Karnataka Times
Trending Stories, Viral News, Gossips & Everything in Kannada

Post Office: 5 ವರ್ಷದ ಮಗು ಇರುವ ಎಲ್ಲರಿಗೂ ಹೊಸ ಸರ್ಕಾರದ ಗಿಫ್ಟ್! ಪೋಸ್ಟ ಆಫೀಸಿನಲ್ಲಿ ಅರ್ಜಿ ತುಂಬಿಸಿ

advertisement

ಇಂದು ಪ್ರತಿಯೊಬ್ಬ ವ್ಯಕ್ತಿಯು ಕೂಡ ಹೂಡಿಕೆಗೆ ಹೆಚ್ಚಿನ ಆದ್ಯತೆ ಯನ್ನು ತೋರುತ್ತಾನೆ. ಹೌದು ಇಂದು ದುಡಿದ ಸ್ವಲ್ಪ ಭಾಗವಾದರೂ ಹೂಡಿಕೆ ಮಾಡಿದರೆ ಮಾತ್ರ ಮುಂದಕ್ಕೆ ಸಹಾಯಕ ವಾಗಲಿದೆ.‌ ಹೌದು ಕಷ್ಟ ಅಂತ ಬಂದಾಗ ಸಹಾಯಕ ವಾಗುವುದೇ ಹೂಡಿಕೆಯ ಹಣ ಎಂದು ಹೇಳಬಹುದು‌. ಅದರಲ್ಲು ಮಕ್ಕಳ ಹೆಸರಿನಲ್ಲಿ ಹೂಡಿಕೆ ಮಾಡಲು ಕೂಡ ಅವಕಾಶ ಇರಲಿದ್ದು ಕಡಿಮೆ ಮೊತ್ತ ಹೂಡಿಕೆ ಮಾಡುವ ಮೂಲಕ ಹೆಚ್ಚು ಲಾಭ ಗಳಿಸಬಹುದು.

WhatsApp Join Now
Telegram Join Now

ಮಕ್ಕಳ ಭವಿಷ್ಯ ಅಭಿವೃದ್ಧಿ ಯಾಗಬೇಕು. ಯಾವುದೇ ಕಷ್ಟ ಮಕ್ಕಳಿಗೆ ಉಂಟಾಗಬಾರದು ಎಂಬುದೇ ಪಾಲಕರ ಆಶಯ ವಾಗಿರಲಿದೆ. ಹಾಗಾಗಿ ತಮ್ಮ ಮಕ್ಕಳಿಗೆ ಮುಂದಕ್ಕೆ ಒಳಿತಾಗಲಿ ಆರ್ಥಿಕವಾಗಿ ಸದೃಢ ವಾಗಿರಲಿ ಮಕ್ಕಳಿಗೆ ಯಾವುದೇ ಸಮಸ್ಯೆ ಉಂಟಾಗಬಾರದು ಎನ್ನುವ ನಿಟ್ಟಿನಲ್ಲಿ ಪೋಷಕರು ಮಕ್ಕಳ ಹೆಸರಿನಲ್ಲಿ ಹೂಡಿಕೆ ಮಾಡುತ್ತಾರೆ. ಇಂತಹ ಹೂಡಿಕೆ ದಾರರಿಗೆ ಅಂಚೆ ಕಚೇರಿ (Post Office) ಹೊಸ ದಾದ ಯೋಜನೆ ರೂಪಿಸಿದ್ದು ಈ ಯೋಜನೆಯ ಲಾಭ ಪಡೆಯಬಹುದಾಗಿದೆ.

Bal Jeevan Bima Yojana:

 

Image Source: Times Bull

 

