Karnataka Times
Trending Stories, Viral News, Gossips & Everything in Kannada

Scam Alert: ಹೊಸ ಸ್ಕ್ಯಾಮ್ ಬಗ್ಗೆ ಸರ್ಕಾರದ ಎಚ್ಚರಿಕೆ; ಈ ನಂಬರ್ ಗೆ ಕರೆ ಮಾಡಿದ್ರೆ ನಿಮ್ಮ ಬ್ಯಾಂಕ್ ಖಾತೆ ಹಣ ಖಾಲಿ ಆಗಬಹುದು!

advertisement

ಇತ್ತೀಚಿನ ದಿನಗಳಲ್ಲಿ ನಾವು ಡಿಜಿಟಲ್ ಆಗಿ ಎಷ್ಟು ಮುಂದುವರೆದಿದ್ದೇವೆಯೋ ಅಷ್ಟೇ ಡಿಜಿಟಲ್ ಲೈಫ್ ಬಗ್ಗೆ ಭಯ ಆತಂಕ ಪಟ್ಟುಕೊಳ್ಳುವ ಪರಿಸ್ಥಿತಿಯು ನಿರ್ಮಾಣವಾಗಿದೆ. ನಾವು ಇಂದು ಬಹುತೇಕ ನಮ್ಮ ಎಲ್ಲಾ ಹಣಕಾಸಿನ ವ್ಯವಹಾರವನ್ನು ಆನ್ಲೈನ್ ಮೂಲಕವೇ ಮಾಡಿಕೊಳ್ಳುತ್ತೇವೆ. ಕೈಯಲ್ಲಿ ಸ್ಮಾರ್ಟ್ ಫೋನ್ ಇದ್ರೆ ನಮ್ಮ ಬ್ಯಾಂಕ್ ಗೆ ಸಂಬಂಧಪಟ್ಟ ಹಾಗೂ ಇತರ ಎಲ್ಲಾ ದಾಖಲೆಗಳು ಕೂಡ ಆ ಫೋನ್ ನಲ್ಲಿಯೇ ಇರುತ್ತದೆ. ಹೀಗಾಗಿ ಸ್ಕ್ಯಾಮರ್ ಗಳು ಸುಲಭವಾಗಿ ನಮ್ಮ ಡಾಟಾ ಗಳನ್ನು ಲಪಟಾಯಿಸಬಹುದು.

ಸೈಬರ್ ವಂಚನೆಯ ಬಗ್ಗೆ ಎಚ್ಚರ:

ಸೈಬರ್ ಪ್ರಕರಣ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಲೇ ಇದೆ. ಸೈಬರ್ ಪ್ರಕರಣದ ಬಗ್ಗೆ ಎಷ್ಟೇ ದೂರು ಕೊಟ್ಟರು ಇಲಾಖೆ ಎಷ್ಟೇ ಇದ್ದರೂ ಕೂಡ ಎಲ್ಲರ ಕಣ್ಣಿಗೆ ಮಣ್ಣೆರಚಿ ವಂಚನೆ ಮಾಡುವವರ ದಂಡು ಹೆಚ್ಚಾಗುತ್ತಲೇ ಇದೆ. ಈ ವಂಚನೆ ತಪ್ಪಿಸಲು ದೂರ ಸಂಪರ್ಕ ಇಲಾಖೆ ಸಾರ್ವಜನಿಕರಿಗೆ ಸಲಹೆಯನ್ನು ನೀಡಿದೆ.

advertisement

ಸಾರ್ವಜನಿಕರನ್ನು ಹೊಸ ರೀತಿಯಲ್ಲಿ ಸೈಬರ್ ಕ್ರಿಮಿನಲ್ ಗಳು ವಂಚಿಸುತ್ತಿದ್ದಾರೆ. ಅವರ ಜಾಲವನ್ನು ಹಿಡಿಯುವುದು ಸರಕಾರಕ್ಕೆ ಹಾಗೂ ಪೊಲೀಸರಿಗೆ ದೊಡ್ಡ ಸವಾಲಾಗಿದೆ ಇದರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎನ್ನುವ ಸೂಚನೆಯನ್ನು ದೂರಸಂಪರ್ಕ ಇಲಾಖೆ ಕೊಟ್ಟಿದೆ. *401# ಅನ್ನು ಡಯಲ್ ಮಾಡಿ ಅಪರಿಚಿತ ಸಂಖ್ಯೆಗೆ ಡಯಲ್ ಮಾಡಬೇಡಿ ಎಂದು ದೂರ ಸಂಪರ್ಕ ಇಲಾಖೆ ನಾಗರಿಕರಿಗೆ ಎಚ್ಚರಿಕೆಯನ್ನು ಕೊಡುತ್ತಿದೆ.

