Karnataka Times
Trending Stories, Viral News, Gossips & Everything in Kannada

RBI: 2000 ಮುಖಬೆಲೆಯ ನೋಟು ಬದಲಾವಣೆ ಬಗ್ಗೆ ಮಹತ್ವದ ಆದೇಶ ಹೊರಡಿಸಿದ ಆರ್‌ಬಿಐ!

advertisement

ಡಿಮಾನಿಟೈಜೇಷನ್ ಆದ ನಂತರ ಚಲಾವಣೆಗೆ ಬಂದಿದ್ದ 2000 ರೂಪಾಯಿಗಳ ನೋಟುಗಳು ಈಗ ಮತ್ತೆ ಚಲಾವಣೆಯಿಂದ ಹಿಂದಕ್ಕೆ ಹೋಗುತ್ತಿವೆ. ಈ ನೋಟುಗಳ ಬದಲಾವಣೆಗೆ RBI ಬಹಳಷ್ಟು ಕಾಲಾವಕಾಶವನ್ನು ನೀಡಿತ್ತು. ಆದರೆ ಅಲ್ಲಿಯ ತನಕವು ನೋಟು ಬದಲಾವಣೆ ಮಾಡಿದವರು ಈಗ RBI ನ 19 ಕಚೇರಿಗಳಿಗೆ ಹೋಗಿ ನೋಟನ್ನು ಬದಲಾವಣೆ ಮಾಡಿಕೊಳ್ಳಬಹುದಿತ್ತು. ಈ ಸೇವೆ ಜನವರಿ 12 ರಿಂದ 15 ರ ತನಕ ತಾತ್ಕಾಲಿಕವಾಗಿ ರದ್ದುಗೊಳ್ಳುತ್ತಿದ್ದು ಮತ್ತೆ ಮುಂದುವರಿಯಲಿದೆ ಎಂದು ಆರ್‌ಬಿಐ ಹೇಳಿಕೆ ನೀಡಿದೆ.

WhatsApp Join Now
Telegram Join Now

ರೂ.2000ಗಳ ನೋಟುಗಳನ್ನು ಬ್ಯಾಂಕುಗಳ ಬ್ರಾಂಚ್ ಗಳಲ್ಲಿ ಬದಲಾಯಿಸಲು 2023 ರ ಅಕ್ಟೋಬರ್ 7ರ ತನಕ ಆರ್ ಬಿ ಐ ಕಾಲಾವಕಾಶ ನೀಡಿತ್ತು. ಅಲ್ಲಿಯವರೆಗೆ ಬದಲಾವಣೆ ಮಾಡಲು ಆಗದವರಿಗೆ ಆರ್ ಬಿ ಐ ತನ್ನ 19 ಇಶ್ಯೂ ಆಫೀಸಸ್ ಗಳಲ್ಲಿ ಈ ನೋಟುಗಳನ್ನು ಬದಲಾಯಿಸಲು ಅನುವು ಮಾಡಿಕೊಟ್ಟಿತ್ತು. ಈಗ ತಾತ್ಕಾಲಿಕವಾಗಿ ಅಂದರೆ ಜನವರಿ 12, 13 ಮತ್ತು 14 ತಾರೀಕುಗಳಲ್ಲಿ ಈ ಸೇವೆ ಲಭ್ಯ ಇರುವುದಿಲ್ಲ 15 ಜನವರಿಯಿಂದ ಈ ಸೇವೆ ಪುನರಾವರಂಭಗೊಳ್ಳಲಿದೆ.

2018-19 ರ ಅವಧಿಯಲ್ಲಿ RBI ಹೊಸ Rs 2000 ನೋಟುಗಳನ್ನು ಪ್ರಿಂಟ್ ಮಾಡುವುದನ್ನು ನಿಲ್ಲಿಸಿದ್ದು ಇದಾದ ಮೇಲೆ ಬಹಳಷ್ಟು ಸಮಯ ಚಲಾವಣೆಯಲ್ಲಿದ್ದ ನೋಟುಗಳನ್ನು ಹಿಂಪಡೆಯಲು 7 ಅಕ್ಟೋಬರ್ 2023 ಕೊನೆಯ ದಿನಾಂಕ ಎಂದು ಘೋಷಿಸಲಾಗಿತ್ತು. ಈಗ ಕೇವಲ ಆರ್ ಬಿ ಐ ಕಚೇರಿಗಳಿಗೆ ಹೋಗಿ ಬದಲಾವಣೆಗೆ ಅವಕಾಶ ಇದೆ.

