Karnataka Times
Trending Stories, Viral News, Gossips & Everything in Kannada

Second Hand Car: ಸೆಕೆಂಡ್ ಹ್ಯಾಂಡ್ ಕಾರು ಖರೀದಿ ಮಾಡೋದಿದ್ರೆ ಆರ್ ಸಿ ಮಾತ್ರವಲ್ಲ, ಈ ದಾಖಲೆಗಳನ್ನು ಕೂಡ ಬದಲಾಯಿಸಬೇಕು ಗೊತ್ತೇ!

advertisement

ತಮ್ಮ ಬಳಿ ಸ್ವಂತ ಗಾಡಿ ಇರಬೇಕು ಅಂತ ಬಯಸುವುದು ಸಹಜ. ಆದ್ರೆ ಎಲ್ಲರಿಗೂ ಹೊಸ ಗಾಡಿಯನ್ನು ಖರೀದಿ ಮಾಡುವಷ್ಟು ಹಣ ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ಸೆಕೆಂಡ್ ಹ್ಯಾಂಡ್ ಕಾರನ್ನು (Second Hand Car) ಖರೀದಿಸುವುದು ಸೂಕ್ತ.

ಮಧ್ಯಮ ವರ್ಗದ ಕುಟುಂಬದಲ್ಲಿ ವಾಸಿಸುವವರು ಅಥವಾ ಕೆಳಮಧ್ಯಮ ವರ್ಗದಲ್ಲಿ ಇರುವವರಿಗೆ ಹೊಸ ಕಾರು ಅಥವಾ ಬೈಕ ಖರೀದಿ ಮಾಡಲು ಸಾಧ್ಯವಾಗದೆ ಇರುವಾಗ ಉತ್ತಮ ಕಂಡಿಶನ್ ನಲ್ಲಿ ಇರುವ ಸೆಕೆಂಡ್ ಹ್ಯಾಂಡ್ ಗಾಡಿಯನ್ನು ಖರೀದಿ ಮಾಡಬಹುದು. ಇತ್ತೀಚಿನ ದಿನಗಳಲ್ಲಿ ಬೇರೆ ಬೇರೆ ಕಂಪನಿಗಳು ಬೇರೆ ಬೇರೆ ವೆಬ್ಸೈಟ್ ಗಳ ಮೂಲಕವೂ ಸೆಕೆಂಡ್ ಹ್ಯಾಂಡ್ ಗಾಡಿಗಳನ್ನು ಮಾರಾಟ ಮಾಡುತ್ತಾರೆ.

ಸೆಕೆಂಡ್ ಹ್ಯಾಂಡ್ ಕಾರು ಖರೀದಿ ಮಾಡುವಾಗ ಈ ವಿಚಾರಗಳನ್ನು ನೆನಪಿಟ್ಟುಕೊಳ್ಳಿ:

 

 

advertisement

ಹೌದು, ಸೆಕೆಂಡ್ ಹ್ಯಾಂಡ್ ಕಾರು (Second Hand Car) ಖರೀದಿ ಮಾಡಿದ್ರೆ ಸಾಕಷ್ಟು ಹಣವು ಉಳಿತಾಯವಾಗುತ್ತದೆ ಹೀಗೆ ಕಾರು ಖರೀದಿಸುವಾಗ ಆರ್ ಸಿ ಬದಲಾಯಿಸಬೇಕು ಎನ್ನುವುದು ನಿಮಗೆಲ್ಲ ತಿಳಿದಿರುತ್ತದೆ. ಅಂದ್ರೆ ಹಳೆಯ ಆರ್‌ಸಿ ಯಾರ ಹೆಸರಿನಲ್ಲಿ ಇರುತ್ತದೆಯೋ ಅದನ್ನ ಬದಲಾಯಿಸಿಕೊಂಡು ನಿಮ್ಮ ಹೆಸರಿಗೆ ಮಾಡಿಸಿಕೊಳ್ಳಬೇಕಾಗುತ್ತದೆ. ಇನ್ನು ಇದನ್ನ ಹೊರತುಪಡಿಸಿ ಇನ್ನೂ ಕೆಲವು ದಾಖಲೆಗಳನ್ನು ನಿಮ್ಮ ಹೆಸರಿನಲ್ಲಿ ಮಾಡಿಕೊಳ್ಳಬೇಕಾಗುತ್ತದೆ ಅದರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಸ್ವಂತ ವಾಹನ ಖರೀದಿ ಮಾಡುವ ಕನಸು ಹೊತ್ತಿದ್ದರೆ, ಸೆಕೆಂಡ್ ಹ್ಯಾಂಡ್ ಕಾರು ಖರೀದಿ ಮಾಡಿ ಆದ್ರೂ ತೃಪ್ತಿ ಪಟ್ಟುಕೊಳ್ಳಬಹುದು ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಉತ್ತಮ ಕಂಡಿಶನ್ ನಲ್ಲಿ ಇರುವ ವಾಹನಗಳ ಹೊಸ ವಾಹನಕ್ಕೂ ಸೆಕೆಂಡ್ ಹ್ಯಾಂಡ್ ವಾಹನಕ್ಕೂ ಹೆಚ್ಚಿನ ವ್ಯತ್ಯಾಸವೇನು ಇರುವುದಿಲ್ಲ. ಇನ್ನು ಈ ರೀತಿ ಸೆಕೆಂಡ್ ಹ್ಯಾಂಡ್ ವಾಹನ ಖರೀದಿಸಿದ ಮೇಲೆ ಆರ್‌ಸಿ ಬದಲಾಯಿಸಬೇಕು ಇದರ ಜೊತೆಗೆ ನಿಮ್ಮ ಹೆಸರಿನಲ್ಲಿ ವಿಮೆ ಮಾಡಿಸಬೇಕು ಇದು ಬಹಳ ಮುಖ್ಯವಾಗಿರುವ ವಿಚಾರ ಏಕೆಂದರೆ ಕಾರು ಅಪಘಾತವಾದಲ್ಲಿ ನೀವು ವಿಮೆ ಇಲ್ಲದೆ ಮಾಡಲು ಸಾಧ್ಯವಿಲ್ಲ.

