Karnataka Times
Trending Stories, Viral News, Gossips & Everything in Kannada

Gas Cylinder: ಗ್ಯಾಸ್‌ ಸಿಲೆಂಡರ್‌ ಖರೀದಿ ಮಾಡುವ ಗ್ರಾಹಕರಿಗೆ ಶುಭ ಸುದ್ದಿ, 300ರೂ. ಸಬ್ಸಿಡಿ ಹಣ ಬೇಕಾದ್ರೆ‌ ಹೀಗೆ ಮಾಡಿ

advertisement

ಇಂದು ಪ್ರತಿಯೊಬ್ಬರಿಗೂ ಮೂಲಭೂತ ಅವಶ್ಯಕ ವಸ್ತುಗಳ ಕೊರತೆ ಬಹಳಷ್ಟು ಜನರಿಗೆ ಇದೆ. ಅದರಲ್ಲೂ ದಿನನಿತ್ಯದ ವಸ್ತುಗಳ ಬೆಲೆಯಲ್ಲಿ ಬಹಳಷ್ಟು ಹೆಚ್ಚಾಗಿದ್ದು ಬಡ ವರ್ಗದ ಜನತೆಗೆ ಜೀವನ ಸಾಗಿಸಲು ಬಹಳ ಕಷ್ಟ ಎಂದೇ ಹೇಳಬಹುದು. ಅದರಲ್ಲಿ ಮುಖ್ಯವಾಗಿ ಬೇಕಾಗಿರುವುದು ಗ್ಯಾಸ್ ಸಿಲಿಂಡರ್ ವ್ಯವಸ್ಥೆ. ಇದಕ್ಕಾಗಿ ಸರಕಾರವು ಕೂಡ‌ ಅನಿಲದ ಮೇಲೆ ಸಬ್ಸಿಡಿ ಸೌಲಭ್ಯ ನೀಡ್ತಾ ಇದ್ದು, ನೀವಿದನ್ನು ಮತ್ತೆ ಪಡೆಯಬೇಕಾದರೆ ಈ ಕೆಲಸ ಮಾಡುವುದು ಕಡ್ಡಾಯ.

ಸಬ್ಸಿಡಿ ಹಣ

ಈಗಾಗಲೇ ಕೇಂದ್ರ ಸರಕಾರವು ಪ್ರತಿ ಗ್ಯಾಸ್ ಸಿಲಿಂಡರ್ (Gas Cylinder) ಮೇಲೆ 200 ರೂಪಾಯಿ ಸಬ್ಸಿಡಿ ನೀಡಲು ಮುಂದಾಗಿತ್ತು. ಇತ್ತೀಚೆಗೆ ಅಷ್ಟೆ ಉಜ್ವಲ ಯೋಜನೆಯ ಮೂಲಕ ಗ್ಯಾಸ್ ಸಿಲಿಂಡರ್ ಪಡೆದಿರುವ ಗ್ರಾಹಕರಿಗೆ 200 ರೂಪಾಯಿ ಸಿಗ್ತಾ ಇದ್ದ ಮೊತ್ತವನ್ನು‌ 300ರೂ ಗೆ ಏರಿಕೆ ಮಾಡಿದೆ.

ಬಡ ವರ್ಗದ ಮಹೀಳೆಯರಿಗೆ ಸಹಾಯ

ಗ್ರಾಮೀಣ ಮನೆಗಳಿಗೆ ಅಡುಗೆ ಅನಿಲವನ್ನು ಒದಗಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ಜಾರಿಗೊಳಿಸಿದ್ದು ಬಡತನ ರೇಖೆಗಿಂತ ಕೆಳಗಿರುವ ಬಿಪಿಎಲ್‌ , ಅಂತ್ಯೋದಯ ಅನ್ನ ಯೋಜನೆ ಅರಣ್ಯವಾಸಿಗಳು ಮತ್ತು ಇತರ ಅಗತ್ಯ ಫಲಾನುಭವಿಗಳಿಗೆ ಎಲ್‌ಪಿಜಿ ಸೌಲಭ್ಯ ನೀಡಲಾಗುತ್ತದೆ. ಈಗಾಗಲೇ ಉಜ್ವಲ ಯೋಜನೆಯ ಮೂಲಕ ಸುಮಾರು 75 ಲಕ್ಷ ಮಹಿಳೆಯರಿಗೆ ಗ್ಯಾಸ್ ಸಂಪರ್ಕ ಕಲ್ಪಿಸಲು ಕೇಂದ್ರ ಸರ್ಕಾರ ಅನುಮೋದನೆ ಸಹ ನೀಡಿದೆ.

advertisement

ಇ ಕೆವೈಸಿ ಮಾಡಿಸುವುದು ಕಡ್ಡಾಯ

ಈ ಸೌಲಭ್ಯ ವನ್ನು ಪಡೆಯಬೇಕಾದರೆ ಆಧಾರ್ ಕಾರ್ಡ್ ನೊಂದಿಗೆ‌‌ ಬಯೋಮೆಟ್ರಿಕ್ ಮಾಡಿಸಿ, ಇ-ಕೆವೈಸಿ ಮಾಡಿಸುವುದು ಕಡ್ಡಾಯ ವಾಗಿದೆ. ಇದಕ್ಕಾಗಿ ಡಿಸೆಂಬರ್ 31 ಕೊನೆಯ ದಿನ ನಿಗದಿ ಪಡಿಸಿದ್ದು, ಗ್ಯಾಸ್ ಸಬ್ಸಿಡಿ ಮುಂದುವರಿಯಬೇಕಾದರೆ ಡಿಸೆಂಬರ್ 31 ರೊಳಗೆ ಇ-ಕೆವೈಸಿ ಮಾಡಿಸಿಕೊಳ್ಳಿ.

ಮಾಹಿತಿ ನೀಡಿದೆ

ಇದೀಗ ಭಾರತ ಸರ್ಕಾರದ ತೈಲ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ನಿರ್ದೇಶನದ ಮೂಲಕ ಸಬ್ಸಿಡಿ ಪಡೆಯುವ ಗ್ರಾಹಕರಿಗೆ ಇ-ಕೆವೈಸಿ ಕಡ್ಡಾಯ ಎಂದು ಮಾಹಿತಿ ನೀಡಿದೆ.ಈ ಹಣ ಬಂದಿದೆಯಾ ಎಂದು ಚೆಕ್ ಮಾಡಲು ನೀವು https://www.mylpg.in ಈ ಲಿಂಕ್ ಮೂಲಕ ಸರ್ಚ್ ಮಾಡಬಹುದಾಗಿದೆ,

advertisement

Leave A Reply

Your email address will not be published.