ಕರೆ ಫಾರ್ವರ್ಡ್ ಮಾಡುವ ಮೂಲಕ ವಂಚನೆ ಮಾಡುವವರ ಬಗ್ಗೆ ಜಾಗೃತಿ:

  • ವಂಚಿತ ಗುಂಪಿನ ಒಬ್ಬ ವ್ಯಕ್ತಿ ಟೆಲಿಕಾಂ ಗ್ರಾಹಕರಿಗೆ ಕರೆ ಮಾಡಬಹುದು ಅಲ್ಲಿಂದ, ತಾನು ಟೆಲಿಕಾಂ ಕಂಪನಿಯ ಅಥವಾ ನೀವು ಯಾವ ಸಿಮ್ ಬಳಸುತ್ತಿದ್ದೀರೋ ಆ ಕಂಪನಿಯ ಪ್ರತಿನಿಧಿ ಎಂದು ಹೇಳಿಕೊಳ್ಳುತ್ತಾನೆ.
  • ನಿಮ್ಮ ನೆಟ್ವರ್ಕ್ ಗೆ ಸಂಬಂಧಪಟ್ಟ ಸಮಸ್ಯೆಯನ್ನು ಪರಿಹರಿಸಿಕೊಡಲು ಒಂದು ನಿರ್ದಿಷ್ಟ ಕೋಡ್ ಅನ್ನು ಡಯಲ್ ಮಾಡಲು ಹೇಳಬಹುದು ಆ ಕೋಡ್ *401# ಆರಂಭವಾಗಬಹುದು.
  • ಡಯಲ್ ಮಾಡಿದ್ರೆ ಯಾವುದೇ ಸಮಸ್ಯೆ ಇಲ್ಲದೆ ನಿಮ್ಮ ಕರೆ ಇತರ ಸ್ಕ್ಯಾನರ್ ಗಳಿಗೆ ಫಾರ್ವರ್ಡ್ ಆಗುವ ಕ್ರಿಯೆ ಸಕ್ರಿಯಗೊಳ್ಳುತ್ತದೆ. ನಿಮ್ಮ ಎಲ್ಲಾ ಕರೆಗಳು ಕೂಡ ವಂಚಕ ವ್ಯಕ್ತಿಯ ಮೊಬೈಲ್ ಗೆ ರವಾನೆ ಆಗುತ್ತದೆ.
  • ಈ ರೀತಿ ನಿಮ್ಮ ಮೊಬೈಲ್ ಫೋನ್ನಲ್ಲಿ ಮಾತನಾಡಿದ ಎಲ್ಲಾ ಕರೆಗಳನ್ನು ಆತ ಕೇಳಿಸಿಕೊಳ್ಳಲು ಆರಂಭಿಸಿದ ನಂತರ ಯಾವುದಾದರೂ ಕರೆಯಲ್ಲಿ ಇರುವ ಸೀಕ್ರೆಟ್ ಅನ್ನು ತಿಳಿದುಕೊಂಡು ನಿಮ್ಮನ್ನು ಬ್ಲಾಕ್ ಮೇಲ್ ಮಾಡಲು ಆರಂಭಿಸಬಹುದು.
  • DOT ಹಿಡಿರುವ ಮಾಹಿತಿಯ ಪ್ರಕಾರ ಯಾವುದೇ ಟೆಲಿಕಾಂ ಸೇವಾ ಪೂರೈಕೆದಾರರು ಗ್ರಾಹಕರಿಗೆ ಈ ರೀತಿ ಕೋಡ್ ಡಯಲ್ ಮಾಡಲು ಹೇಳುವುದಿಲ್ಲ. ಹಾಗಾಗಿ ಯಾರೇ ಈ ರೀತಿ ಡಯಲ್ ಮಾಡಲು ಹೇಳಿದ್ರೆ ಮಾಡೋದಕ್ಕೆ ಹೋಗಬೇಡಿ.
  • ನಿಮ್ಮ ಮೊಬೈಲ್ ಫೋನ್ ನಲ್ಲಿ ಸೆಟ್ಟಿಂಗ್ ಅನ್ನು ಪರಿಶೀಲಿಸಿ, ಕರೆ ಫಾರ್ವರ್ಡ್ ಆಗಿದೆಯೇ ಎನ್ನುವುದನ್ನು ತಿಳಿದುಕೊಳ್ಳಿ. ಒಂದು ವೇಳೆ ಆಗಿದ್ದರೆ ಫಾರ್ವರ್ಡ್ ಅನ್ನು ನಿಲ್ಲಿಸಿ. ಇದರಿಂದ ವಂಚಕರು ನಿಮಗೆ ಮಾಡುವ ವಂಚನೆಯಿಂದ ನೀವು ತಪ್ಪಿಸಿಕೊಳ್ಳಬಹುದು.

advertisement

Leave A Reply

Your email address will not be published.