ನೀವು ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸಿದರೆ ಆ ಕಾರೀನ ಸೇವಾ ಪುಸ್ತಕ ಅಂದರೆ ಸರ್ವಿಸ್ ಬುಕ್ ಅನ್ನು ಪರಿಶೀಲಿಸಬೇಕು ಯಾಕೆಂದರೆ ಇದರಿಂದ ಆ ಕಾರಿಗೆ ಯಾವ ಸರ್ವಿಸ್ ಮಾಡಿಸಲಾಗಿದೆ ಯಾವ ಪಾರ್ಟ್ ನಲ್ಲಿ ಸಮಸ್ಯೆ ಇತ್ತು ಎನ್ನುವುದನ್ನು ನೀವು ತಿಳಿದುಕೊಳ್ಳಬಹುದು. ಇದರ ಜೊತೆಗೆ ಸೆಕೆಂಡ್ ಹ್ಯಾಂಡ್ ಕಾರು ಖರೀದಿ ಮಾಡುವಾಗ ಆ ಕಾರಿನ ಮೇಲೆ ಹಿಂದಿನ ಮಾಲೀಕರು ಸಾಲ ತೆಗೆದುಕೊಂಡಿದ್ದರೆ? ಸಾಲ ತೆಗೆದುಕೊಂಡಿದ್ದರೆ ಅದನ್ನು ಮರುಪಾವತಿ ಮಾಡಲಾಗಿದೆಯೇ ಎನ್ನುವುದನ್ನು ಕೂಡ ಪರಿಶೀಲಿಸಬೇಕು. ಫಾರಂ ನಂಬರ್ 35 ಅನ್ನು ಪರಿಶೀಲಿಸಿದರೆ ನಿಮಗೆ ಈ ಮಾಹಿತಿ ಲಭ್ಯವಾಗುತ್ತದೆ.

ಬ್ಯಾಂಕ್ ಗಾಡಿ ಮಾಲೀಕರಿಗೆ ನಿರಪೇಕ್ಷಣ ಪ್ರಮಾಣ ಪತ್ರ ಅಂದ್ರೆ NOC ಯನ್ನು ನೀಡುತ್ತದೆ. ಫಾರ್ಮ್ ನಂಬರ್ 35. ಇದನ್ನು ನೀವು ಪರಿಶೀಲನೆ ಮಾಡಬೇಕು ನಂತರ ರಸ್ತೆ ತೆರಿಗೆ ಸ್ಲಿಪ್ ಕೂಡ ಚೆಕ್ ಮಾಡಿ. ಇಂದಿನ ಓನರ್ ರಸ್ತೆ ತೆರಿಗೆ ಪಾವತಿ ಮಾಡಿದ್ದಾರೆಯೇ ಇಲ್ಲವೇ ಎಂಬುದನ್ನ ತಿಳಿದುಕೊಳ್ಳಿ. ಈ ಎಲ್ಲಾ ಪ್ರಮುಖ ದಾಖಲೆಗಳನ್ನು ಪರಿಶೀಲಿಸಿ ನಂತರ ಸೆಕೆಂಡ್ ಹ್ಯಾಂಡ್ ಕಾರ್ ಖರೀದಿ ಮಾಡಿ, ಆಗ ಯಾವುದೇ ಸಮಸ್ಯೆ ಇಲ್ಲದೆ ಆ ಕಾರು ನಿಮ್ಮದಾಗಿಸಿಕೊಳ್ಳಬಹುದು.

advertisement

Leave A Reply

Your email address will not be published.