 

ಆರ್‌ಬಿಐ ಆಫೀಸ್ ಗಳಿಗೆ ಹೋಗಿ ಬದಲಾವಣೆ ಮಾಡುವುದಕ್ಕೆ ಯಾವುದಾದರೂ ಕೊನೆಯ ದಿನಾಂಕ ಇದೆಯೇ?

advertisement

ಇಲ್ಲ ಇಲ್ಲಿಯ ತನಕ ಆರ್ ಬಿ ಐ ತನ್ನ ಕಚೇರಿಗಳಿಗೆ ಬಂದು 2000 ನೋಟುಗಳನ್ನು ಬದಲಾವಣೆ ಮಾಡಲು ಯಾವುದೇ ಕೊನೆಯ ದಿನಾಂಕವನ್ನು ನಿಗದಿ ಮಾಡಿಲ್ಲ.

ಪೋಸ್ಟ್ ಮೂಲಕ ನೋಟು ಬದಲಾವಣೆ ಸಾಧ್ಯವೇ ?

ಹೌದು ಆರ್ ಬಿ ಐ ನ 19 ಆಫೀಸ್ ಗಳಿಗೆ ಇಂಡಿಯಾ ಪೋಸ್ಟ್ ಮೂಲಕ ರೂ.2000ಗಳ ನೋಟುಗಳನ್ನು ಕಳುಹಿಸಿದರೆ ನಿಮ್ಮ ಅಕೌಂಟ್ ಗೆ ಹಣ ವರ್ಗಾವಣೆ ಆಗುತ್ತದೆ.

ಎಷ್ಟು ನೋಟುಗಳನ್ನು ಬದಲಾಯಿಸಬಹುದು ?

ಒಂದು ಬಾರಿ ಬದಲಾವಣೆ ಮಾಡಬೇಕಾದರೆ 20,000 ಗಳ ಮೌಲ್ಯದ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಬಹುದು. ಇದೇ ತರಹ ಎಷ್ಟು ಸಲ ಬೇಕಾದರೂ ಬದಲಾವಣೆ ಮಾಡಬಹುದು.

RBI ನ 19 ಕಚೇರಿಗಳು ಯಾವುದು? ಹಾಗೂ ಎಲ್ಲಿದೆ ?

ಆರ್ ಬಿ ಐ ನ ನೋಟು ಬದಲಾವಣೆ ಸೌಲಭ್ಯ ಇರುವ ಕಚೇರಿಗಳ ಬಗ್ಗೆ ಆರ್ ಬಿ ಐ ವೆಬ್ ಸೈಟ್ ನಲ್ಲಿ ಮಾಹಿತಿ ಇದೆ. ಈ ಕೇಂದ್ರಗಳು ಯಾವುದು ಎಂದರೆ ಅಹಮದಾಬಾದ್, ಬೆಂಗಳೂರು, ಬೇಲಾಪುರ್, ಭೋಪಾಲ್, ಭುವನೇಶ್ವರ್, ಚಂಡಿಗಡ್, ಚೆನ್ನೈ, ಗುವಹಾಟಿ, ಹೈದರಾಬಾದ್, ಜೈಪುರ್, ಜಮ್ಮು. ಕಾನ್ಪುರ್, ಕೊಲ್ಕತ್ತಾ, ಲಕ್ನೌ, ಮುಂಬೈ, ನಾಗಪುರ್, ಹೊಸ ದೆಹಲಿ, ಪಟ್ನಾ ಮತ್ತು ತಿರುವನಂತಪುರಂ.

advertisement

Leave A Reply

Your email address will not be published.