Karnataka Times
Trending Stories, Viral News, Gossips & Everything in Kannada

Gruha Lakshmi: ಗೃಹಲಕ್ಷ್ಮಿ ಯೋಜನೆ ಬಗ್ಗೆ ಮಹತ್ವದ ಅಪ್ಡೇಟ್ ಕೊಟ್ಟ ಸರ್ಕಾರ!

advertisement

ಗೃಹಲಕ್ಷ್ಮೀ ಯೋಜನೆ (Gruha Lakshmi Yojana) ರಾಜ್ಯದಲ್ಲಿ ಜಾರಿಗೆ ಬಂದಾಗಿನಿಂದಲೂ ಅನೇಕ ಮಹಿಳೆಯರಿಗೆ ಆರ್ಥಿಕ ಸಹಾಯಧನ ಸಿಕ್ಕಂತಾಗಿದೆ. ಗೃಹಲಕ್ಷ್ಮೀ ಯೋಜನೆ ಸಿಕ್ಕ ಕಾರಣಕ್ಕಾಗಿ ಮಹಿಳೆಯರಂತೂ ಹಣ ಉಳಿತಾಯ ಮಾಡಿ ಅಂತಹ ಹಣದಿಂದ ಬೇರೆ ಇತರ ವಸ್ತು ಖರೀದಿಯನ್ನು ಕೂಡ ಮಾಡುತ್ತಿದ್ದಾರೆ. ಈ ನಡುವೆ ಗೃಹಲಕ್ಷ್ಮೀ ಯೋಜನೆಯ ಬೆನ್ನಲ್ಲೆ ಪುರುಷರಿಗೂ ಗೃಹಲಕ್ಷ್ಮೀ ಯೋಜನೆ ಇದೆ ಎಂಬ ಬಗ್ಗೆ ಅನೇಕ ಗೊಂದಲ ಉಂಟಾಗುತ್ತಿದೆ. ಹಾಗಾದರೆ ನಿಜಕ್ಕೂ ಗೃಹಲಕ್ಷ್ಮೀ ಯೋಜನೆ (Gruha Lakshmi Yojana) ಪುರುಷರಿಗೆ ಕೂಡ ಸಿಗುತ್ತಾ ಎಂಬ ಪ್ರಶ್ನೆಗೆ ನಾವಿಂದು ನಿಮಗೆ ತಿಳಿಸಲಿದ್ದೇವೆ.

WhatsApp Join Now
Telegram Join Now

ಗೃಹಲಕ್ಷ್ಮೀ ಯೋಜನೆ ಜಾರಿಯಾದ ಮೇಲೆ ಮಹಿಳೆಯರಿಗೆ 2000 ಕಂತಿನ ಪ್ರಕಾರ ಹಣ ಬಿಡುಗಡೆ ಮಾಡಲಾಗುತ್ತಿದೆ ಅನೇಕ ಮಹಿಳೆಯರು ಈ ಹಣ ಸಂಗ್ರಹ ಮಾಡಿ ವಸ್ತುವಿನ ಖರೀದಿ, ಸ್ಕೀಂ ಇತರ ಯೋಜನೆಗೆ ಕೂಡ ತೊಡಗುತ್ತಿದ್ದರೆ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆ ಇರುವಂತೆ ಪುರುಷರಿಗೆ ಕೂಡ ಮಾಸಿಕ 2000 ರೂಪಾಯಿ ನೀಡಲಾಗುವುದು ಎಂದು ಎಲ್ಲ ಕಡೆ ವೀಡಿಯೋ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡಿದ್ದು ಈ ಬಗ್ಗೆ ಕೆಲ ಅಪ್ಡೇಟ್ ಮಾಹಿತಿ ಇಲ್ಲಿದೆ.

ಕಚೇರಿಗೆ ಭೇಟಿ:

ಸಾಮಾಜಿಕ ಜಾಲತಾಣದಲ್ಲಿ ಗಂಡಸರಿಗೂ ಕೂಡ ಗೃಹಲಕ್ಷ್ಮೀ ಯೋಜನೆ ನೀಡಲಾಗುತ್ತದೆ ಎಂದು ಅನೇಕ ಸುದ್ದಿ ಹರಿದಾಡುತ್ತಿದ್ದು ಗೃಹಲಕ್ಷ್ಮೀ ಯೋಜನೆ (Gruha Lakshmi Yojana) ನಮಗೂ ನೀಡಿ ಅದಕ್ಕೆ ನಮ್ಮ ಅರ್ಜಿ ಹಾಕಿ ಎಂದು ರಾಜ್ಯದ ಅನೇಕ ಕಡೆಗಳಲ್ಲಿ ಪುರುಷರು ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್ ಸೆಂಟರ್ ಗೆ ಭೇಟಿ ನೀಡಿ ಮನವಿಯನ್ನು ನೀಡುತ್ತಿದ್ದು ಪುರುಷರಿಗೆ ಕೂಡ ಗೃಹಲಕ್ಷ್ಮೀ ಯೋಜನೆ ಇದೆಯೇ ಎಂಬ ಬಗ್ಗೆ ಸಾಕಷ್ಟು ಗೊಂದಲವಾಗಿದೆ.

