Karnataka Times
Trending Stories, Viral News, Gossips & Everything in Kannada

Profitable Crop: 1 ಎಕರೆ ತೋಟದದಲ್ಲಿ ಈ ಕೃಷಿ ಮಾಡಿ 10 ಲಕ್ಷ ಗಳಿಸುತ್ತಿರುವ ರೈತ! ಅತಿ ಸುಲಭ ವಿಧಾನ

advertisement

ಭಾರತ ಕೃಷಿ ಪ್ರಧಾನ‌ ದೇಶವಾಗಿದೆ. ಹಾಗಾಗಿ ಇಲ್ಲಿ ರೈತರು ಕೃಷಿ ಮಾಡಿಯೇ ಬದುಕು ರೂಪಿಸುತ್ತಿದ್ದಾರೆ. ಅದರಲ್ಲೂ ಕರ್ನಾಟಕ ದಲ್ಲಿ ತೆಂಗು ,ಕಂಗು, ಸಾಮಾನ್ಯ ಕೃಷಿ. ಇದರ ಜೊತೆ ರೈತರು ವಿವಿಧ ತರಕಾರಿ ಹಣ್ಣು ಇತ್ಯಾದಿಗಳ ಕೃಷಿಯನ್ನು ಕೂಡ ಮಾಡ್ತಾ ಇದ್ದಾರೆ. ಹೌದು ಇಲ್ಲೊಬ್ಬ ರೈತರು ಹೊಸ ತಳಿಯ ಡ್ರ್ಯಾಗನ್ ಕೃಷಿ (Dragon Fruit Cultivation) ಮಾಡುವ ಮೂಲಕ‌ ಲಾಭ ಗಳಿಸಿದ್ದಾರೆ.

ಬೇಡಿಕೆ ಇರುವ ಹಣ್ಣು

ಇಂದು ರಾಷ್ಟೀಯ ಮತ್ತು ಅಂತರಾಷ್ಟೀಯ ಮಾರುಕಟ್ಟೆಯಲ್ಲಿ ಡ್ರ್ಯಾಗನ್‌ ಫ್ರೂಟ್ಸ್‌ಗೆ (Dragon Fruit) ಬಹಳಷ್ಟು ಬೇಡಿಕೆ ಕೂಡ ಇರುವುದನ್ನು ನಾವು ಕಾಣಬಹುದು. ಇಂದು ಈ ಹಣ್ಣನ್ನು ಇಷ್ಟ ಪಡುವವರು ಬಹಳಷ್ಟು ಮಂದಿ ಇದ್ದಾರೆ. ಹಾಗಾಗಿ ಎಲ್ಲ ಕಡೆ ಬೇಡಿಕೆ ಹೆಚ್ಚಿದೆ. ಮುಖ್ಯವಾಗಿ ಮಲೇಷ್ಯಾ, ಥೈಲ್ಯಾಂಡ್, ಫಿಲಿಪೈನ್ಸ್, ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಮತ್ತು ವಿಯೆಟ್ನಾಂ ದೇಶಗಳಲ್ಲಿ ಬೆಳೆಯಲಾಗುತ್ತೆ. ಆದರೇ ಇಂದು ನಮ್ಮ ಕರ್ನಾಟಕ ದಲ್ಲಿಯು ಈ ಕೃಷಿ (Dragon Fruit Cultivation) ಮಾಡಿ ಲಾಭಪಡೆದ ರೈತರು ಇದ್ದಾರೆ.

ಹೊಸ ತಳಿ ಯಾವುದು?

 

Image Source: Press Information Bureau

 

ರೈತರೊಬ್ಬರು ಈ ಹೊಸ ತಳಿಯನ್ನು ಬೆಳೆಸುವ ಮೂಲಕ ಹೆಚ್ಚು ಲಾಭ ಗಳಿಸಿದ್ದಾರೆ. ಗುಜರಾತ್ ನಲ್ಲಿ ವಿಯೆಟ್ನಾಂ ವಿಜ್ಞಾನಿ ಗಳ ಜೊತೆ ಚರ್ಚಿಸಿ ಯಾವ ಗಿಡ ಹಾಕಿದರೆ ಉತ್ತಮ ಎಂದು ತಿಳಿದು ಇದನ್ನು ಬೆಳೆಸಲಾಗಿದೆ. ರೈತರು ಕಡಿಮೆ ಜಾಗದಲ್ಲಿ ಹೆಚ್ಚು ಆದಾಯ ಗಳಿಸುವ‌ ಸೈನಾ ಸೂಪರ್ ಹೈಬ್ರೀಡ್ ಡ್ರಾಗ್ಯನ್ ಪ್ರೂಟ್ (Dragon Fruit) ತಳಿ ಇದು ಆಗಿದ್ದು ಒಂದು ಎಕರೆಗೆ ಇಪ್ಪತ್ತು ಟನ್ ಪಡೆಯಬಹುದು.ಎಂಟು ತಿಂಗಳಿನಲ್ಲಿ ಇದು ಇಳುವರಿ ಕೊಡಲಿದೆ. ಇತರ ತಳಿಗಳು 15 ರಿಂದ ರಿಂದ 18 ತಿಂಗಳ ಒಳಗೆ ಫಸಲು ನೀಡಲಿದೆ.