ಮಕ್ಕಳ ಭದ್ರತೆ ಗಾಗಿ ಈ ಯೋಜನೆಯನ್ನು ಜಾರಿಗೆ ತಂದಿದೆ. ಇದ್ರಲ್ಲಿ ದಿನ ನಿತ್ಯ ಕನಿಷ್ಠ ಹೂಡಿಕೆ ಮಾಡುವ ಮೂಲಕವೇ ನೀವು ಮಕ್ಕಳ ಖಾತೆಯಲ್ಲಿ ಲಕ್ಷಾಂತರ ರೂಪಾಯಿ ಉಳಿತಾಯ ಮಾಡಬಹುದು. ಈ ಯೋಜನೆಯಲ್ಲಿ ಕನಿಷ್ಠ 6 ರೂಪಾಯಿ ಹೂಡಿಕೆ ಮಾಡಿದರೆ ಸಾಕು, ಗರಿಷ್ಠ 3,00,000 ವರೆಗೆ ಪಡೆಯಬಹುದಾಗಿದೆ. ಇದರಲ್ಲಿ ಮಗುವಿನ ಪೋಷಕರು 5 ವರ್ಷಗಳ ಯೋಜನೆ ಪಡೆಯುತ್ತಿದ್ದರೆ ಪ್ರತಿದಿನ 18 ರೂಪಾಯಿ, ಅದೇ 20 ವರ್ಷಗಳವರೆಗಿನ ಯೋಜನೆಯನ್ನು ಪಡೆಯಲು ದಿನಕ್ಕೆ 6 ರೂಪಾಯಿ ಪ್ರೀಮಿಯಂ ಪಾವತಿಸಬೇಕಾಗುತ್ತದೆ.

advertisement

ಈ ನಿಯಮ ಇರಲಿದೆ:

ಮಕ್ಕಳ ಜೀವ ವಿಮಾ ಯೋಜನೆಗೆ (Bal Jeevan Bima Yojana) ಅರ್ಜಿ ಹಾಕಲು ಪೋಷಕರ ವಯಸ್ಸು 45 ವರ್ಷಕ್ಕಿಂತ ಹೆಚ್ಚು ಇರಬಾರದು.‌ಈ ಯೋಜನೆಯಡಿ ಅರ್ಜಿ ಸಲ್ಲಿಸುವ ಮೊದಲು ಮಗುವಿನ ವಯಸ್ಸು ಕನಿಷ್ಠ 5 ವರ್ಷಗಳು ಮತ್ತು ಗರಿಷ್ಠ ವಯಸ್ಸು 20 ವರ್ಷಗಳು ಆಗಿರಬೇಕು. ನೀವು ಮಧ್ಯದಲ್ಲಿ ಪಾಲಿಸಿಯಿಂದ ಹಿಂದೆ ಸರಿಯಲು ಬಯಸಿದರೆ 5 ವರ್ಷಗಳ ನಂತರ ಸರೆಂಡರ್​ ಆಗುವ ಅವಕಾಶಕೂಡ ಇದೆ. ಪಾಲಿಸಿದಾರರು ಅಂದರೆ ಪೋಷಕರು ಮರಣಹೊಂದಿದರೆ, ಮಕ್ಕಳ ಪಾಲಿಸಿಯ ಪ್ರೀಮಿಯಂ ಅನ್ನು ಪಾವತಿಸುವಂತೆ ನಿಯಮ ಇಲ್ಲ. ಇದರ ಅವಧಿ ಮುಗಿದ ಮೇಲೆ ಪೂರ್ಣ ವಿಮಾ ಮೊತ್ತ ಮತ್ತು ಬೋನಸ್‌ ಹಣವನ್ನು ಮಕ್ಕಳಿಗೆ ನೀಡಲಾಗುತ್ತದೆ.

ಈ ದಾಖಲೆ ಬೇಕು:

ಈ ವಿಮೆ ಪಡೆಯಲು ಕೆಲವೊಂದು ದಾಖಲೆಗಳು ಬೇಕಿದ್ದು

  • ಆಧಾರ್ ಕಾರ್ಡ್
  • ರೇಷನ್ ಕಾರ್ಡ್
  • ವಯಸ್ಸಿನ ಪತ್ರ
  • ವಿಳಾಸ ಪುರಾವೆ
  • ಪೋಟೋ
  • ಪೋಷಕರ ಆಧಾರ್ ಕಾರ್ಡ್
  • ಮೆಟ್ರಿಕ್ಯುಲೇಷನ್ ಪ್ರಮಾಣಪತ್ರ ಇತ್ಯಾದಿ ಬೇಕು.

ಬಾಲ ಜೀವನ್ ಬೀಮಾ ಯೋಜನೆಗೆ ಅರ್ಜಿ ಹಾಕಲು ಹತ್ತಿರದ ಅಂಚೆ ಕಚೇರಿಗೆ ಹೋಗಿ ಅರ್ಜಿ ಪಡೆದು ಅದನ್ನು ಭರ್ತಿ ಮಾಡಿ ಅರ್ಜಿ ಹಾಕಿ.

advertisement

Leave A Reply

Your email address will not be published.