ಪುರುಷರಿಗೆ ಗೃಹಲಕ್ಷ್ಮೀ ಹಣ ಸಿಗುತ್ತಾ?

 

advertisement

Image Source: Star of Mysore

 

ಸದ್ಯ ಹರಿದಾಡುವ ಮಾಹಿತಿ ಪ್ರಕಾರ ಪುರುಷರಿಗೆ ರಾಜ್ಯದ ಗೃಹಲಕ್ಷ್ಮೀ ಹಣ (Gruha Lakshmi Money) ಬರುತ್ತದೆ ಎಂದು ಹೇಳಲಾಗಿತ್ತು ಆದರೆ ಅದು ಸುಳ್ಳು ಸುದ್ದಿ ಈ ಬಗ್ಗೆ ಕೇಂದ್ರ ಸರಕಾರ ಅಥವಾ ರಾಜ್ಯ ಸರಕಾರವು ಯಾವುದೇ ಹೊಸ ಯೋಜನೆ ಪುರುಷರಿಗೆ ಜಾರಿಗೊಳಿಸಿಲ್ಲ ಎಂದು ರಾಜ್ಯ ಸರಕಾರದ ಕಾಂಗ್ರೆಸ್ ವಕ್ತಾರರು ಇತ್ತೀಚೆಗಷ್ಟೇ ಮಾಧ್ಯಮದ ಮುಂದೆ ಬಹಿರಂಗ ಹೇಳಿಕೆ ನೀಡಿದ್ದಾರೆ.

ಪುರುಷರಿಗೆ ಯಾವ ಯೋಜನೆಯೂ ಇಲ್ಲವೇ?

 

Image Source: Pexels

 

ರಾಜ್ಯದಲ್ಲಿ ಜಾರಿಯಾದ ಪಂಚ ಯೋಜನೆಯಲ್ಲಿ ಯುವ ನಿಧಿ (Yuva Nidhi), ಅನ್ನಭಾಗ್ಯ (Anna Bhagya), ಗೃಹ ಜ್ಯೋತಿ ಯೋಜನೆ (Gruha Jyothi) ಯನ್ನು ಪುರುಷರು ಕೂಡ ಅರ್ಹರಾಗಿದ್ದಾರೆ ಆದರೆ ಶಕ್ತಿ ಯೋಜನೆ ಹಾಗೂ ಗೃಹಲಕ್ಷ್ಮೀ ಯೋಜನೆ ಮಹಿಳೆಯರಿಗೆ ಮಾತ್ರವೇ ಮೀಸಲಿಟ್ಟ ಯೋಜನೆಯಾಗಿದೆ. ಅದರ ಜೊತೆಗೆ ಹಿರಿಯ ನಾಗರಿಕ ಪುರುಷರಿಗೆ ಸರಕಾರಿ ಬಸ್ ಉಚಿತ ಸೇವೆ ಇತರ ಪಿಂಚಣಿ ಸೌಲಭ್ಯ ಇರಲಿದೆ. ಗೃಹಲಕ್ಷ್ಮೀ ಹೆಸರೆ ಹೇಳುವಂತೆ ಮಹಿಳೆಯರಿಗೆ ಮಾತ್ರವೇ ಹಣಕಾಸಿನ ಆರ್ಥಿಕ ನೆರವು ಇಲ್ಲಿ ನೀಡಲಾಗುತ್ತದೆ ಹಾಗಾಗಿ ಗೃಹಲಕ್ಷ್ಮೀ ಯೋಜನೆ ಅಡಿಯಲ್ಲಿ ಪುರುಷರಿಗೆ ಮಾಸಿಕ ಎರಡು ಸಾವಿರ ಮೊತ್ತ ನೀಡಲು ಸಾಧ್ಯ ವಿಲ್ಲ ಮುಂದಿನ ದಿನದಲ್ಲಿ ಪುರುಷರಿಗೆ ಪ್ರತ್ಯೇಕ ಆರ್ಥಿಕ ನೆರವಿನ ಯೋಜನೆ ಜಾರಿಯಾಗಲಿದೆಯೇ ಎಂದು ನಾವು ಕಾದು ನೋಡಬೇಕು.

advertisement

Leave A Reply

Your email address will not be published.