advertisement

ಉತ್ತಮ ಲಾಭ:

 

Image Source: YT-Crazy For Indian Food

 

ಕಡಿಮೆ ನೀರಿನಲ್ಲಿ ಈ ಬೆಳೆ ಬೆಳೆಯಬಹುದು. ಕೊಟ್ಟಿಗೆ ಗೊಬ್ಬರ, ಕೋಳಿ ಗೊಬ್ಬರ ಸೇರಿದಂತೆ ಅಗತ್ಯ ಪೋಷಕಾಂಶಗಳ ಗೊಬ್ಬರ ಹಾಕುವ ಮೂಲಕ ಕೃಷಿ ಮಾಡಬಹುದು.ಈಗ ಮಾರುಕಟ್ಟೆಯಲ್ಲಿ 1 ಕೆಜಿ ಡ್ರ್ಯಾಗನ್‌ ಪ್ರೂಟ್ಸ್‌ಗೆ (Dragon Fruit) 180 ರಿಂದ 250 ವರೆಗೆ ಇರಲಿದ್ದು ಇಂದು ಬೆಂಗಳೂರು, ಮಹಾರಾಷ್ಟ ಮುಂತಾದ ಕಡೆಗಳಲ್ಲಿಯು ಬೇಡಿಕೆ ಹೆಚ್ಚಿದೆ.

ನಿರ್ವಹಣೆ ಸುಲಭ:

ಇದನ್ನು ಮರಳು ಮಿಶ್ರಿತ, ಕಡಿಮೆ ನೀರಿರುವ ಮಣ್ಣಿನಲ್ಲಿ ಈ ಬೆಳೆ ಚೆನ್ನಾಗಿ ಬೆಳೆಯುತ್ತದೆ. ಒಮ್ಮೆ ನಿಟ್ಟರೆ ಈ ಗಿಡ ಸುಮಾರು 20 ವರ್ಷ ಹಣ್ಣು ನೀಡಲಿದೆ.ಈ ಹಣ್ಣಿಗೆ ಯಾವುದೇ ರೋಗಗಳು ಕಂಡುಬರುವುದಿಲ್ಲ. ಹಾಗಾಗಿ ನಿರ್ವಹಣೆ ಸುಲಭ, ಈ ಡ್ರ್ಯಾಗನ್ ಹಣ್ಣನ್ನು ಜಾಮ್, ಐಸ್ ಕ್ರೀಮ್, ಜೆಲ್ಲಿ ಉತ್ಪಾದನೆ, ವೈನ್ ಇತ್ಯಾದಿಗಳಲ್ಲಿ ಬಳಸಲಾಗುತ್ತದೆ. ಆರೋಗ್ಯಕ್ಕೂ ಈ ಹಣ್ಣು ತುಂಬಾ ಒಳ್ಳೆಯದು.ಈ ಹಣ್ಣಿನಲ್ಲಿ ಮೂರು ವಿಧಗಳಿದ್ದು ಕೆಂಪು ಡ್ರಾಗನ್ ಹಣ್ಣು, ಬಿಳಿ ಡ್ರಾಗನ್ ಹಣ್ಣು, ಹಳದಿ ಡ್ರಾಗನ್ ಹಣ್ಣು ಇರಲಿದ್ದು ಕೆಂಪು ಡ್ರಾಗನ್ ಹಣ್ಣಿಗೆ ಹೆಚ್ಚಿನ ಬೇಡಿಕೆ ಇರಲಿದೆ.

ಒಟ್ಟಿನಲ್ಲಿ ಈ ಕೃಷಿ ಮಾಡಿದರೆ ಒಂದು ಎಕರೆ ತೋಟದಲ್ಲಿ ಕನಿಷ್ಠ ಹತ್ತು ಲಕ್ಷ ಆದಾಯವಾದರೂ ಪಡೆಯ ಬಹುದು. ಹಾಗಾಗಿ ರೈತರು ಈ ಬೆಳೆಯನ್ನು ಬೆಳೆಸುವುದು ಸೂಕ್ತ.

advertisement

Leave A Reply

Your email address will not be published.