರಾಜ್ಯದ ಮಹಿಳೆಯರಿಗೆ ಮಾಸಿಕ 2000 ಮೊತ್ತ ಸಿಗುತ್ತಿದೆ. ಇದು ಆರ್ಥಿಕ ನೆರವು ಆಗಿರುವ ಕಾರಣ ತೃತೀಯ ಲಿಂಗಿಗಳಿಗೂ ಗೃಹಲಕ್ಷ್ಮೀ ಹಣ ನೀಡಬೇಕು ಎಂದು ಸರಕಾರಕ್ಕೆ ರಾಜ್ಯದ ವಿವಿಧ ಭಾಗದಿಂದ ಮನವಿ ಬಂದಿದ್ದು ಇದೀಗ ಸರಕಾರ ಗೃಹಲಕ್ಷ್ಮೀ ಯೋಜನೆ ಅಡಿಯಲ್ಲಿ ತೃತೀಯ ಲಿಂಗಿಗಳಿಗೂ ಅವಕಾಶ ಒದಗಿಸಲು ನಿರ್ಧಾರ ಕೈಗೊಂಡಿದೆ. ಈ ಬಗ್ಗೆ ಕೆಲವು ಆಸಕ್ತಿದಾಯಕ ಮಾಹಿತಿ ಎಲ್ಲ ಕಡೆ ವೈರಲ್ ಆಗುತ್ತಿದ್ದು ನೀವು ಈ ಬಗ್ಗೆ ತಿಳಿಯಲು ಪೂರ್ತಿ ಮಾಹಿತಿ ಓದಿ.

ಆದೇಶ:

 

Image source: Hindustan Times

 

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಸರಕಾರವು ತೃತೀಯ ಲಿಂಗಿಗಳು ಗೃಹಲಕ್ಷ್ಮೀ ಯೋಜನೆ (Gruha Lakshmi Yojana) ಗೆ ಅರ್ಜಿ ಸಲ್ಲಿಸಬಹುದು ಎಂದು ಆದೇಶ ನೀಡಿದ್ದು. ಅರ್ಜಿ ಸಲ್ಲಿಕೆ ಇನ್ನು ಕೂಡ ಪ್ರಕ್ರಿಯೆಯಾಗುತ್ತಿದೆ. ಅರ್ಜಿ ಸಲ್ಲಿಕೆಗೆ ಸಂಬಂದ ಪಟ್ಟಂತೆ ಎಲ್ಲ ಜಿಲ್ಲೆಗಳಿಗೂ ಈ ಆದೇಶ ನೀಡಿದ್ದು ಈ ತಿಂಗಳ ಅಂದರೆ ಜೂನ್ ಅಂತ್ಯದ ಒಳಗೆ ಅರ್ಜಿ ಸಲ್ಲಿಸಿದರೆ ಜುಲೈ ನಿಂದಲೇ ತೃತೀಯ ಲಿಂಗಿಗಳಿಗೆ ಅರ್ಜಿಯ ಅರ್ಹತೆ ಅನ್ವಯ ಹಣ ಮಂಜೂರಾಗಲಿದೆ.

advertisement

ಈ ಪತ್ರ ಕಡ್ಡಾಯ:

ತೃತೀಯ ಲಿಂಗಿಗಳು ಕಡ್ಡಾಯವಾಗಿ ಜಿಲ್ಲಾಧಿಕಾರಿ ಅವರಿಂದ ಶಿಫಾರಸ್ಸು ಪಡೆದ ತೃತೀಯ ಲಿಂಗಿಯ ಎನ್ನುವ ಅಧಿಕೃತ ಪತ್ರ ಹೊಂದಿದ್ದು ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಬಹುದು.ಜೂನ್ ನಲ್ಲಿ ಅರ್ಜಿ ಪ್ರಕ್ರಿಯೆ ಬಿಡುಗಡೆ ಆಗಲಿದ್ದು ಜೂನ್ 30 ರಿಂದ ಜುಲೈ ತನಕ ಅರ್ಜಿ ಹಾಕಲು ಅವಕಾಶ ನೀಡಲಾಗುವುದು. ಬಳಿಕ ಜುಲೈ ನಿಂದ ಮಾಸಿಕ 2000 ದಂತೆ ತೃತೀಯ ಲಿಂಗಿಗಳಿಗೂ ಗೃಹಲಕ್ಷ್ಮೀ ಯೋಜನೆ (Gruha Lakshmi Yojana) ಯ ಹಣವನ್ನು ನೀಡಲಾಗುವುದು. ರಾಜ್ಯದಲ್ಲಿ 40,000 ಕ್ಕೂ ಅಧಿಕ ತೃತೀಯ ಲಿಂಗಿಗಳು ಇದ್ದಾರೆ ಹಾಗಾಗಿ ಅವರ ಅಭಿವೃದ್ಧಿಗೆ ಈ ಒಂದು ಸೌಲಭ್ಯ ಬಹಳ ಸಹಕಾರಿ ಆಗಲಿದೆ.

ಎಲ್ಲಿ ಅರ್ಜಿ ಸಿಗುತ್ತದೆ?

ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸಾಮಾನ್ಯ ರೀತಿಯಲ್ಲಿ ಇರಲಿದೆ. ಬೆಂಗಳೂರು ಒನ್, ಗ್ರಾಮಾಂತರ ಒನ್, ಕರ್ನಾಟಕ ಒನ್ ಹಾಗೂ ಸೈಬರ್ ಸೆಂಟರ್ ಮೂಲಕ ಅರ್ಜಿ ಹಾಕಬಹುದು. 1.54 ಕೋಟಿ ಮಂದಿ ಗೃಹಲಕ್ಷ್ಮೀ ಯೋಜನೆಗೆ ನೋಂದಾಯಿಸಿದ್ದು ಅದರಲ್ಲಿ 1.25 ಕೋಟಿ ಮಂದಿ ಗೃಹಲಕ್ಷ್ಮೀ ಯೋಜನೆ ಹಣ ಪಡೆದಿದ್ದು ಉಳಿದವರು GST ಹಾಗೂ ಆದಾಯ ತೆರಿಗೆ ಪಾವತಿ ಮಾಡುವ ಕಾರಣಕ್ಕೆ ಯೋಜನೆಗೆ ಅನರ್ಹರಾಗಿರುತ್ತಾರೆ. ಹಾಗಾಗಿ ಅಂತವರಿಗೆ ಹಣ ಬಂದಿಲ್ಲ ಎನ್ನಬಹುದು.

ಗೃಹಲಕ್ಷ್ಮೀ ಇನ್ನು ಮುಂದೆ ಬರುತ್ತಾ?

 

Image Source: cgap.org

 

ಗೃಹಲಕ್ಷ್ಮೀ ಹಣ (Gruha Lakshmi Money) ಲೋಕಸಭೆ ಚುನಾವಣೆಯ ಬಳಿಕ ಬರುತ್ತಾ ಇಲ್ಲವೆ ಎಂಬ ಅನುಮಾನ ಮೂಡಿತ್ತು ಆದರೆ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇರೊ ವರೆಗೂ ಗ್ಯಾರೆಂಟಿ ಅಷ್ಟು ಯೋಜನೆ ಜಾರಿ ಇರುತ್ತೆ ಎಂದು ಹೇಳಿದೆ. ಒಟ್ಟಾರೆಯಾಗಿ ತೃತೀಯ ಲಿಂಗಿಗಳಿಗೂ ಗ್ಯಾರೆಂಟಿ ಯೋಜನೆ ಜಾರಿಗೆ ತಂದಿದ್ದು ಇನ್ನು ಮುಂದೆ ಈ ಸೌಲಭ್ಯ ಅವರಿಗೂ ಆರ್ಥಿಕ ಸಹಕಾರ ವಾದಂತೆ ಕೂಡ ಆಗಲಿದೆ.

advertisement

Leave A Reply

Your email address will not be published.